ಗ್ರಾಮೀಣ ಪ.ಜಾ, ಪ ಪಂ, ವರ್ಗದ ರೈತ ಮಹಿಳೆಯರಿಗೆ ತಲಾ 20 ರಂತೆ 64 ಕೋಳಿಮರಿಗಳನ್ನು ವಿತರಿಸಿದರು: ಡಿ.ಎಮ್.ಐಹೊಳೆ
Distributed 64 chickens, 20 each, to women farmers of rural P.J., P.P., category: D.M. Aihole
ಗ್ರಾಮೀಣ ಪ.ಜಾ, ಪ ಪಂ, ವರ್ಗದ ರೈತ ಮಹಿಳೆಯರಿಗೆ ತಲಾ 20 ರಂತೆ 64 ಕೋಳಿಮರಿಗಳನ್ನು ವಿತರಿಸಿದರು: ಡಿ.ಎಮ್.ಐಹೊಳೆ
ರಾಯಬಾಗ 18: ಸರ್ಕಾರ ಗ್ರಾಮೀಣ ಮಹಿಳೆಯರಿಗೆ ಕೋಳಿ ಮರಿಗಳನ್ನು ನೀಡುತ್ತಿದ್ದು, ಮಹಿಳೆಯರು ಇದರ ಸದುಪಯೋಗ ಪಡೆದುಕೊಂಡು ಆರ್ಥಿಕವಾಗಿ ಸಬಲರಾಗಬೇಕೆಂದು ಶಾಸಕ ಡಿ.ಎಮ್.ಐಹೊಳೆಯವರು ಹೇಳಿದರು. ಭಾನುವಾರ ಪಟ್ಟಣದ ಪಶು ಇಲಾಖೆ ಕಚೇರಿ ಆವರಣದಲ್ಲಿ ಕುಕ್ಕುಟೊದ್ಯಮ 05 ವಾರದ ಕೋಳಿಮರಿಗಳನ್ನು ಉತ್ಪಾದಿಸಿ ಗ್ರಾಮೀಣ ಪ.ಜಾ, ಪ ಪಂ, ಸಾಮಾನ್ಯ ವರ್ಗದ ರೈತ ಮಹಿಳೆಯರಿಗೆ ತಲಾ 20 ರಂತೆ 64 ಫಲಾನುಭವಿಗಳಿಗೆ ಕೋಳಿಮರಿಗಳನ್ನು ವಿತರಿಸಿ ಮಾತನಾಡಿದ ಅವರು, ರೈತರು ಕೋಳಿಮರಿಗಳನ್ನು ಸಾಕಿ, ಕೋಳಿ ಮೊಟ್ಟೆ ತಿಂದು ಸದೃಢರಾಗಬೇಕು, ಈ ಯೋಜನೆಯನ್ನು ಯಶಸ್ಸುಗೊಳಿಸಬೇಕೆಂದರು. ಮುಖಂಡರಾದ ಸದಾಶಿವ ಘೋರೆ್ಡ, ಪಶುವೈದ್ಯಾಧಿಕಾರಿ ಡಾ.ಎಮ್.ಬಿ.ಪಾಟೀಲ, ಡಾ.ಸಚೀನ ಸೌಂದಲಗಿ, ಡಾ. ಪ್ರಮೋದ ತಳವಾರ, ಸಿದ್ದಪ್ಪ ಮನ್ನಿಕೇರಿ, ಆನಂದ ಕದಂ, ಸಿದ್ದು ಅಲಕನೂರ, ಶ್ರೀಕಾಂತ ಹುಕ್ಕೇರಿ, ಸಂತೋಷ ಮನ್ನಿಕೇರಿ, ರಾಜು ಹಳಬರ, ಕಲ್ಲಪ್ಪ ಸನದಿ, ಸುರೇಶ ಐಹೊಳೆ, ಅಕ್ಷಯ ಕರೀಹೊಳಿ, ಮಲ್ಲಪ್ಪ ಶಾರಬಿದ್ರೆ ಇದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 