ಹೂವಿನ ಹಡಗಲಿ

ನರೇಗಾ ಉಳಿವಿಗಾಗಿ ಕಾಂಗ್ರೆಸ್ ಪಾದಯಾತ್ರೆ

ನರೇಗಾ ಉಳಿವಿಗಾಗಿ ಕಾಂಗ್ರೆಸ್ ಪಾದಯಾತ್ರೆ

ಹೂವಿನಹಡಗಲಿ 25:  ’ಮನರೇಗಾ ಬದಲಾವಣೆ ಹಾಗೂ ಟ್ರಂಪ್ ಸುಂಕಾಸ್ತ್ರದ ಕುರಿತು ಸಂಸತ್ನಲ್ಲಿ ವಿರೋಧ ಪಕ್ಷಗಳ ಪ್ರಶ್ನೆಗಳಿಗೆ ಉತ್ತರಿ-ಸಲಾಗದೇ ಪ್ರಧಾನಿ ನರೇಂದ್ರ ಮೋದಿ ಪಲಾಯನ ಮಾಡುತ್ತಿದ್ದಾರೆ’ ಎಂದು ಸಂಸದ ಇತುಕಾರಾಂ ಟೀಕಿಸಿದರು.ತಾಲ್ಲೂಕಿನ ಹೊಳಲು ಗ್ರಾಮದ ಮಹಾತ್ಮ ಗಾಂಧಿ ವೃತ್ತದಲ್ಲಿ ಸೋಮವಾರ ಕಾಂಗ್ರೆಸ್ ಹಮ್ಮಿಕೊಂಡಿದ್ದ ನರೇಗಾ ಉಳಿವಿಗಾಗಿ ಪಾದಯಾತ್ರೆಯ ಬಹಿರಂಗ ಸಭೆಯಲ್ಲಿ ಅವರು ಮಾತನಾಡಿದರು."ಸಂಸತನಲ್ಲಿ ಸಂವಿಧಾನ. ಪ್ರಜಾಪ್ರಭುತ್ವ ನೀತಿಗಳನ್ನು ಗಾಳಿಗೆ ತೂರಿ, ಆರ್‌.ಎಸ್‌.ಎಸ್‌.ಅಂಜೆಡ್  ಮಾತ್ರ ಪಾಲಿಸಲಾಗುತ್ತಿದೆ.

ಮನರೇಗಾ ರದ್ದತಿಯಿಂದ ಬಡ ಕೂಲಿಕಾರ್ಮಿಕರ ಕನಸುಗಳು ಕಮರಿ ಇದನ್ನು ವಿರೋಧಿಸಿ ಕಾಂಗ್ರೆಸ್ ಹಮ್ಮಿಕೊಂಡಿರುವ ಪಾದಯಾತ್ರೆಯ ಒಂದೊಂದು ಹೆಜ್ಜೆಯೂ ಬಿಜೆಪಿ ದುರಾಡಳಿತ ಅಂತ್ಯಗೊಳಿಸುವ ಹೆಜ್ಜೆಯಾಗಿದೆ. ದೇಶಕ್ಕೆ ಒಳ್ಳೆಯ ದಿನ ಬರಬೇಕಾದರೆ ಬಿಜೆಪಿಯ ಗುಲಾಮಗಿರಿ ಆಡಳಿತವನ್ನು ಜನರು ಕೊನೆಗಾಣಿಸಬೇಕು’ ಎಂದರು.ದಾವಣಗೆರೆ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಮಾತನಾಡಿ ಯುಪಿಎ ಸರ್ಕಾರದ ಮಹತ್ವಾಕಾಂಕ್ಷಿ ಈ ಯೋಜನೆಯನ್ನು ರದ್ದುಗೊಳಿಸುವ ಮೂಲಕ ಕೇಂದ್ರ ಸರ್ಕಾರ ಗ್ರಾಮೀಣ ಜನರ ಬದುಕನ್ನು ನಾಶ ಮಾಡಲು ಹೊರಟಿದೆ ಎಂದು ವಾಗ್ದಾಳಿ ನಡೆಸಿದರು.ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಿ.ವಿ. ಶಿವಯೋಗಿ, ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಪಿ. ವಿಜಯಕುಮಾರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ವಿ.ಹ. ನುಮಂತಪ್ಪ, ಆಟವಾಳಗಿ ಕೊಟ್ರೇಶ, ಮುಖಂಡರಾದ ಚಂದ್ರಶೇಖರ ಭಟ್, ಅರವಳ್ಳಿ ವೀರಣ್ಣ,ಕೆ.ಎಸ್‌.ಶಾಂತನಗೌಡ,  ಗುರುವಿನ ರಾಜು,ವಸಂತ, ಶೋಭಾ  ಬೆಂಡಿಗೇರಿ ಇದ್ದರು. 


ಸುದ್ದಿ ಓದಿ