ಬಾಳೆಕುಂದ್ರಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ ರಕ್ತದಾನ ಶಿಬಿರ

ಲೋಕದರ್ಶನ ವರದಿ

ಬೆಳಗಾವಿ 16: ನಗರದ ಎಸ್. ಜಿ. ಬಾಳೆಕುಂದ್ರಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ 15ರಂದು ಡಾ. ಶಿವಬಸವ ಮಹಾಸ್ವಾಮಿಗಳವರ 129 ನೆಯ ಜಯಂತೋತ್ಸವದ ಅಂಗವಾಗಿ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ಘಟಕ, ಲೀಡ್ಸೆಲ್ ಘಟಕವು ಡಾ. ಪ್ರಭಾಕರ ಕೋರೆ ವೈದ್ಯಕೀಯ ಆಸ್ಪತ್ರೆ ಮತ್ತು ಸಂಶೋಧನ ಕೇಂದ್ರ ಹಾಗು ಎಚ್.ಡಿ.ಎಫ್.ಸಿ ಬ್ಯಾಂಕ್ ಬೆಳಗಾವಿ ಘಟಕದ ಸಹಯೋಗದಲ್ಲಿ ರಕ್ತದಾನ ಶಿಬಿರವನ್ನು ಏರ್ಪಡಿಸಲಾಗಿತ್ತು. 

ಗದುಗಿನ ತೋಂಟದಾರ್ಯ ಮಹಾ ಸಂಸ್ಥಾನದ ಡಾ. ತೋಂಟದ ಸಿದ್ಧರಾಮ ಸ್ವಾಮಿಗಳು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತ ಹಿಂದಿನ ಕಾಲದಲ್ಲಿ ಅನ್ನದಾನ ಶ್ರೇಷ್ಠವೆಂಬ ಭಾವನೆಯಿಂದ ಬೆಳೆದು ಬಂದ ನಮಗೆಲ್ಲ ನಂತರದಲ್ಲಿ ವಿದ್ಯಾದಾನ ಶ್ರೇಷ್ಠವೆಂಬ ಭಾವನೆ ಬೆಳೆಯಿತು ಆದರೆ ಇಂದು ಜೀವರಕ್ಷವಾದ ರಕ್ತದಾನ ಶ್ರೇಷ್ಠವೆಂದು ಗುರುತಿಸಲ್ಪಟ್ಟಿದೆ. ವಿಜ್ಞಾನ ಮತ್ತು ತಂತ್ರಜ್ಞಾನದ ಬೆಳವಣಿಗೆಯಿಂದ ಇಂದು ವೈದ್ಯಕೀಯ ಕ್ಷೇತ್ರದಲ್ಲಿ ನೇತ್ರದಾನ, ಹೃದಯದಾನ, ಮೂತ್ರಪಿಂಡದಾನ, ಚರ್ಮದಾನ ಮುಂತಾದವುಗಳ ಜೊತೆಗೆ ಇತ್ತೀಚಿಗೆ ದೇಹದಾನ ಸಹ ಮುಂಚೂಣಿಯಲ್ಲಿದೆ. ವೈದ್ಯಕೀಯ ಕ್ಷೇತ್ರದಲ್ಲಿ ನಡೆದಿರುವ ಬೆಳವಣಿಗೆಗಳಿಂದಾಗಿ ಇಂದು ಮನುಷ್ಯನ ಜೀವರಕ್ಷಣೆಗಾಗಿ ಹಲವಾರು ಔಷಧಿಗಳ ಸಂಶೋಧನೆ ನಡೆದಿದ್ದರೂ ಕೃತಕ ರಕ್ತದ ತಯಾರಿಕೆ ಸಾಧ್ಯವಾಗಿಲ್ಲ. ಅದು ಮನುಷ್ಯರಿಂದ ಮಾತ್ರ ಉತ್ಪಾದಿಸಲ್ಪಡಬೇಕಾಗುತ್ತದೆ. ವೈದ್ಯಕೀಯ ವರದಿಗಳ ಪ್ರಕಾರ ರಕ್ತದಾನದಿಂದ ಯಾವದೇ ಅಪಾಯ ವ್ಯಕ್ತಿಗೆ ಆಗುವುದಿಲ್ಲ ಮತ್ತು ಕೆಲವೇ ದಿನಗಳಲ್ಲಿ ಹೊಸ ರಕ್ತದ ಉತ್ಪಾದನೆ ಸಹ ದೇಹದಲ್ಲಿ ತನ್ನಿಂದ ತಾನೆ ಸಂಭವಿಸುತ್ತದೆ.  ನಮ್ಮ ದೇಶದಲ್ಲಿ ಯುವಜನರ ಸಂಖ್ಯೆ ಹೆಚ್ಚಾಗಿದ್ದು ಅವರೆಲ್ಲ ಈ ರೀತಿಯ ರಕ್ತದಾನ ಶಿಬಿರಗಳಲ್ಲಿ ಭಾಗವಹಿಸಿ ರಕ್ತದಾನ ಮಾಡುವುದರಿಂದ ಬಹಳಷ್ಟು ಜೀವಗಳನ್ನು ಬದುಕಿಸಬಹುದಾಗಿದೆ. ಗಣ್ಯರ ಜನ್ಮದಿನವನ್ನು ರಕ್ತದಾನದ ಮೂಲಕ ಅರ್ಥಪೂರ್ಣವಾಗಿ ಆಚರಿಸುತ್ತಿರುವ ಕಾಲೇಜಿನ ಆಡಳಿತ ಮಂಡಳಿ, ಸಿಬ್ಬಂದಿ ಮತ್ತು ವಿದ್ಯಾಥರ್ಿಗಳ ಈ ಕಾರ್ಯವನ್ನು ಈ ಸಂದರ್ಭದಲ್ಲಿ ಸ್ವಾಮಿಗಳು ಶ್ಲಾಘಿಸಿದರು. 

ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಎಸ್. ಎಸ್. ಸಾಲೀಮಠ, ಕಾರ್ಯಕ್ರಮದ ಸಂಯೋಜನಾಧಿಕಾರಿ ಡಾ. ವೀರಣ್ಣ. ಡಿ. ಕೆ, ಕಾರ್ಯಕ್ರಮದಲ್ಲಿ ಕೆಎಲ್ಇ ವೈದ್ಯಕೀಯ ಆಸ್ಪತ್ರೆಯ ಸಾರ್ವಜನಿಕ ಸಂಪಕರ್ಾಧಿಕಾರಿ ಸವಿತಾ ಮತ್ತು ಸಿಬ್ಬಂದಿ, ಎಚ್.ಡಿ.ಎಫ್.ಸಿ ಬ್ಯಾಂಕ್ ಬೆಳಗಾವಿ ಸಮೂಹದ ಅಧಿಕಾರಿಗಳಾದ ಚಿದಂಬರಮೂತರ್ಿ ಮತ್ತು ಅನೀಲಕುಮಾರ  ಮತ್ತು ಸಿಬ್ಬಂದಿ ಭಾಗವಹಿಸಿದ್ದರು. ಪ್ರೊ.ಬಸವರಾಜ ತಿಳಗಂಜಿ, ಪ್ರೊ.ಹರ್ಷ ಕಕರಡ್ಡಿ, ಪ್ರೊ.ರಾಹುಲ ಬನ್ನೂರ, ಪ್ರೊ.ಶಿವಾನಂದ ಉಳ್ಳೆಗಡ್ಡಿ,  ಪ್ರೊ. ಪ್ರಸಾದ ಕಲ್ಲೋಳಿಮಠ, ಬೋಧಕ ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾಥರ್ಿಗಳು ಭಾಗವಹಿಸಿದ್ದರು. ಸುಮಾರು 96 ವಿದ್ಯಾಥರ್ಿ ಮತ್ತು ಸಿಬ್ಬಂದಿಯವರು ಈ ಕಾರ್ಯಕ್ರಮದಲ್ಲಿ ರಕ್ತದಾನ ಮಾಡಿದರು.