ಜೂ.20 ರಿಂದ ಬೆಟಗೇರಿ ಜಾಗೃತ ಮಾರುತಿ ದೇವರ ಓಕುಳಿ

ಜೂ.20 ರಿಂದ ಬೆಟಗೇರಿ ಜಾಗೃತ ಮಾರುತಿ ದೇವರ ಓಕುಳಿ Betageri Jagrita Maruti Devara Okuli from June 20

ಲೋಕದರ್ಶನ ವರದಿ 

ಬೆಟಗೇರಿ 18 : ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಜಾಗೃತ ಮಾರುತಿ ದೇವರ ಓಕುಳಿ ಜೂ.20ರಿಂದ   ಜೂ.23 ರವರೆಗೆ ಜರುಗಲಿದೆ.   ಜೂ.20ರಂದು ಮುಂಜಾನೆ 7 ಗಂಟೆಗೆ  ಮಾರುತಿ ದೇವರ ಗದ್ದುಗೆಗೆ ಮಹಾ ರುದ್ರಾಭಿಷೇಕ, ಕುಂಕುಮ ಮತ್ತು ಮಹಾಪೂಜೆ, ಸಾಯಂಕಾಲ 5 ಗಂಟೆಗೆ ಓಕುಳಿ ಕೊಂಡ ಪೂಜೆ, ನಂತರ ಕರಡಿ, ಹಲಗೆ ಮಜಲು ಸೇರಿದಂತೆ ಸಕಲ ವಾಧ್ಯಗಳ ವಾದನ, ಪಲ್ಲಕ್ಕಿ ಉತ್ಸವ ನಡೆಯಲಿದೆ. 

ಜೂ.21ರಂದು ಮುಂಜಾನೆ 7ಗಂಟೆಗೆ ಮಾರುತಿ ದೇವರ ಗದ್ದುಗೆಗೆ ಅಭಿಷೇಕ, ಪೂಜೆ, ಸಾಯಂಕಾಲ 5 ಗಂಟೆಗೆ ನಡು ಓಕುಳಿ. ಜೂ.22 ರಂದು ಮುಂಜಾನೆ 8 ಗಂಟೆಯಿಂದ ಪುರಜನರಿಂದ ಪೂಜೆ-ಪುನಸ್ಕಾರ, ನೈವೈದ್ಯ, ಹರಕೆ ಸಮರೆ​‍್ಣ ನಡೆದು, ಸಾಯಂಕಾಲ 5 ಗಂಟೆಗೆ ಓಕುಳಿ ಕೊಂಡಕ್ಕೆ ಸ್ಥಳೀಯ ವಿವಿಧ ದೇವರ ಪಲ್ಲಕ್ಕಿ ಪ್ರದಕ್ಷೀಣೆ ಬಳಿಕ ಕಡೆ ಓಕಳಿ ನಡೆಯಲಿದ್ದು, ವಿವಿಧ ಪ್ರಾಣಿಗಳ ಸೊಗಿನ ಕುಣಿತದ ಪ್ರದರ್ಶನ, ಅದೇ ದಿನ ಸಂಜೆ 8 ಗಂಟೆಗೆ ಶ್ರೀಗಳಿಗೆ, ಅನ್ನದಾನಿಗಳಿಗೆ ಸತ್ಕಾರ ಕಾರ್ಯಕ್ರಮದ ಬಳಿಕ ರಾತ್ರಿ 10.30ಕ್ಕೆ ತುಳಸಿಗೇರಿ ಜೈ ಹನುಮಾನ ನಾಟ್ಯ ಸಂಘದವರಿಂದ ಕೃಷ್ಣಪಾರಿಜಾತ ಕಲಾ ಸಂಘದವರಿಂದ  ನಾಟಕ ಪ್ರದರ್ಶನ ಜರುಗಲಿದೆ. 

 ಮಂಗಳವಾರ ಜೂ.23ರಂದು ಮುಂಜಾನೆ 7ಗಂಟೆಗೆ ಮಾರುತಿ ದೇವರ ಗದ್ದುಗೆಗೆ ಅಭಿಷೇಕ, ಪೂಜೆ, ಸಾಯಂಕಾಲ 4 ಗಂಟೆಗೆ ಜಂಗಿ ಕುಸ್ತಿಗಳು ನಡೆದ ಬಳಿಕ ಸಂಜೆ ಮಾರುತಿ ದೇವರ ದೇವಾಲಯಕ್ಕೆ ಪಲ್ಲಕ್ಕಿ ಪ್ರರ್ದಕ್ಷಣೆ ನಡೆಯಲಿದೆ ಎಂದು ಇಲ್ಲಿಯ ಮಾರುತಿ ದೇವರ ಓಕುಳಿ ಉತ್ಸವ ಆಚರಣಾ ಸಮಿತಿ ಪತ್ರಿಕಾ ಪ್ರಕಟಣೆಗೆ ತಿಳಿಸಿದ್ದಾರೆ.