ಶ್ರೀಶೈಲ ಮಹಾಕ್ಷೇತ್ರದ ಕಡೆಗೆ ಮುಖ ಮಾಡಿದ ಮುಗಳಖೋಡ ಪಾದಯಾತ್ರಿಗಳಿಗೆ ಅಂಬಲಿ, ಹಣ್ಣು ಹಂಪಲು ವಿತರಿಸಿದ ಭಕ್ತರು.

ಶ್ರೀಶೈಲ ಮಹಾಕ್ಷೇತ್ರದ ಕಡೆಗೆ ಮುಖ ಮಾಡಿದ ಮುಗಳಖೋಡ ಪಾದಯಾತ್ರಿಗಳಿಗೆ ಅಂಬಲಿ, ಹಣ್ಣು ಹಂಪಲು ವಿತರಿಸಿದ ಭಕ್ತರು. Devotees distributed Ambali and fruit to the Mugalakhoda trekkers who were heading towards Srisaila

ಮುಗಳಖೋಡ 03 :  ಶ್ರೀಶೈಲ ಪುಣ್ಯಕ್ಷೇತ್ರದಲ್ಲಿ ನಡೆಯುವ ಯುಗಾದಿ ಮಹೋತ್ಸವಕ್ಕೆ  ಮುಗಳಖೋಡ ಪಟ್ಟಣದ   ಮಲ್ಲಿಕಾರ್ಜುನನ  ಕಂಬಿಗಳು ಭಕ್ತರ ಸಮ್ಮುಖದಲ್ಲಿ ಶ್ರೀಶೈಲಕ್ಕೆ ತೆರಳಿದವು. ಹನುಮಾನ ದೇವಸ್ಥಾನದ ಅಗಸಿಯಲ್ಲಿ ಕಂಬಿಗಳನ್ನು ಕೂಡಿಸಿ ಪಟ್ಟಣದ ಸ್ವಾಮಿಗಳು ವಿಶೇಷವಾಗಿ ಪೂಜಿಸಿ ಭಕ್ತರೆಲ್ಲ ನೈವೇದ್ಯ ಸಮರ​‍್ಿಸಿ ಮಂಗಳಾರತಿ ಮಾಡಿ ಕರಡಿ ಮಜಲು, ನಾನಾ ವಾದ್ಯಗಳ ಮೂಲಕ ಶ್ರೀಶೈಲ ಮಹಾಕ್ಷೇತ್ರಕ್ಕೆ ಕಳುಹಿಸಿಕೊಟ್ಟರು. ಪಾದಚಾರಿಗಳಾಗಿ ಪಟ್ಟಣದ ಮಾರ್ಗವಾಗಿ  ಶ್ರೀಶೈಲ ಮಹಾಕ್ಷೇತ್ರಕ್ಕೆ ತೆರಳುವ ಎಲ್ಲ ಭಕ್ತಾದಿಗಳಿಗೆ ಪಟ್ಟಣದ ಪ್ರತಿಷ್ಠಿತ ವಿದ್ಯಾಸಂಸ್ಥೆಯಾದ  . ಚವಿವ ಸಂಘದ ಡಾ. ಸಿ.ಬಿ.ಕುಲಿಗೋಡ ಪದವಿ ಮಹಾವಿದ್ಯಾಲಯದ ಆವರಣದ ಮುಂದೆ ಎಲ್ಲ ಅಂಗ ಸಂಸ್ಥೆಗಳ ಸಹಯೋಗದೊಂದಿಗೆ ಭಕ್ತಾಧಿಗಳಿಗೆ ಯುವ  ಬಳಗದವರು ಕೂಡಿಕೊಂಡು ದ್ರಾಕ್ಷಿ, ಶರಬತ್, ಮಜ್ಜಿಗೆಯನ್ನು ವಿತರಿಸಿದರು.ಪಟ್ಟಣದ ವಿವೇಕಾನಂದ ಸರ್ಕಲ್ ಹತ್ತಿರ ಕರ್ನಾಟಕ ಚಾಲಕರ ಒಕ್ಕೂಟ (ರಿ) ಹಾಗೂ   ಸಿದ್ದರಾಮೇಶ್ವರ  ವಾಹನ ಮಾಲಕರ, ಚಾಲಕರ ಸಂಘದವರು ರಾಗಿಅಂಬಲಿ, ಕಬ್ಬಿನ ಹಾಲು ವಿತರಿಸಿ ತಮ್ಮ ಭಕ್ತಿಯನ್ನು ಸಮರ​‍್ಿಸಿದರು. ಹೀಗೆ ಪಟ್ಟಣದ ನಾನಾ ಭಾಗಗಳಲ್ಲಿ ಭಕ್ತರು ಹಣ್ಣು ಹಂಪಲು, ಎಳನೀರು, ತಂಪು ಪಾನೀಯಗಳನ್ನು ನೀಡಿ ಮಲ್ಲಿಕಾರ್ಜುನ ಕೃಪೆಗೆ ಪಾತ್ರರಾದರು.ಈ ಸಂದರ್ಭದಲ್ಲಿ ಪಟ್ಟಣದ ಎಲ್ಲ ಸ್ವಾಮೀಜಿಗಳು ಮಲ್ಲಿಕಾರ್ಜುನನ ಎಲ್ಲ ಭಕ್ತ ಸಮೂಹದವರು ಉಪಸ್ಥಿತರಿದ್ದರು.