ಮುಂಡಗೋಡ ಕೆಎಸ್‌ಆರ್ಟಿಸಿ ಬಸ್ ಘಟಕ ಅಭಿವೃದ್ಧಿಗೆ ಮನವಿ
Appeal for development of Mundagoda KSRTC bus unit
ಮುಂಡಗೋಡ 30: ಮುಂಡಗೋಡ ಕೆಎಸ್‌ಆರ್ಟಿಸಿ ಬಸ್ ಘಟಕವನ್ನು ಅಭಿವೃದ್ಧಿಪಡಿಸಿ ಅಗತ್ಯ ಮೂಲಸೌಕರ್ಯ ಒದಗಿಸುವಂತೆ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನ ಸೇನೆ ಮುಂಡಗೋಡ ತಾಲೂಕ ಘಟಕದಿಂದ ಸಾರಿಗೆ ಸಚಿವರಿಗೆ ಮನವಿ ಸಲ್ಲಿಸಲಾಯಿತು. ತಾಲೂಕ ಅಧ್ಯಕ್ಷ ಜಗದೀಶ್ ದೈವಜ್ಞ ಅವರ ನೇತೃತ್ವದಲ್ಲಿ ತಹಶೀಲ್ದಾರ ಜಿ.ಬಿ. ಭಟ್ ಅವರ ಮೂಲಕ ಮನವಿ ನೀಡಲಾಯಿತು. ಬಸ್ ಘಟಕದ ಆವರಣವನ್ನು ಕಾಂಕ್ರೀಟೀಕರಣ ಗೊಳಿಸುವುದು, ಡಿಪೋಗೆ ಹೊಸ ಬಸ್ಸುಗಳನ್ನು ಒದಗಿಸುವುದು, ಹಳೆಯ ಬಸ್ಸುಗಳಿಂದ ಉಂಟಾಗುತ್ತಿರುವ ಸಂಚಾರ ವ್ಯತ್ಯಯ ನಿವಾರಣೆ, ನಿಲ್ದಾಣಕ್ಕೆ ಅಗತ್ಯ ಸಿಬ್ಬಂದಿ ನೇಮಕ ಹಾಗೂ ಶೌಚಾಲಯಗಳ ಸಮಸ್ಯೆಗಳಿಗೆ ತ್ವರಿತ ಪರಿಹಾರ ನೀಡಬೇಕೆಂದು ಮನವಿಯಲ್ಲಿ ಆಗ್ರಹಿಸಲಾಗಿದೆ. ಈ ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನ ಸೇನೆ ಜಿಲ್ಲಾಧ್ಯಕ್ಷರು ಜಗದೀಶ್ ದೈವಜ್ಞ, ದುರ್ಗಪ್ಪ ಭೋವಿ, ವಿರುಪಾಕ್ಷಿ ಸಾಗರ, ಬಸವರಾಜ ಗೌಳಿ, ಪ್ರಕಾಶ್ , ರಾಮಣ್ಣ ಗೌಳಿ, ಅರುಣ್ , ಮಾರುತಿ ಭೋವಿ, ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 