ಹೂವಿನ ಹಡಗಲಿ

ವಿದ್ಯಾರ್ಥಿ ಗಳ ಫಲಿತಾಂಶ ಸುಧಾರಣೆಗೆ ಸಿಇ ಟಿ ತರಬೇತಿ

ವಿದ್ಯಾರ್ಥಿ ಗಳ ಫಲಿತಾಂಶ ಸುಧಾರಣೆಗೆ  ಸಿಇ ಟಿ ತರಬೇತಿ

 ಹೂವಿನ ಹಡಗಲಿ:  14- ಸರಕಾರಿ ಕಾಲೇಜಿನ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗಾಗಿ ಈ ಬಾರಿ ವಸತಿ ಸಹಿತ ಉಚಿತ ಸಿ ಇ ಟಿ ತರಬೇತಿಯನ್ನು ಇಲಾಖೆ ಆಯೋಜಿಸಿದೆ.ಎಲ್ಲಾ ಸರಕಾರಿ ಕಾಲೇಜಿನ ವಿದ್ಯಾರ್ಥಿಗಳು ಇದರ ಸದುಪಯೋಗ ಪಡಿಸಿಕೊಳ್ಳಿ ಎಂದು ಪ್ರಾಚಾರ್ಯ ಎ. ಕೊಟ್ರಗೌಡ ತಿಳಿಸಿದರು. ಪಟ್ಟಣದ ಸೊಪ್ಪಿನ ಕಾಳಮ್ಮನವರ ಬಾಲಕಿಯರ ಸ.ಪ.ಪೂ. ಕಾಲೇಜಿನಲ್ಲಿ ಭಾನುವಾರ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ ಫಲಿತಾಂಶ ಸುಧಾರಣೆಯ ಭಾಗವಾಗಿ ಆಯೋಜಿಸಿದ್ದ  ಜೀವಶಾಸ್ತ್ರ ವಿಷಯದ ಬೂಸ್ಟರ್ ತರಗತಿ ಉದ್ಘಾಟಿಸಿ ಮಾತನಾಡಿದರು.ಸಂಪನ್ಮೂಲ ವ್ಯಕ್ತಿ  ಎಂ.ಎಂ.ಪಾಟೀಲ ಕಾಲೇಜಿನ ಪ್ರಾಚಾರ್ಯ ಡಿ. ಸತೀಶ್, ವಿದ್ಯಾರ್ಥಿಗಳಿಗೆ ಫಲಿತಾಂಶ ಸುಧಾರಣೆಗೆ ಒತ್ತುಕೊಟ್ಟು ಓದುವ ಬಗ್ಗೆ ಮಾರ್ಗದರ್ಶನ ಮಾಡಿದರು. ಜೊತೆಗೆ ಸಿ. ಇ. ಟಿ ತಯಾರಿ ಕುರಿತು ಉಪಯುಕ್ತವಾದ ಮಾಹಿತಿ ಒದಗಿಸಿದರು. ಉಪನ್ಯಾಸಕ ನಟರಾಜ್ ಪಾಟೀಲ್ ,ಶ್ರೀಕಾಂತ್, ದುಷ್ಯಂತ್, ವೀರೇಶ್, ಶಂಕರ್, ಪರಂಜ್ಯೋತಿ, ಉಮಾ, ರಶ್ಮಿ ಇದ್ದರು.ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆದುಕೊಂಡರು. 


ಸುದ್ದಿ ಓದಿ