ಸಿಲಿಂಡರ್ ಸೋರಿಕೆ ಅವಘಡದಿಂದ ಮೃತಪಟ್ಟ ಕುಟುಂಭಸ್ಥರಿಗೆ ವೈಯಕ್ತಿಕ ಸಹಾಯದನ ವಿತರಣೆ
Distribution of personal assistance to the families of those who died in the cylinder leak accident
ತಾಳಿಕೋಟೆ 08 : ಪಟ್ಟಣದಲ್ಲಿ ಇತ್ತೀಚಗೆ ಕುಂಭಾರ ಎಂಬವರ ಹೋಟೆಲನಲ್ಲಿ ಸಿಲಿಂಡರ್ ಸೋರಿಕೆಯಿಂದ ಸಂಬವಿಸಿದ ಅವಘಡದಿಂದ ಚೀಕೀತ್ಸೆ ಫಲಕಾರಿಯಾಗದೇ ಮೃತಪಟ್ಟ ಇಬ್ಬರು ಕುಂಟುಬಂಸ್ಥರಿಗೆ ಪಟ್ಟಣದ ಕಾಂಗ್ರೇಸ್ ಮುಖಂಡರು ಸಮಾಜ ಸೇವಕರಾದ ನಿರಂಜಶಾ ಗೈಬೂಶ್ಯಾ ಮಕಾಂದಾರ ಅವರು ತಲಾ 50 ಸಾವಿರ ರೂ. ಸಹಾಯದನವನ್ನು ರವಿವಾರರಂದು ನೀಡಿದರು.ಈ ಸಮಯದಲ್ಲಿ ಮುಖಂಡರಾದ ಮೋದಿನಸಾಬ ನಗಾರ್ಚಿ ಅವರು ಮಾತನಾಡಿ ಹೋಟೆಲನಲ್ಲಿ ಚಹಾ ಕುಡಿಯಲೆಂದು ತೆರಳಿದ್ದ ಶಕೀಲ ಕುಂಭಾರವಾಡಿ, ಮತ್ತು ಬಸೀರ ಕಡದರಾಳ ಎಂಬರಿಗೆ ಗ್ಯಾಸ್ನಲ್ಲಿ ಸೋರಿಕೆ ಉಂಟಾಗಿ ಸ್ಪೋಟತೆ ಸಂಬವಿಸಿ ಗಾಯಗೊಂಡಿದ್ದರು.
ಅವರನ್ನು ಹೆಚ್ಚಿನ ಚೀಕೀತ್ಸೆಗಾಗಿ ವಿಜಯಪುರ ಆಸ್ಪತ್ರೆಗೆ ದಾಖಲಿಸಲಾಗಿದ್ದರೂ ಕೂಡಾ ಚೀಕೀತ್ಸೆ ಫಲಕಾರಿಯಾಗದೇ ಮೃತಪಟ್ಟಿದರಿಂದ ಅವರ ಎರಡು ಕುಟುಂಭಸ್ಥರು ಅತ್ಯಂತ ಬಡತನದಲ್ಲಿರುವದರಿಂದ ಅವರ ಮಕ್ಕಳ ಶಿಕ್ಷಣಕ್ಕಾಗಿ ಕುಟುಂಭದ ಜೀವನ ನಿರ್ವಹಣೆಯ ಅನುಕೂಲಕ್ಕಾಗಿ ಸಮಾಜ ಸೇವಕ ಕಾಂಗ್ರೇಸ್ ಮುಖಂಡ ನಿರಂಜನಶಾ ಮಕಾಂದಾರ ಅವರು ವೈಯಕ್ತಿಕವಾಗಿ ಇಬ್ಬರು ಮೃತಪಟ್ಟ ಮನೆಗಳಿಗೆ ಬೆಟ್ಟಿ ನೀಡಿ ವೈಯಕ್ತಿಕವಾಗಿ ತಲಾ 50 ಸಾವಿರ ರೂ. ಸಹಾಯದನವನ್ನು ನೀಡಿದ್ದಾರೆಂದ ಅವರು ಸಮಾಜದಲ್ಲಿ ಸಾಕಷ್ಟು ಜನರು ಶ್ರೀಮಂತರಿದ್ದರೂ ಕೂಡಾ ಕೊಡುವ ಮನಸ್ಸುಗಳ ಕೊರತೆ ಬಹಳಷ್ಟು ಕಾಡುತ್ತಿರುವದು ಶೋಚನೀಯ ಸಂಗತಿಯಾಗಿದೆ ಸೇಂಟ್ರಿಂಗ್ ಕೆಲಸದ ಮೂಲಕ ಜೀವನವನ್ನು ನಿರ್ವಹಣೆ ಮಾಡುತ್ತಾ ಸಾಗಿದ್ದ ಶಕೀಲ ಕುಂಭಾರವಾಡಿ ಮತ್ತು ಬಸೀರ ಕಡದರಾಳ ಅವರು ಒಳ್ಳೆಯ ಮನಸ್ಸುಗಳುಳ್ಳ ವ್ಯಕ್ತಿಗಳಾಗಿದ್ದರು ಅವರ ಅಗಲಿಕೆಯ ನೋವು ಬರಿಸುವ ಶಕ್ತಿ ಕುಟುಂಭಸ್ಥರಿಗೆ ದೇವರು ಕರುಣಿಸಲಿ ಎಂದರು.
ಸಮಾಜ ಸೇವಕ ನಿರಂಜನಶಾ ಮಕಾಂದಾರ ಅವರು ಮಾತನಾಡಿ ಸೇಂಟ್ರಿಂಗ್ ಕೆಲಸದ ಮೂಲಕ ಜೀವನವನ್ನು ನಿರ್ವಣೆ ಮಾಡುತ್ತಾ ಸಾಗಿದ್ದ ಶಕೀಲ ಕುಂಭಾರವಾಡಿ ಮತ್ತು ಬಸೀರ ಕಡದರಾಳ ಅವರು ಚಿಕ್ಕ ವಯಸ್ಸಿನಲ್ಲಿ ಮೃತಪಟ್ಟಿರುವ ನೋವಿನ ಸಂಗತಿಯಾಗಿದೆ ಅವರು ಕುಟುಂಬವು ಅತ್ಯಂತ ಬಡತನದಲ್ಲಿ ಇರುವದರಿಂದ ನಿಸ್ವಾರ್ಥ ಭಾವನೆಯೊಂದಿಗೆ ಸಮಾಜದ ವ್ಯಕ್ತಿಯಾಗಿ ಅವರ ಕುಟುಂಭದ ಜೊತೆಗೆ ನಿಲ್ಲಬೇಕು ಅವರ ಮಕ್ಕಳ ಶಿಕ್ಷಣಕ್ಕೆ ಅನುಕೂಲವಾಗಲೆಂಬ ಉದ್ದೇಶದಿಂದ ಎರಡು ಕುಟುಂಬಸ್ಥರಿಗೆ ತಲಾ 50 ಸಾವಿರ ರೂ. ಸಹಾಯದ ನೀಡಿದ್ದೇನೆ ಸಮಾಜ ಮುಖಿ ಕೆಲಸದಲ್ಲಿ ತೊಡಗಿಕೊಂಡಿರುವ ಸಮಾಜದ ಮುಖಂಡರುಗಳು ಸಂಕಷ್ಟದಲ್ಲಿರುವ ಕುಟುಂಬದೊಂದಿಗೆ ಜೊತೆಯಾಗಿ ನಿಲ್ಲುವಂತಾಗಲಿ ಎಂದರು.
ಇದೇ ಸಮಯದಲ್ಲಿ ಸಮಾಜ ಸೇವಕ ನಿರಂಜನಶಾ ಮಕಾಂದಾರ ಅವರು ಎರಡು ಕುಟುಂಬಸ್ಥರಿಗೆ ತಲಾ 50 ಸಾವಿರ ರೂ. ವೈಯಕ್ತಿಕ ಆರ್ಥಿಕ ನೆರವನ್ನು ನೀಡಿದರು.ಈ ಸಮಯದಲ್ಲಿ ಮುಸ್ಲಿಂ ಸಮಾಜದ ಮುಖಂಡರುಗಳಾದ ಸಿಕಂದರ ವಠಾರ, ರಾಜೇಸಾಬ ಒಂಟಿ, ಛಾಂದಸಾಬ ಲಾಹೋರಿ, ಅಲಿ ಚೋರಗಸ್ತಿ, ಇಬ್ರಾಹಿಂ ಕಲ್ಬುರ್ಗಿ, ಅಬ್ದುಲ್ರಜಾಕ ನಾಡಗೌಡ, ಶಬ್ಬೀರ ಅವಟಿ, ಸಲಿಂ ಮಕಾಂದಾರ, ಹಸನಶ್ಯಾ ಮಕಾಂದಾರ, ರಜಾಕ ಕುಂಭಾರವಾಡಿ, ಮುರ್ತುಜಾ ಕುಂಭಾರವಾಡಿ, ಕಾಶಿಂ ಅಭಾಲೆ, ಮೊದಲಾದವರು ಉಪಸ್ಥಿತರಿದ್ದರು.
ಒಬ್ಬರಿಗೆ ಒಂದೇ ಹುದ್ದೆ ಕಾಂಗ್ರೆಸ್ ಪಕ್ಷದ ನಿಯಮದಿಂದ ಕೆಪಿಸಿಸಿ ಅಧ್ಯಕ್ಷ ಸ್ಥಾನ ಕೈ ತಪ್ಪಿದೆ : ಸಚಿವ ಸತೀಶ ಜಾರಕಿಹೊಳಿ
ಖಾತೆ ಮುಟ್ಟುಗೋಲಾದರೂ ಶಿವಂ ಸಂಸ್ಥೆಗೆ ಜನರಿಂದ ಇನ್ನೂ ದುಡ್ಡು ಠೇವಣಿ : ವಂಚನೆ ಜಾಲದಿಂದ ದೂರ ಇರಿ, ಜನರಿಗೆ ಸಿಐಡಿ ಡಿಐಜಿಪಿ ಗುಳೇದ್ ಮನವಿ
ಬಹುಕೋಟಿ ಹಣ ವಂಚನೆ : ಆದಿತ್ಯರಾಜ್ ಕೇಸು ಸಿಐಡಿಗೆ, ಸಿಇಓ ವಿರುದ್ಧ ಲುಕ್ ಔಟ್ ನೋಟಿಸ್ ಜಾರಿ, ಏರ್ಪೋರ್ಟ್ ಗಳಿಗೆ ಮಾಹಿತಿ ರವಾನೆ
ಚಿನ್ನ ದೋಚಿದ್ದ ಖದೀಮನ ಬಂಧನ : 15.73 ಲಕ್ಷ ಮೌಲ್ಯದ 103.97 ಗ್ರಾಂ ಚಿನ್ನ ವಶ
ಕಣಗಲಾ ಬಳಿ ಲಾರಿ, ದ್ವಿಚಕ್ರವಾಹನ ನಡುವೆ ಅಪಘಾತ : ಇಬ್ಬರ ಸಾವು
ಗಾಂಜಾ ಮಾರಾಟಗಾರರ ಮೇಲೆ ದಾಳಿ; 9,21 ಲಕ್ಷದ ವಸ್ತುಗಳ ವಶ, ಐವರ ಬಂಧನ 