ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಗಳ ಮೇಲೆ ಕಲ್ಲು ತೂರಾಟ ಘಟನೆ ಖಂಡಸಿ ಮರಾಠ ಸಮಾಜದ ವತಿಯಿಂದ ತಹಶೀಲ್ದಾರಗೆ ಮನವಿ
Appeal to the Tahsildar on behalf of the Maratha community condemning the incident of stone pelting
ತಾಳಿಕೋಟಿ 21: ಮೊನ್ನೆ ಬಾಗಲಕೋಟೆ ನಗರದಲ್ಲಿ ಛತ್ರಪತಿ ಶಿವಾಜಿ ಮಹಾರಾಜ್ ರ ಜಯಂತಿ ಕಾರ್ಯಕ್ರಮದ ಮೆರವಣಿಗೆ ಸಂದರ್ಭದಲ್ಲಿ ತಡರಾತ್ರಿ ಕಿಡಿಗೇಡಿಗಳು ಉದ್ದೇಶ ಪೂರ್ವಕವಾಗಿ ಮೆರವಣಿಗೆ ನಿರತ ಕಾರ್ಯಕರ್ತರ ಮೇಲೆ, ಭದ್ರತೆಗೆ ನಿಯೋಜನೆಗೊಂಡ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಗಳ ಮೇಲೆ ಕಲ್ಲು ತೂರಾಟ ನಡೆಸಿರುವ ಘಟನೆ ಖಂಡಸಿ ಮರಾಠ ಸಮಾಜದ ವತಿಯಿಂದ ಮಾನ್ಯ ತಹಶೀಲ್ದಾರ ಅವರಿಗೆ ಶನಿವಾರ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಆರ್.ಎಸ್.ಪಾಟೀಲ (ಕೂಚಬಾಳ) ಮಾತನಾಡಿರಾಜ್ಯದ ಕಾನೂನು ಮತ್ತು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ.
ಈ ಕಾಂಗ್ರೇಸ್ ಸರ್ಕಾರದ ತುಷ್ಟಿಕರಣ ನೀತಿ, ಮೃದು ಧೋರಣೆ ನೀತಿಯೇ ಈ ಘಟನೆಗೆ ಕಾರಣವಾಗಿದೆ. ಕಿಡಿಗೇಡಿಗಳನ್ನು ಕೂಡಲೇ ಪತ್ತೇಹಚ್ಚಿ, ಹೆಡೆಮುರಿ ಕಟ್ಟಬೇಕೆಂದು ನಾನು ಸರ್ಕಾರವನ್ನು ಒತ್ತಾಯ ಮಾಡುತ್ತೇನೆ ಎಂದರು.ಈ ಸಂದರ್ಭದಲ್ಲಿ ಮರಾಠ ಸಮಾಜದ ಅಧ್ಯಕ್ಷರಾದ ಸಂಬಾಜಿ ವಾಡಕರ,ಶಶಿಧರ ಡಿಸಲೆ ,ಕಾಶಿರಾಯ ಮೋಹಿತೆಪುರಸಭಾ ಸದಸ್ಯರಾದ ಜಯಸಿಂಹ ಮೂಲಿಮನಿ,ಅಣ್ಣಪ್ಪ ಜಗತಾಪ,ಶ್ರೀಜನಸೇನಾ ಸಂಘಟನೆಯ ಅಮಿತ ಮನಗೂಳಿ,ರವೀಂದ್ರ ಕಟ್ಟಿಮನಿ,ವಿಠ್ಠಲ ಮೋಹಿತೆ ಮಾನಸಿಂಗ ಕೊಕಟನೂರ,ರತನಸಿಂಗ ಕೊಕಟನೂರ, ಸುರೇಶ ಹಜೇರಿ,ಗುರುರಾಜ ಮಾನೆ,ಈಶ್ವರ ಹೂಗಾರ,ಮಯೂರ ಪಾಟೀಲ,ಲಂಕೇಶ ಪಾಟೀಲ, ಸಿದ್ಧು ಸಾಳುಂಕೆ,ಸೇರಿದಂತೆ ಮತ್ತೀತರರು ಉಪಸ್ಥಿತರಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 