ಬೀದಿ ನಾಯಿಗಳು ನಿಯಂತ್ರಣ ಮಾಡಬೇಕೆಂದು ಮನವಿ
Appeal to control stray dogs
ಜಮಖಂಡಿ 22: ಸಾರ್ವಜನಿಕ ಹಿತದೃಷ್ಟಿಯಿಂದ ನಗರದ ವ್ಯಾಪ್ತಿಯಲ್ಲಿ ಬೀದಿ ನಾಯಿಗಳು, ದನಗಳ ಉಪಟ್ಟಳ ಹೆಚ್ಚಾಗಿರುವ ಕಾರಣ. ಅವುಗಳ ನಿಯಂತ್ರಣ ಮಾಡಬೇಕೆಂದು ಕರ್ನಾಟಕ ರಾಜ್ಯ ನಿವೃತ ನೌಕರರ ಸಂಘ ಹಾಗೂ ಸೀಮಿ ಲಕ್ಷ್ಮೀ ಭಕ್ತ ಮಂಡಳಿಯವರು ಎಸಿ, ಶ್ವೇತಾ ಬೀಡಿಕರ ಹಾಗೂ ನಗರಸಭೆ ಪೌರಾಯುಕ್ತ ಜೋತಿ ಗೀರೀಶ ಅವರಿಗೆ ಪ್ರತ್ಯೇಕವಾಗಿ ಮನವಿ ಸಲಿಸಿದರು.
ದಿನದಿಂದ ದಿನಕ್ಕೆ ಬೀದಿನಾಯಿಗಳ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ಹಗಲು ಹೊತ್ತಿನಲ್ಲಿ ಸಣ್ಣ ಮಕ್ಕಳು ಹಾಗೂ ವಯೋವೃದ್ಧರು ನಿರಾತಂಕವಾಗಿ ತಿರುಗಾಡಲು ಕಷ್ಟವಾಗಿರುತ್ತದೆ. ಪ್ರತಿ ನಿತ್ಯ ಜೀವ ಭಯದಲ್ಲಿ ತಿರುಗಾಡುವ ಪರಿಸ್ಥಿತಿ ಉಂಟಾಗಿದೆ. ಶಾಲೆಗೆ ಹೋದ ಮಕ್ಕಳು, ಹೊರಗೆ ಹೋದ ವಯೋವೃದ್ಧರು ಹಾಗೂ ಹೆಣ್ಣು ಮಕ್ಕಳು ನಾಯಿಗಳ ಉಪಟ್ಟಳದಿಂದ ಮರಳಿ ಮನೆಗೆ ಬರುತ್ತಾರೆಂದು ಭರವಸೆ ಇಲ್ಲದಂತಾಗಿದೆ ಎಂದು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು.
ನಿಯಂತ್ರಣಕ್ಕೆ ಪ್ರಾಣಿ ದಯಾ ಕೇಂದ್ರಗಳ ಹಾಗೂ ಪ್ರಾಣಿ ದಯಾ ಕಾರ್ಯಕರ್ತರ ಚಟುವಟಿಕೆಗಳು ಪರಿಣಾಮಕಾರಿಯಾಗಿ ಸಕಾರಾತ್ಮಕವಾಗಿರಲು ಸಾರ್ವಜನಿಕರಿಗೆ ಕಂಡು ಬರುವಂತೆ ಕ್ರಮ ವಹಿಸಬೇಕು. ಬೀದಿ ನಾಯಿಗಳ ಹಾಗೂ ಸಾರ್ವಜನಿಕ ಗೋಶಾಲೆಗಳಲ್ಲಿ ಸಮರ್ಕವಾಗಿ ಸಾಕಿ ಸಲಹುವ ವ್ಯವಸ್ಥೆ ಮಾಡಬೇಕು. ಬೀದಿ ನಾಯಿಗಳ ಹಾಗೂ ದನಗಳಿಂದ ಹಾನಿಗೊಳಗಾದ ವ್ಯಕ್ತಿಗಳಿಗೆ ತಕ್ಷಣ ವೈದ್ಯಕೀಯ ಉಪಚಾರ ಮತ್ತು ಪರಿಹಾರ ದೊರಕುವಂತಾಗಬೇಕು ಒತ್ತಾಯಿಸಿದರು.
ಇದೇ ಸಂದರ್ಭದಲ್ಲಿ ಯು.ಕೆ. ಗಸ್ತಿ, ಎಚ್.ಎಮ್.ಶೆಟ್ಟರ, ಆರ್.ಎಲ್.ಪವಾರ, ಕೆ.ಜಿ.ಘಂಟಿ, ಪಿ.ವ್ಹಿ ತುಳಸಿಗೇರಿ, ಸಿ.ಪಿ. ಮೇಗಾಡಿ, ಎಸ್.ಕೆ.ಧರಿಗೊಂಡ, ಎಸ್.ಆರ್ ಪಾಟೀಲ, ರುದ್ರಗೌಡ ಪಾಟೀಲ, ಡಿ.ಎಲ್.ಮಾಳಿ, ಎಸ್.ಎನ್.ಸವದಿ, ಟಿ.ಪಿ.ಇಟ್ನಾಳ, ಎಸ್.ಎಮ್.ಸೊನ್ನದ, ಎಸ್.ಜಿ.ಪೂಜಾರ, ಡಿ.ಆರ್.ಮಾಳಿ, ಎ.ಕೆ.ಕುಮಟಹಳ್ಳಿ, ಆರ್.ಎಚ್.ರಾಯಚೂರ ಸೇರಿದಂತೆ ಅನೇಕರು ಇದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 