ಡಾ. ತಾರಾ ಬಿ.ಎನ್. ಅವರಿಗೆ ಕಿತ್ತೂರು ರಾಣಿ ಚನ್ನಮ್ಮ ಪ್ರಶಸ್ತಿ
ಗದಗ 19 : ವಿಜಯಪುರದ ಕರ್ನಾಟಕ ಮಹಿಳಾ ವಿಶ್ವವಿದ್ಯಾಲಯದಿಂದ ಕರ್ನಾಟಕ ಚರಿತ್ರೆಯಲ್ಲಿ ಮಹಿಳಾ ಆಡಳಿತಗಾರರು ಎಂಬ ವಿಷಯದ ಕುರಿತು ಪಿಎಚ್‌ಡಿ ಪಡೆದಿರುವ ಡಾ. ತಾರಾ ಬಿ.ಎನ್. ವಿಚಾರ ತರಂಗ, ಮೌನಗೀತೆ, ಸಾಮಾಜಿಕ ಸುಧಾರಣೆಗಳು ಮತ್ತು ಭಾರತೀಯ ರಾಷ್ಟ್ರೀಯ ಚಳುವಳಿಗಳು, ಅಧುನಿಕ ಭಾರತದ ಇತಿಹಾಸ, ಸಮಕಾಲೀನ ಭಾರತ ಮತ್ತು ಸಮಕಾಲೀನ ಕರ್ನಾಟಕ, ಭಾರತದ ಇತಿಹಾಸ- ಆರಂಭ ಕಾಲದಿಂದ ಶಾತವಾಹನರವರೆಗೆ ಎಂಬ ಗ್ರಂಥಗಳನ್ನು ರಚಿಸಿದ್ದಾರೆ. 2007-08 ಹಾಗೂ 2020-21 ಇವರು ಎನ್‌ಎಸ್‌ಎಸ್ ಅತ್ಯುತ್ತಮ ಕಾರ್ಯಕ್ರಮ ಅಧಿಕಾರಿಯಂದು ಪರಿಗಣಿಸಿ ರಾಜ್ಯ ಸರಕಾರವು ಇವರಿಗೆ ಪ್ರಶಸ್ತಿ ನೀಡಿ ಗೌರವಿಸಿದೆ. ಇವರ ಸಂಶೋಧನೆ, ಅಧ್ಯಯನ ಮತ್ತು ಎನ್‌ಎಸ್‌ಎಸ್ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಅನೇಕ ಕಾರ್ಯಗಳನ್ನು ನಿರ್ವಹಿಸಿರುವದನ್ನು ಗುರುತಿಸಿ ಕರ್ನಾಟಕ ಇತಿಹಾಸ ಪರಿಷತ್ತು ಕಿತ್ತೂರು ರಾಣಿ ಚನ್ನಮ್ಮ ಪ್ರಶಸ್ತಿ ನೀಡಿ ಗೌರವಿಸಿದೆ ಎಂದು ಬೆಂಗಳೂರಿನ ಕರ್ನಾಟಕ ಇತಿಹಾಸ ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ಪ್ರೋ. ಈರಣ್ಣ ಪತ್ತಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.