ಚಿಕ್ಕಟ್ಟಿ ಕೃಷಿ ಪತ್ತಿನ ಸಂಘದ ಆಡಳಿತ ಮಂಡಳಿ ಚುನಾವಣೆ ಶಾಸಕ ಲಕ್ಷ್ಮಣ ಸವದಿ ಬೆಂಬಲಿತ ಅಭ್ಯರ್ಥಿಗಳು ಭರ್ಜರಿ ಗೆಲುವು

ಅಥಣಿ 12: ಚಿಕ್ಕಟ್ಟಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಆಡಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ ಮಾಜಿ ಡಿಸಿಎಮ್, ಅಥಣಿ ಶಾಸಕ ಲಕ್ಷ್ಮಣ ಸವದಿ ಬೆಂಬಲಿತ ಅಭ್ಯರ್ಥಿಗಳು ಭರ್ಜರಿ ಗೆಲುವು ಸಾಧಿಸುವ ಮೂಲಕ ಅಧಿಕಾರದ ಚುಕ್ಕಾಣಿ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.  

     ಆಡಳಿತ ಮಂಡಳಿಗೆ 12 ಸ್ಥಾನಗಳಲ್ಲಿ 1 ಸ್ಥಾನಕ್ಕೆ ಅವಿರೋಧ ಆಯ್ಕೆ ನಡೆದಿತ್ತು. ಇನ್ನುಳಿದ 11 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ 9 ಸ್ಥಾನಗಳಲ್ಲಿ ಲಕ್ಚ್ಮಣ ಸವದಿ ಬೆಂಬಲಿತ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ಲಕ್ಷ್ಮಣ ಸವದಿ ಪೆನಲ್ನ ಪ್ರಮುಖ ರಮೇಶ್ ಕಾಗಲಿ, ಚಿಕ್ಕಟ್ಟಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಕ್ಕೆ ನಡೆದ ಚುನಾವಣೆಯಲ್ಲಿ ನಮ್ಮ ಪೆನಲ್ನ ಅಭ್ಯರ್ಥಿಗಳು ಭರ್ಜರಿ ಗೆಲುವು ಸಾಧಿಸಿದ್ದು, ನಮ್ಮ ಅಧಿಕಾರವಧಿಯಲ್ಲಿ ಎಲ್ಲ ಸಾಲದ ಸೌಲಭ್ಯಗಳನ್ನು ಸಂಘದ ಸದಸ್ಯರಿಗೆ ತಲುಪಿಸುವ ಉದ್ದೇಶ ತಮ್ನದಾಗಿದೆ ಎಂದು ಹೇಳಿದರು. ಚುನಾವಣೆಯಲ್ಲಿ ಗೆಲುವು ಸಾಧಿಸಲು ಮತದಾರ ಬಂಧುಗಳಿಗೆ ಮತ್ತು ಅಥಣಿ ಗ್ರಾಮೀಣ ಭಾಗದ ಸಹಕಾರಿ ಧುರೀಣರಿಗೆ ಕೃತಜ್ಞತೆಗಳನ್ನು ಸಲ್ಲಿಸಿದರು. 

       ಸಾಮಾನ್ಯ ಸಾಲಗಾರ ಕ್ಷೇತ್ರದಿಂದ ಕಾಶಪ್ಪಾ ರಾಚಪ್ಪಾ ಚನ್ನವೀರ, ಚನ್ನಬಸಪ್ಪ ಶಂಕರ ಹುಲಗಬಾಳ, ಮಹಾಂತೇಶ್ ಸಂಗಪ್ಪಾ ಮುಳ್ಳಟ್ಟಿ,  ಸಿದರಾಯ ಬಸಗೌಡ ಮುಳ್ಳಟ್ಟಿ, ಸಾಮಾನ್ಯ ಮಹಿಳಾ ಕ್ಷೇತ್ರದಿಂದ ಜಕ್ಕವ್ವಾ ಸುರೇಶ ಪಡನಾಡ, ಹಿಂದುಳಿದ ಅ ವರ್ಗದಿಂದ ರಮೇಶ್ ಭೀಮಣ್ಣಾ ಕಾಗಲೆ, ಹಿಂದುಳಿದ ಬ ವರ್ಗದಿಂದ ಚಿದಾನಂದ ಈರಪ್ಪಾ ಹಿಪ್ಪರಗಿ, ಪ.ಜಾ ಕ್ಷೇತ್ರದಿಂದ ಕಾಶಪ್ಪಾ ಜಮಖಂಡಿ,  

ಎಸ್.ಟಿ  ಕ್ಷೇತ್ರದಿಂದ ಶಿವಾನಂದ ಅಪ್ಪಾಸಾಬ ಬುರುಡ (ಅವಿರೋಧ ಆಯ್ಕೆ) ಬಹುಮತದಿಂದ ಆಯ್ಕೆಯಾಗಿದ್ದಾರೆ. 

     ಚುನಾವಣೆ ಯಶಸ್ಸಿಗೆ ಹಣಮಂತ ಕಾಲುವೆ, ಶಿವಾನಂದ ದಿವಾನಮಳ, ಅಬ್ದುಲ್ ಹಜಿಜ ಮುಲ್ಲಾ, ಅಮನುಲ್ಲಾ ಮುಲ್ಲಾ, ಮಲ್ಲಿಕಾರ್ಜುನ ಹಳ್ಳದಮಳ, ಶ್ರೀಶೈಲ ಹಳ್ಳದಮಳ, ತಿಪ್ಪಣ್ಣ ಭಜಂತ್ರಿ, ಸಂಗಪ್ಪಾ ಮಾಯನಟ್ಟಿ, ಮಲ್ಲಿಕಾರ್ಜುನ ಬುಟಾಳಿ, ಆಕಾಶ ಬುಟಾಳಿ, ರಾಮನಗೌಡ ಪಾಟೀಲ, ಸುರೇಶ ಮಾಯಣ್ಣವರ, ಬೀರಪ್ಪಾ ಯಂಕಚ್ಚಿ, ರಾವಸಾಹೇಬ ಕರಬಸಪ್ಪಗೊಳ, ನಜೀರ ಜಮಾದಾರ, ರಾವಸಾಬ ಐಹೊಳೆ, ಬಸಗೌಡ ಮುಳ್ಳಟ್ಟಿ ಶ್ರಮಿಸಿದ್ದಾರೆ ಎಂದು ರಮೇಶ ಕಾಗಲಿ ತಿಳಿಸಿದ್ದಾರೆ