ದುರ್ಗಾದೇವಿ ಶಿಕ್ಷಣ ಸಮಿತಿಯ ವಾರ್ಷಿಕ ಕ್ರೀಡಾಕೂಟ ಮಕ್ಕಳು ಅರಳುವ ಪ್ರತಿಭೆಗಳು ಅವರನ್ನು ಗುರುತಿಸುವ ಕೆಲಸವಾಗಬೇಕು : ವಿಜಯಕುಮಾರ ಬಣಕಾರ
ಗದಗ 28: ಪ್ರತಿಯೊಬ್ಬರಲ್ಲಿಯೂ ಒಂದು ಪ್ರತಿಭೆ ಇದ್ದೆ ಇರುತ್ತದೆ ಅದನ್ನು ಅನಾವರಣಗೊಳಿಸಲು ಸೂಕ್ತ ಪ್ರೋತ್ಸಾಹ ಅಗತ್ಯವಾಗಿದೆ ಎಂದು ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತಿನ ಗದಗ ಜಿಲ್ಲಾಧ್ಯಕ್ಷ ವಿಜಯಕುಮಾರ ಬಣಕಾರ ಅವರು ಹೇಳಿದರು.
ಅವರು ನಗರದ ಗಂಗಾಪೂರ ಪೇಟೆಯಲ್ಲಿರುವ ಶ್ರೀ ದುರ್ಗಾದೇವಿ ಶಿಕ್ಷಣ ಸಮಿತಿಯ 2024-25 ನೇ ಸಾಲಿನ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿ, ಮಕ್ಕಳನ್ನು ಮಾರ್ಕ್ಸ್ ಮಶೀನವನ್ನಾಗಿ ಮಾಡದೆ ಅವರಲ್ಲಿರುವ ಪ್ರತಿಭೆಯನ್ನು ಗುರುತಿಸುವ ಕೆಲಸವಾಗಬೇಕು. ಶಿಕ್ಷಣ ಬುದ್ದಿಗೆ ಸಾಧನವಾದರೆ, ಕ್ರೀಡಾ ಚಟುವಟಿಕೆಗಳು ದೇಹವನ್ನು ಸದೃಡಗೊಳಿಸುತ್ತವೆ. ಅದ್ದರಿಂದ ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆಗಳಲ್ಲಿ ಮಕ್ಕಳು ಪಾಲ್ಗೊಳ್ಳುವಂತೆ ಪಾಲಕರು ಪ್ರೋತ್ಸಾಹಿಸಬೇಕು ಎಂದು ಹೇಳಿದರು.
ವಿಕಲಚೇತನರ ಕ್ಷೇತ್ರದಲ್ಲಿ ಸಾಧನೆ ಮಾಡಿದ ವಿಜಯಕುಮಾರ ಬಣಕಾರ ಅವರಿಗೆ ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಇಲಾಖೆ ವತಿಯಿಂದ ರಾಜ್ಯಮಟ್ಟದ ಪ್ರಶಸ್ತಿ ಪಡೆದ ಹಿನ್ನಲೆಯಲ್ಲಿ ಅವರನ್ನು ದುರ್ಗಾದೇವಿ ಶಿಕ್ಷಣ ಸಮಿತಿಯಿಂದ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಶ್ರೀ ದುರ್ಗಾದೇವಿ ಶಿಕ್ಷಣ ಸಮಿತಿಯ ನಿರ್ದೇಶಕಿ ಕವಿತಾ ಇಮರಾಪೂರ, ಸಲಹಾ ಸಮಿತಿಯ ಸದಸ್ಯರಾದ ಮುತ್ತು ಜಡಿ, ಮುಖ್ಯೋಪಾಧ್ಯಾಯನಿ ಎಚ್.ಎಂ.ನದಾಫ್, ಮಂಜುಳಾ ಹಿಡ್ಕಿಮಠ, ರೇಖಾ ಅಂಗಡಿ, ಸುಧಾ ತಿರಕಣ್ಣವರ, ವಂದನಾ ಕಲ್ಮನಿ, ಮಂಜುಳಾ ದಾಸರ, ರೂಪಾ ಟೆಂಗಿನಕಾಯಿ, ಸಿಬ್ಬಂದಿಗಳಾದ ಲಕ್ಷ್ಮೀ ಕಮಡೊಳ್ಳಿ, ಸೈನಾಜಬಾನು ರೋಣ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.