ಕಣ್ಣಿನ ರಕ್ಷಣೆ ಪ್ರತಿಯೊಬ್ಬರ ಕರ್ತವ್ಯ ಮಂಜುನಾಥ್ ಉಪ್ಪಾರ

Eye protection is everyone's duty Manjunath Uppara

ಕಣ್ಣಿನ ರಕ್ಷಣೆ ಪ್ರತಿಯೊಬ್ಬರ  ಕರ್ತವ್ಯ ಮಂಜುನಾಥ್ ಉಪ್ಪಾರ

ಬ್ಯಾಡಗಿ.15  ಭಗವಂತನು ನೀಡಿದ ಕಣ್ಣಿನ ಕಣ್ಣನ್ನು ಪ್ರತಿಯೊಬ್ಬರು ರಕ್ಷಣೆ ಮಾಡುವುದು ಕರ್ತವ್ಯ ಎಂದು ರೋಟರಿ ಕ್ಲಬ್ ನ ಅಸಿಸ್ಟೆಂಟ್ ಗೌರ್ನರ್ ಮಂಜುನಾಥ್ ಉಪ್ಪಾರ್ ಹೇಳಿದರುಪಟ್ಟಣದ ಕದರಮಂಡಲಗಿ ರಸ್ತೆಯಲ್ಲಿರುವ ಸಮಗ್ರ ಸಮಾಜ ಕಾರ್ಯ ನಿರ್ವಹಣಾ ಕೇಂದ್ರ ನೀಹ ಸದನದಲ್ಲಿ ರೋಟರಿ ಕ್ಲಬ್ ಬ್ಯಾಡಗಿ ಹಾಗೂ ಶಂಕರ ಕಣ್ಣಿನ ಆಸ್ಪತ್ರೆ ಶಿವಮೊಗ್ಗ ಮತ್ತು ಜಿಲ್ಲಾ ಅಂದತ್ವ ನಿವಾರಣ ಕಾರ್ಯಕ್ರಮದ ಅಡಿ ಉಚಿತ ನೇತ್ರ ತಪಾಸಣಾ ಶಸ್ತ್ರ ಚಿಕಿತ್ಸಾ ಇವರಕ್ಕೆ ಚಾಲನೆ ನೀಡಿ ಮಾತನಾಡಿದವರು ಹುಟ್ಟಿನಿಂದಲೇ ದೃಷ್ಟಿಯನ್ನು ಕಳೆದುಕೊಂಡಿರುವುದು ಪ್ರಪಂಚದ ಪ್ರಪಂಚವನ್ನು ನೋಡುವ ಭಾಗ್ಯದಿಂದ ವಂಚಿತರಾಗಿರುತ್ತಾರೆ. ಆದರೆ ಬಹಳಷ್ಟು ಮಂದಿ ತಮ್ಮ ನಿರ್ಲಕ್ಷತನದಿಂದ ಕಣ್ಣು ಕಳೆದುಕೊಂಡವರಿದ್ದಾರೆ ಆದಕಾರಣ ದೃಷ್ಟಿ ಇದ್ದವರು ಕಣ್ಣಿನ ರಕ್ಷಣೆಗೆ ಒತ್ತು ನೀಡುವುದು ಅವಶ್ಯಕ ಎಂದು ಹೇಳಿದರು.ತಪಾಸಣೆ ಶಿಬಿರದಲ್ಲಿ ಒಟ್ಟು 70 ಗಳನ್ನು ಶಸ್ತ್ರಚಿಕಿಸಿಗೆ ಶಿವಮೊಗ್ಗದ ಶಂಕರ್ ಕಣ್ಣಿನ ಆಸ್ಪತ್ರೆಗೆ ಕಳುಹಿಸಿಕೊಡಲಾಯಿತು.ಈ ಸಂದರ್ಭದಲ್ಲಿ ಸ್ನೇಹ ಸದನದ ಶಿಕ್ಷಕಿ ಸರಸ್ವತಿ ಮತ್ತು ಸಿಬ್ಬಂದಿ ವರ್ಗದವರು, ರೋಟರಿ ಸಂಸ್ಥೆಯ ಅಧ್ಯಕ್ಷ ಎಸ್ ಎಂ ಬೂದಿಹಾಳಮಠ ಮಾಜಿ ಅಧ್ಯಕ್ಷ ಅಸಿಸ್ಟೆಂಟ್ ಗವರ್ನರ್ ಮಂಜುನಾಥ ಉಪ್ಪಾರ, ಕಾರ್ಯದರ್ಶಿ ನಿರಂಜನ ಶೆಟ್ಟಿಹಳ್ಳಿ, ಸದಸ್ಯ ಕಿರಣ ಮಾಳೆನಹಳ್ಳಿ ಮತ್ತು ಶಿವಮೊಗ್ಗ ಶಂಕರ ಕಣ್ಣಿನ ಆಸ್ಪತ್ರೆಯ ವೈದ್ಯರಾದ ಡಾ.ಸುನೀಲ ಮಾಂಡ್ರೆ, ಡಾ.ಪ್ರಕಾಶ ಸಿಂಗಾಪುರ, ಸ್ಟಾಫ್ ನರ್ಸ್‌ ಪೃಥ್ವಿರಾಜ್, ಮೌನೇಶ ಬಡಿಗೇರ ಹಾಗೂ ಸಿಬ್ಬಂದಿ ವರ್ಗದವರು, ಉಪಸ್ಥಿತರಿದ್ದರು