ಬಿಜೆಪಿಯಿಂದ ವಿಶ್ವ ಯೋಗ ದಿನ ಆಚರಣೆ

ಬಿಜೆಪಿಯಿಂದ ವಿಶ್ವ ಯೋಗ ದಿನ ಆಚರಣೆ BJP celebrates World Yoga Day

ಬೆಳಗಾವಿ 22 : 12ನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಬಿಜೆಪಿ ವತಿಯಿಂದ ಬೆಳಗಾವಿಯ ಗೋಮಟೇಶ ವಿದ್ಯಾಪೀಠದಲ್ಲಿ  ಯೋಗ ಶಿಬಿರದಲ್ಲಿ ಬಿಜೆಪಿ ಮುಖಂಡರು ಭಾಗವಹಿಸಿ ಯೋಗದ ವಿವಿಧ ಆಸನಗಳನ್ನು ಮಾಡಿ ಯೋಗ ದಿನವನ್ನು ಆಚರಿಸಿದರು. ಈ ಸಂದರ್ಭದಲ್ಲಿ  ಉಪಮುಖ್ಯಮಂತ್ರಿಗಳಾದ  ಗೋವಿಂದ ಕಾರಜೋಳ,ಜಿಲ್ಲಾ ಬಿಜೆಪಿ ಅಧ್ಯಕ್ಷ ಸುಭಾಷ ಪಾಟೀಲ, ವಿಭಾಗ ಪ್ರಭಾರಿಗಳಾದ ಸಂಜಯ ಪಾಟೀಲ, ವಿಧಾನ ಪರಿಷತ್ ಮುಖ್ಯ ಸಚೇತಕರಾದ ಎನ್‌. ರವಿಕುಮಾರಿ​‍್ವ. ಪ ಸದಸ್ಯ ಹಣಮಂತ ನಿರಾಣಿ, ರಾಜ್ಯಸಭಾ ಸದಸ್ಯರಾದ ಎಂ. ನಾಗರಾಜ, ಶಾಸಕರಾದ ವಿಠ್ಠಲ ಹಲಗೇಕರ, ಮಾಜಿ ಶಾಸಕರಾದ ಅರವಿಂದ ಪಾಟೀಲ, ಮುಖಂಡರಾದ ಎಂ.ಬಿ ಜಿರ್ಲಿ, ಆರ್ ಎಸ್ ಮುತಾಲಿಕ, ರಮೇಶ ದೇಶಪಾಂಡೆ, ಪದಾಧಿಕಾರಿಗಳು, ಪ್ರಮುಖರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.