ಬಿಡಿಸಿಸಿ ಬ್ಯಾಂಕ್ಗೆ ದೇಶದಲ್ಲೇ ಮೊದಲ ಸಹಕಾರ ಬ್ಯಾಂಕ್ ಎಂಬ ಹೆಗ್ಗಳಿಕೆ: ಕೆ. ತಿಪ್ಪೇಸ್ವಾಮಿ

ಬಿಡಿಸಿಸಿ ಬ್ಯಾಂಕ್ಗೆ ದೇಶದಲ್ಲೇ ಮೊದಲ ಸಹಕಾರ ಬ್ಯಾಂಕ್ ಎಂಬ ಹೆಗ್ಗಳಿಕೆ: ಕೆ. ತಿಪ್ಪೇಸ್ವಾಮಿ  BIDCC Bank holds the distinction of being the country's first cooperative bank: K. Thippeswamy

ಕೊಟ್ಟೂರು 27: ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳನ್ನು ಗಣಕೀಕರಣಗೊಳಿಸಿ (ಕಂಪ್ಯೂಟರೀಕರಣ), ಆನ್ಲೈನ್ ಪೋರ್ಟಲ್ ಮೂಲಕ ಇಏಅಅ ಯೋಜನೆ ಅನುಷ್ಠಾನಗೊಳಿಸಿರುವ ದೇಶದ ಮೊದಲ ಸಹಕಾರ ಬ್ಯಾಂಕ್ ಎಂಬ ಹೆಗ್ಗಳಿಕೆಗೆ ಬಿಡಿಸಿಸಿ ಬ್ಯಾಂಕ್ ಪಾತ್ರವಾಗಿದೆ ಎಂದು ಬ್ಯಾಂಕ್ ಅಧ್ಯಕ್ಷ ಕೆ. ತಿಪ್ಪೇಸ್ವಾಮಿ ತಿಳಿಸಿದರು.  

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ 46 ವರ್ಷಗಳಿಂದ ಬ್ಯಾಂಕ್ ನಿರಂತರ ಲಾಭದಲ್ಲಿದ್ದು, 2025ಹಿ26್ಫೂ ಸಾಲಿನಲ್ಲೂ 13.08 ಕೋಟಿ ನಿವ್ವಳ ಲಾಭ ಗಳಿಸಿದೆ ಎಂದು ಹೇಳಿದರು.  ಬ್ಯಾಂಕ್ನಲ್ಲಿ 1,873.03 ಕೋಟಿ ಠೇವಣಿ ಹಾಗೂ 3,011.18 ಕೋಟಿ ವಹಿವಾಟು ದಾಖಲಾಗಿದ್ದು, ಇದುವರೆಗೆ 1,781.76 ಕೋಟಿ ಸಾಲ ವಿತರಿಸಲಾಗಿದೆ ಎಂದು ಮಾಹಿತಿ ನೀಡಿದರು.  

ಗ್ರಾಹಕರ ಅನುಕೂಲಕ್ಕಾಗಿ ಬ್ಯಾಂಕ್ ಶಾಖೆಗಳಿಲ್ಲದ ಪ್ರದೇಶಗಳಲ್ಲಿ ಎಟಿಎಂ ಸೇವೆ ಆರಂಭಿಸಲಾಗಿದ್ದು, ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಟ್ಯಾಬ್ ಆಧಾರಿತ ಖಾತೆಗಳನ್ನೂ ಆರಂಭಿಸಲಾಗಿದೆ ಎಂದು ಹೇಳಿದರು.  

ಕುಮಾರಸ್ವಾಮಿ ನೇತೃತ್ವದ ಸರ್ಕಾರದ ಅವಧಿಯಲ್ಲಿ ರೈತರ ಸಾಲಮನ್ನಾ ಜಾರಿಯಾದ ಸಂದರ್ಭದಲ್ಲಿ ಸರ್ಕಾರದಿಂದ ಬ್ಯಾಂಕ್ಗೆ ಬರಬೇಕಿರುವ ?13 ಕೋಟಿ ಇನ್ನೂ ಬಾಕಿಯಿದೆ ಎಂದು ಅವರು ತಿಳಿಸಿದರು.  

ಇತ್ತೀಚೆಗೆ ಗುಡೆಕೋಟೆ ಗ್ರಾಮದಲ್ಲಿ ಹೊಸ ಶಾಖೆ ಆರಂಭಿಸಲಾಗಿದ್ದು, ಮೂರು ನಾಲ್ಕು ಕಡೆ ನೂತನ ಕಡೆಗಳಲ್ಲಿ ಹೊಸ ಶಾಖೆಗಳನ್ನು ತೆರೆಯಲು ಯೋಜನೆ ರೂಪಿಸಲಾಗಿದೆ ಎಂದು ಹೇಳಿದರು. ವಿಜಯನಗರ ಹಾಗೂ ಮೂಲ ಬಳ್ಳಾರಿ ಜಿಲ್ಲೆಗಳ ವ್ಯಾಪ್ತಿಯಲ್ಲಿ ಬಿಡಿಸಿಸಿ ಬ್ಯಾಂಕ್ ಗ್ರಾಹಕರ ವಿಶ್ವಾಸಾರ್ಹ ಬ್ಯಾಂಕ್ ಆಗಿ ಗುರುತಿಸಿಕೊಂಡಿದ್ದು, ಕಳೆದ 46 ವರ್ಷಗಳಿಂದ ನಿರಂತರವಾಗಿ ಲಾಭಾಂಶ ನೀಡುತ್ತಾ ಬಂದಿದೆ ಎಂದು ಅವರು ತಿಳಿಸಿದರು.  

ಸುದ್ದಿಗೋಷ್ಠಿಯಲ್ಲಿ ಬ್ಯಾಂಕ್ ಉಪಾಧ್ಯಕ್ಷ ಐ. ದಾರುಕೇಶ್, ನಿರ್ದೇಶಕರಾದ ಮೂಕಯ್ಯಸ್ವಾಮಿ, ಸಿ.ಎಸ್‌. ಆನಂದ, ಚಿದಾನಂದ, ಕೊಟ್ರ​‍್ಪ, ಬಸವರಾಜ ಹಾಗೂ ಬ್ಯಾಂಕ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಪಿ. ಜಯಪ್ರಕಾಶ್ ಉಪಸ್ಥಿತರಿದ್ದು, ಬ್ಯಾಂಕ್ನ ವಿವಿಧ ಹಣಕಾಸು ಹಾಗೂ ಅಭಿವೃದ್ಧಿ ಕಾರ್ಯಕ್ರಮಗಳ ಕುರಿತು ಮಾಹಿತಿ ನೀಡಿದರು.