ಕಲೆ ಮತ್ತು ಕಲಾವಿದರು ದೇಶದ ಸಂಸ್ಕೃತಿಯ ಹರಿಕಾರರು : ಪ್ರಕಾಶ ಕೋಳಿವಾಡ
Art and artists are the torchbearers of the country's culture: Prakash Koliwad
ರಾಣೆಬೆನ್ನೂರು, ಆ.20: ಭಾರತೀಯ ಸಂಸ್ಕೃತಿಯ ಪರಂಪರೆಯಲ್ಲಿ ನಾಡಿನ ಕಲೆ ಮತ್ತು ಕಲಾವಿದರು ಬಹುಸಂಸ್ಕೃತಿಯ ಮೂಲಕ ಜನಮನವನ್ನು ಗೆದ್ದಿದ್ದಾರೆ. ಇಂತಹ ಕಲೆ ಹಾಗೂ ಕಲಾವಿದರು ಉಳಿದು ಬೆಳೆಯಬೇಕಾದರೆ ಸಾರ್ವಜನಿಕರು ಹಾಗೂ ಸಂಘ-ಸಂಸ್ಥೆಗಳ ಸಹಕಾರ ಅತ್ಯಂತ ಮುಖ್ಯ ಎಂದು ಶಾಸಕ ಪ್ರಕಾಶ ಕೋಳಿವಾಡ ಹೇಳಿದರು.
ನಗರದ ಕೂನಬೇವು ಫ್ಲಾಟ್ನ ಬಾಬು ಜಗಜೀವನರಾಂ ಸಭಾಭವನದಲ್ಲಿ ಸ್ಥಳೀಯ ಮಾತೋಶ್ರೀ ಮಹಾದೇವಕ್ಕ ಮಂಗಳವಾದ್ಯ ಮತ್ತು ಸಂಗೀತ ತರಬೇತಿ ಸಂಸ್ಥೆ ಆಯೋಜಿಸಿದ್ದ 6ನೇ ವಾರ್ಷಿಕೋತ್ಸವ ಹಾಗೂ ನಾಡಿನ ಖ್ಯಾತ ವಾದ್ಯಗಾರ್ ಕಲಾವಿದರಿಗೆ ‘ವಾದ್ಯ ಕಲಾರತ್ನ’ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಭಾರತೀಯ ಸಂಸ್ಕೃತಿ ಮತ್ತು ಸಂಸ್ಕಾರಗಳು ಪರಂಪರೆಯಿಂದ ಮುಂದುವರಿದು ಬಂದಾಗ ಮಾತ್ರ ಸಮಾಜಕ್ಕೆ ಸಾಂಸ್ಕೃತಿಕ ಸಂಸ್ಕಾರ ದೊರೆಯುತ್ತದೆ. ಕಲಾ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಕಲಾವಿದರಿಗೆ ಸರ್ಕಾರ ಹಾಗೂ ಜನಪ್ರತಿನಿಧಿಗಳು ಅಗತ್ಯ ಸಹಕಾರ ನೀಡಬೇಕು ಎಂದು ಹೇಳಿದರು.
ಸಾರ್ವಜನಿಕರನ್ನು ಮನರಂಜಿಸುವ ಕಲಾವಿದರು ಹಲವು ಕಷ್ಟ-ನಷ್ಟಗಳನ್ನು ಅನುಭವಿಸಿ ಜೀವನ ಸಾಗಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಸರ್ಕಾರ ಮತ್ತು ಜನಪ್ರತಿನಿಧಿಗಳು ಕಲಾವಿದರ ಬಗ್ಗೆ ಆಸಕ್ತಿ ವಹಿಸಿ, ಆಯಾ ಪ್ರದೇಶಗಳಲ್ಲಿ ಅನುದಾನ ಒದಗಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸಬೇಕು ಎಂದರು.
ಈ ಸಂದರ್ಭದಲ್ಲಿ ಖ್ಯಾತ ಕಲಾವಿದರಾದ ಪುಂಡಲೀಕ ಭಜಂತ್ರಿ, ಅಶೋಕ ಭಜಂತ್ರಿ, ಲಕ್ಷ್ಮೀ ರಾಮ್, ಸಂಗೀತ ಶ್ರೀನಿವಾಸ್, ಶರಣಪ್ಪ ಪೂಜಾರ, ಟಿ. ಬಸವರಾಜ್ ಹಾಗೂ ಗುರು ಭಜಂತ್ರಿ ಅವರಿಗೆ ಶಾಸಕ ಪ್ರಕಾಶ ಕೋಳಿವಾಡ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಿದರು.
ಸಂಸ್ಥೆಯ ಅಧ್ಯಕ್ಷೆ ಶ್ರೀಮತಿ ಮಹಾದೇವಕ್ಕ ಸಾವಕ್ಕನವರ್ ಅಧ್ಯಕ್ಷತೆ ವಹಿಸಿದ್ದರು. ದಲಿತ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಡಾ. ಶರೀಫ್ ಮಾಕಪ್ಪನವರ್ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಲಾವಿದ ಅಶೋಕ ಭಜಂತ್ರಿ ಪ್ರಾರ್ಥಿಸಿದರು. ಶಿಕ್ಷಕಿ ಇಂದಿರಾ ಕೊಪ್ಪದ ಸ್ವಾಗತಿಸಿ ನಿರೂಪಿಸಿದರು. ಗೌತಮ್ ಸಾವಕ್ಕನವರ್ ವಂದಿಸಿದರು.
ನಂತರ ನಾಡಿನ ಖ್ಯಾತ ಕಲಾವಿದರಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿ ಸಾರ್ವಜನಿಕರ ಗಮನ ಸೆಳೆದವು. ಸಮಾರಂಭದಲ್ಲಿ ಟಿಪ್ಪೇಶ್ವರ ಚಲವಾದಿ, ನಿತ್ಯಾನಂದ ಕುಂದಾಪುರ, ಬಡವಪ್ಪ ಆನವಟ್ಟಿ, ಮಧುಕುಮಾರ ಹರಿಜನ, ಗೀತಾ ಲಮಾಣಿ, ಕಲಾ ನಿರ್ದೇಶಕ ಬಸವರಾಜ ಸಾವಕ್ಕನವರ್, ಶ್ರೀಮತಿ ಮಮತಾ ಸಾವಕ್ಕನವರ್, ಎ.ಎಂ. ಅರುಣಕುಮಾರ ಸೇರಿದಂತೆ ಸಂಸ್ಥೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು
ನಾಗರಿಕರ ಬಹುಕೋಟಿ ಹಣ ವಂಚನೆ ಪ್ರಕರಣ: ಮತ್ತೋರ್ವ ಆರೋಪಿಯ ಬಂಧನ 