ಡಾ.ಬಿ.ಕೆ.ಸುಂದರ್ ಅವರಿಗೆ ರಾಘವೇಂದ್ರನುಗೃಹ ಪ್ರಶಸ್ತಿ ಪ್ರಧಾನ
Dr. B.K. Sundar to be conferred with Raghavendranugriha Award
ಬಳ್ಳಾರಿ 28 : ರಾಘವೇಂದ್ರ ಸ್ವಾಮಿಗಳವರ ವರ್ಧಂತಿ ಮಹೋತ್ಸವ ಹಾಗೂ 431ನೇ ಪಟ್ಟಾಭಿಷೇಕ ಮಹೋತ್ಸವ ಹಿನ್ನೆಲೆ ನಗರದ ಹೆಸರಾಂತ ವೈದ್ಯ ಡಾ.ಬಿ.ಕೆ.ಸುಂದರ್ ಅವರಿಗೆ, ಶ್ರೀರಾಘವೇಂದ್ರನುಗ್ರಹ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಪವಿತ್ರ ಧಾರ್ಮಿಕ ಕ್ಷೇತ್ರ ಮಂತ್ರಾಲಯದಲ್ಲಿ ಆಯೋಜಿಸಿದ್ದ ಸುವರ್ಣ ಮಹೋತ್ಸವದಲ್ಲಿ ಶ್ರೀಮಠದ ಶ್ರೀ ಸುಬುಧೇಂದ್ರ ತೀರ್ಥ ಸ್ವಾಮೀಜಿ ಅವರು, ಬಳ್ಳಾರಿಯ ಡಾ.ಬಿ.ಕೆ.ಸುಂದರ್ ಅವರಿಗೆ, ಶ್ರೀರಾಘವೇಂದ್ರನುಗ್ರಹ ಪ್ರಶಸ್ತಿ ನೀಡಿ, ದಂಪತಿಗಳನ್ನು ಸನ್ಮಾನಿಸಿ ಗೌರವಿಸಿದರು. ಈ ಸಂದರ್ಭದಲ್ಲಿ ಶ್ರೀಮಠದ ವಿವಿಧ ಪಂಡಿತರು, ವಿವಿಧ ಗಣ್ಯರು ಇತರರು ಉಪಸ್ಥಿತರಿದ್ದರು. ನಂತರ ಡಾ.ಬಿ.ಕೆ.ಸುಂದರ್ ಅವರು ಮಾತನಾಡಿ, ರಾಘವೇಂದ್ರ ಸ್ವಾಮಿಗಳವರ ವರ್ಧಂತಿ ಮಹೋತ್ಸವ ಹಾಗೂ 431ನೇ ಪಟ್ಟಾಭಿಷೇಕ ಮಹೋತ್ಸವ ಹಿನ್ನೆಲೆಯಲ್ಲಿ ವರ್ಷ ಮಠದಿಂದ ಕೊಡಲಾಗುವ ರಾಘವೇಂದ್ರನುಗ್ರಹ ಪ್ರಶಸ್ತಿಯನ್ನು ಈ ಬಾರಿ ನಮ್ಮನ್ನು ಗುರುತಿಸಿ ಮಠದ ಸ್ವಾಮಿಗಳು ಪ್ರಧಾನ ಮಾಡಿರುವುದು ಅತ್ಯಂತ ಸಂತಸ ಮೂಡಿಸಿದೆ. ಕಲಿಯುಗದ ಕಾಮಧೇನು, ಕಲ್ಪವೃಕ್ಷ ಶ್ರೀಗುರುರಾಯರು ಎಲ್ಲರಿಗೂ ಒಳಿತನ್ನು ಮಾಡಲಿ, ಸೇವೆಯನ್ನು ಮಾಡುವ ಸೌಭಾಗ್ಯ ಕಲ್ಪಿಸಲಿ ಎಂದು ಪ್ರಾರ್ಥಿಸುವೆ ಎಂದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 