ಹೊಸಪೇಟೆ

ಮೈಲಾರ ಶುಗರ​‍್ಸ‌ ಕಾರ್ಖಾನೆಯಿಂದ ರೈತರಿಗೆ ಕಬ್ಬಿನ ಹಣ ನೀಡಬೇಕೆಂದು ಒತ್ತಾಯ

ಮೈಲಾರ ಶುಗರ​‍್ಸ‌ ಕಾರ್ಖಾನೆಯಿಂದ ರೈತರಿಗೆ ಕಬ್ಬಿನ ಹಣ ನೀಡಬೇಕೆಂದು ಒತ್ತಾಯ

ಹೊಸಪೇಟೆ 25:  ಸುತ್ತಮುತ್ತ ಗ್ರಾಮಗಳ ರೈತರು ಮೈಲಾರ್ ಶುಗರ​‍್ಸ‌ ಬೀರಬ್ಬಿ, ಕಾರ್ಖಾನೆಗೆ ಕಬ್ಬು ಸರಬರಾಜು ಮಾಡಿರುತ್ತೇವೆ. ನವೆಂಬರ್ 30 ರಿಂದ ಇದುವರೆಗೂ ಒಂದು ರೂಪಾಯಿ ಹಣವನ್ನು ಕಾರ್ಖಾನೆಯವರು ರೈತರಿಗೆ ಪಾವತಿ ಮಾಡುತ್ತಿಲ್ಲ.ಆದರೆ ಮುಂಡರಗಿ, ಸಿರಗುಪ್ಪ, ಇನ್ನುಳಿದ ಸಕ್ಕರೆ ಕಾರ್ಖಾನೆಗಳು ಈಗಾಗಲೆ ಸಂಪೂರ್ಣ ಹಣವನ್ನು ರೈತರಿಗೆ ಪಾವತಿ ಮಾಡಿರುತ್ತಾರೆ. ಆದರೆ ಮೈಲಾರ್ ಶುಗರ​‍್ಸ‌ ಕಾರ್ಖಾನೆಯವರು ಮಾತ್ರ ಇದುವರೆಗು ಅಂದರೆ ಸುಮಾರು 4-ತಿಂಗಳವರೆಗೆ ಹಣವನ್ನು ನೀಡಿರುವುದಿಲ್ಲ. ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳಿಗೂ ಆಡಳಿತ ಮಂಡಳಿಯವರಿಗೂ ಪೋನ್ ಮೂಲಕ ವಿಚಾರಿಸಿದರೆ ಅವರು ನಾವು ರೈತರಿಗೆ ಪೇಮೆಂಟ್ ಮಾಡುತ್ತೇವೆ, ಸರ್ಕಾರದಿಂದ ಇಥೆನಲ್ ಪೇಮೆಂಟ್‌ ಆಗಿರುವುದಿಲ್ಲ ಎಂಬ ಉಡಾಫೆ ಉತ್ತರವನ್ನು ನೀಡುತ್ತಿದ್ದಾರೆ. ಸ್ಥಳಿಯ ರೈತರು ಸುಮಾರು ರೂ.2ಅ ರಂತೆ ಬಡ್ಡಿತಂದು ಸಣ್ಣ ಮತ್ತುಅತೀ ಸಣ್ಣರೈತರು ಉಳುಮೆ ಮಾಡಿಕಬ್ಬು ಬೆಳೆದ ರೈತರಿಗೆಆಗುವಂತಹ ನಷ್ಟವನ್ನು ಕಾರ್ಖಾನೆಯವರೇ ಭರಿಸಬೇಕು. ಇಲ್ಲವಾದಲ್ಲಿಅವರ ಮೈಲಾರ್ ಶುಗರ​‍್ಸ‌ ಪರವಾನಿಗೆಯನ್ನು ರದ್ದು ಮಾಡಬೇಕು ಎಂದು ಈ ಮೂಲಕ ಕೋರುತ್ತೇವೆ.  ಆದ್ದರಿಂದರೈತರಿಗೆ ತುಂಬಾಕಷ್ಟವಾಗಿದ್ದು, ಮುಂದಿನ ಬೆಳೆಗಳಿಗೆ ಗೊಬ್ಬರ, ಓಷಧಿಗಳನ್ನು ಕೊಡಲು ತುಂಬಾ ತೊಂದರೆಯಾಗಿರುತ್ತದೆ. ಜಿಲ್ಲಾಧಿಕಾರಿಗಳು ಆದಷ್ಟು ಬೇಗನೆ ಕಾರ್ಖಾನೆಯ ಮಾಲೀಕರನ್ನು ಕರೆಯಿಸಿ ವಿಚಾರಿಸಿ ರೈತರಿಗೆ ನೀಡಬೇಕಾಗಿರುವ ಕಬ್ಬಿನ ಹಣವನ್ನುಕೂಡಲೇಕೊಡಿಸಬೇಕೆಂದು ಕರ್ನಾಟಕ ರಾಜ್ಯರೈತ ಸಂಘ ಹಾಗೂ ಹಸಿರು ಸೇನೆ ಒತ್ತಾಯ. 


ಸುದ್ದಿ ಓದಿ