ಬಸ್ ಸೌಕರ್ಯ ಒದಗಿಸಲು ಅಂಬೇಡ್ಕರ್ ಸೇನೆ ಮನವಿ
Ambedkar Sena appeals to provide bus facilities
ತಾಳಿಕೋಟಿ: ಪಟ್ಟಣದಿಂದ ಮುದ್ದೇಬಿಹಾಳ ಮಾರ್ಗಕ್ಕೆ ರಾತ್ರಿ ಏಳು ಗಂಟೆಯ ನಂತರ ರಾತ್ರಿ 9 ರವರೆಗೆ ಯಾವುದೇ ಬಸ್ ಸೇವೆ ಇಲ್ಲದ ಕಾರಣ ರಾತ್ರಿ 9:00 ನಂತರ ಹೋಗಲು ಮಹಿಳೆಯರಿಗೆ ಸಾರ್ವಜನಿಕರಿಗೆ ವೃದ್ಧರಿಗೆ ತೊಂದರೆಯಾಗುತ್ತಿದ್ದು ರಾತ್ರಿ ವೇಳೆ ಎಂಟು ಗಂಟೆಗೆ ಮುದ್ದೇಬಿಹಾಳ ಮಾರ್ಗಕ್ಕೆ ಒಂದು ಬಸ್ಸನ್ನು ಬೀಡಬೇಕೆಂದು ಒತ್ತಾಯಿಸಿ ಅಂಬೇಡ್ಕರ್ ಸೇನೆ ತಾಲೂಕ ಘಟಕದ ಪದಾಧಿಕಾರಿಗಳು ಶನಿವಾರ ಘಟಕ ವ್ಯವಸ್ಥಾಪಕರಿಗೆ ಮನವಿ ಸಲ್ಲಿಸಿದರು. ಮನವಿ ಪತ್ರದಲ್ಲಿ ಬಸ್ ನಿಲ್ದಾಣದ ಒಳಗಿನ ಸಿಸಿ ರಸ್ತೆ ತುಂಬಾ ಹಾಳಾಗಿ ತೆಗ್ಗು ಬಿದ್ದಿರುವುದರಿಂದ ಗಲೀಜು ನೀರು ನಿಂತು ಪ್ರಯಾಣಿಕರಿಗೆ ತೊಂದರೆ ಉಂಟಾಗುತ್ತಿದೆ ಮತ್ತು ವಾಹನಗಳು ಓಡಾಡಲು ಅನಾನಕೂಲವಾಗುವ ಕಾರಣ ಗುಣಮಟ್ಟದ ರಸ್ತೆ ಮಾಡಬೇಕೆಂದು ಕೇಳಿಕೊಳ್ಳಲಾಗಿದೆ.ಈ ಸಂದರ್ಭದಲ್ಲಿ ಅಂಬೇಡ್ಕರ್ ಸೇನೆ ಜಿಲ್ಲಾ ಉಪಾಧ್ಯಕ್ಷಬಸ್ಸು ಈ ಮಾದರ, ಅಂಬೇಡ್ಕರ್ ಸೇನೆ ತಾಳಿಕೋಟೆ ತಾಲೂಕಾಧ್ಯಕ್ಷ ಗೋಪಾಲ ಕಟ್ಟಿಮನಿ, ತಾಲೂಕ ಖಜಾಂಚಿ ಪರಶುರಾ ತಳವಾರ, ಶಿವಪುರ ಗ್ರಾಮ ಘಟಕದ ಅಧ್ಯಕ್ಷ ಯಮನಪ್ಪ ನಾಯ್ಕೋಡಿ, ಆಸಿಫ್ ಕೆಂಭಾವಿ, ಭುವನ್ ಅಂಬಿಗೇರ ಇದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 