55ಕ್ಕೂ ಅಧಿಕ ರೈತರ ಧಾರವಾಡ ಕೃಷಿ ಮೇಳ ಪ್ರವಾಸಕ್ಕೆ ಚಾಲನೆ

55ಕ್ಕೂ ಅಧಿಕ ರೈತರ ಧಾರವಾಡ ಕೃಷಿ ಮೇಳ ಪ್ರವಾಸಕ್ಕೆ ಚಾಲನೆ  Dharwad Agricultural Fair tour flagged off for over 55 farmers


ಮುಂಡಗೋಡ 28: ರಾಷ್ಟ್ರೀಯ ತೋಟಗಾರಿಕೆ ಮಿಷನ್ ಹಾಗೂ ಆತ್ಮಾ ಯೋಜನೆಯಡಿ ತಾಲೂಕಿನ 55ಕ್ಕೂ ಅಧಿಕ ರೈತರ ಒಳರಾಜ್ಯ ತರಬೇತಿ ಮತ್ತು ಅಧ್ಯಯನ ಪ್ರವಾಸಕ್ಕೆ ಸೋಮವಾರ ಚಾಲನೆ ನೀಡಲಾಯಿತು.  ತಾಲೂಕು ಪಂಚಾಯಿತಿ ಯೋಜನಾಧಿಕಾರಿ ಸಿ.ಎಸ್‌. ಬಣಕಾರ ಹಾಗೂ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ಕೃಷ್ಣ ಟಿ. ಕುಳ್ಳೂರ ಹಸಿರು ನಿಶಾನೆ ತೋರಿಸಿದರು. ರೈತರು ಧಾರವಾಡ ಕೃಷಿ ಮೇಳದಲ್ಲಿ ಭಾಗವಹಿಸಿ ಕೃಷಿ ಮತ್ತು ತೋಟಗಾರಿಕೆ ಕ್ಷೇತ್ರದ ಕುರಿತು ಮಾಹಿತಿ ಪಡೆಯಲಿದ್ದಾರೆ. ಸಹಾಯಕ ತೋಟಗಾರಿಕೆ ಅಧಿಕಾರಿಗಳಾದ ರಮೇಶ ಜಿ. ಜಮಖಂಡಿ ಹಾಗೂ ರಾಮಪ್ಪ ನಡುವಿನಮನಿ