ಲೋಕದರ್ಶನವರದಿ
ಕೊಪ್ಪಳ: ಮೂವತ್ರೋಂಭತ್ತು ವರ್ಷಗಳ ಬಳಿಕ ವೈಭವದಿಂದ ಜರುಗುತ್ತಿರುವ ಹಲಗೇರಿ ದ್ಯಾಮಮ್ಮನ ಜಾತ್ರೆಯ ನಿಮಿತ್ತ ಶುಕ್ರವಾರ ಬೆಳಗ್ಗೆ ದಶಮಿದಿಂಡಿನಲ್ಲಿ ದ್ಯಾಮಮ್ಮನ ಮೂತರ್ಿ ಮರೆವಣಿಗೆಯೂ ಸಕಲ ವಾದ್ಯಗಳೊಂದಿಗೆ ವಿಜೃಂಭಣೆಯಿಂದ ಜರುಗಿತು.
ಬೆಳಗ್ಗೆ 4ಗಂಟೆಗೆ ದ್ಯಾಮಮ್ಮ ದೇವಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ನಂತರ ದಶಮಿದಿಂಡಿನಲ್ಲಿ ಬೆಳಗ್ಗೆ 6ಗಂಟೆಗೆ ಪ್ರಾರಂಭವಾದ ದ್ಯಾಮಮ್ಮನ ಮೂತರ್ಿ ಮೆರವಣಿಗೆಯೂ ಸಂಜೆ 6ಗಂಟೆವರೆಗೂ ಸಾಗಿತು.
ದಾರಿಯುದ್ದಕ್ಕೂ ಮಹಿಳೆಯರು ದೇವಿಗೆ ಕಾಯಿ, ಕಪರ್ೂರ್, ಹೂವು ಸಲ್ಲಿಸಿ ತಾಯಿಗೆ ಕೃಪೆಗೆ ಪಾತ್ರರಾದರು. ನಂತರ ಮೆರವಣಿಗೆಯೂ ಗ್ರಾಮದ ವಿವಿಧ ಬೀದಿಗಳ ಮೂಲಕ ದೇವಸ್ಥಾನ ತಲುಪಿತು.
ಮೆರಗು ನೀಡಿದ ವಾದ್ಯಗಳು :
ಹಲಗೇರಿ ಗ್ರಾಮದಲ್ಲಿ ಸುಮಾರು ಮೂರವರೇ ದಶಕಗಳ ನಂತರ ಆಚರಿಸುತ್ತಿರುವ ಅಮ್ಮನ ಜಾತ್ರೆಗೆ ಪ್ರತಿಯೊಂದು ಮನೆಯೂ ಮದುವಣ ಗಿತ್ತಿಯಂತೆ ಸಿಂಗಾರಗೊಂಡಿದ್ದು, ತಳಿರು ತೋರಣಗಳು ಕೂಡ ಜಾತ್ರೆಗೆ ಮೆರಗು ನೀಡುತ್ತಿವೆ.
ದ್ಯಾಮಮ್ಮನ ಮೂತರ್ಿ ಮೆರವಣಿಗೆಯಲ್ಲಿ ನಂದಿ ಕೋಲು, ಡೊಳ್ಳು ಕುಣಿತ, ಗೊಂಡಬಾಳ ಗ್ರಾಮದಿಂದ ಕರೆತರಲಾಗಿದ್ದ ಕೋಲಾಟ ಮೂತರ್ಿ ಮೆರವಣಿಗೆಗೆ ಮೆರಗು ನೀಡಿದವು. ಕೆಲ ಯುವಕರು ಉರಿಯುವ ಬಿಸಿಲನ್ನು ಲೆಕ್ಕಿಸದೆ ನಂದಿ ಕೋಲು ಹಾಗೂ ಕೋಲಾಟದಲ್ಲಿ ಹೆಜ್ಜೆ ಹಾಕುವುದರ ಮೂಲಕ ನೋಡುಗರ ಕಣ್ಮನ ಸೆಳೆದರು.
ಒಟ್ಟಾರೆಯಾಗಿ ಒಂಭತ್ತು ದಿನಗಳ ಕಾಲ ವಿಂಜೃಭಣೆಯಿಂದ ಜರುಗಲಿರುವ ದ್ಯಾಮಮ್ಮ ದೇವಿ ಜಾತ್ರೆಯಲ್ಲಿ ಪ್ರತಿ ನಿತ್ಯ ವಿವಿಧ ಕಾರ್ಯಕ್ರಮಗಳು ಜರುಗಲಿವೆ.
ಮೇ.11ರಂದು ನೂತರ ರಥೋತ್ಸವದ ಕಳಸ, ಹಗ್ಗ ಹಾಗೂ ನಂದಿಕೋಲುಗಳನ್ನು ಗ್ರಾಮದ ವಿವಿಧ ಬೀದಿಗಳ ಮೂಲಕ ದೇವಸ್ಥಾನಕ್ಕೆ ತಲುಪಿಸುವ ಕಾರ್ಯಕ್ರಮ ಜರುಗಲಿದೆ ಎಂದು ಶಾಂಭವಿ ಪ್ರಚಾರ ಸಮಿತಿ ಅಧ್ಯಕ್ಷ ಹಾಗೂ ಕನ್ನಡ ಸಾಹಿತ್ತ ಪರಿಷತ್ತು ಅಧ್ಯಕ್ಷ ರಾಜಶೇಖರ ಅಂಗಡಿ ಹಾಗೂ ಪ್ರಚಾರ ಸಮಿತಿ ಸದಸ್ಯ ದೇವೇಂದ್ರ ಬಳಗೇರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.