ಕಡಲೆ ಬೆಳೆಯಲ್ಲಿ ಪೋಷಕಾಂಶ ನಿರ್ವಹಣೆ ಬಗ್ಗೆ ಸಲಹೆ
Advice on nutrient management in chickpea crop
ಗದಗ 20: ಜಿಲ್ಲೆಯಲ್ಲಿ ಪ್ರಸ್ತುತ ಕಡಲೆ ಬೆಳೆಯು ಹೂವಾಡುವ ಹಂತದಿಂದ ಕಾಯಿ ಕಟ್ಟುವ ಹಂತದವರೆಗಿದೆ. ಬಹಳಷ್ಟು ಕಡೆಗಳಲ್ಲಿ, ಪೋಷಕಾಂಶಗಳ ಕೊರತೆಯಿಂದ ಸದರಿ ಬೆಳೆಯು ಹಳದಿ ಹಾಗೂ ಕೆಂಪು ಬಣ್ಣಕ್ಕೆ ತಿರುಗಿ ಒಣಗಿದ ಹಾಗೆ ತಾಕಿನಲ್ಲಿ ಕಾಣಸಿಗುತ್ತಿದೆ.
ಪೋಷಕಾಂಶಗಳ ಕೊರತೆಯಿಂದ ಬೆಳೆಯ ಬೆಳವಣಿಗೆ ಕುಂಠಿತವಾಗಿ, ಇಳುವರಿಯು ಕಡಿಮೆಯಾಗುವ ಸಂಭವವಿರುತ್ತದೆ. ರೈತರು ತಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರದಲ್ಲಿ ರಿಯಾಯಿತಿ ದರದಲ್ಲಿ ಲಭ್ಯವಿರುವ ದ್ರವರೂಪದ ಲಘುಪೋಷಕಾಂಶಗಳ ಮಿಶ್ರಣವನ್ನು (2ಮಿ.ಲೀ./ಲೀ.) ಶಿಫಾರಸ್ಸಿಗನುಗುಣವಾಗಿ ಬೆಳೆಗೆ ಸಿಂಪಡಿಸಿದ್ದಲ್ಲಿ, ಎಲ್ಲ ಪೋಷಕಾಂಶಗಳು ಬೆಳೆಗೆ ಒದಗಿ, ಬೆಳೆಯು ಸಮೃದ್ಧವಾಗಿ, ಇಳುವರಿಯು ಉತ್ತಮವಾಗಿರುತ್ತದೆ ಎಂದು ಗದಗ ಜಿಲ್ಲಾ ಜಂಟಿ ಕೃಷಿ ನಿರ್ದೇಶಕರಾದ ಶ್ರೀಮತಿ ಚೇತನಾ ಪಾಟೀಲ ತಿಳಿಸಿದ್ದಾರೆ.
ಬೆಳೆಗೆ ಬೇಕಾದ ಬೊರೋನ್ ಮೂಲದ ಪೋಷಕಾಂಶವನ್ನು ಶಿಫಾರಸ್ಸಿಗನ್ವಯ ದ್ರವರೂಪದ ಕನ್ಸೋರ್ಷಿಯಾದ ಜೊತೆಗೆ (2ಮಿ.ಲೀ./ಲೀ.) ಸಿಂಪರಣೆ ಮಾಡಿದಲ್ಲಿ, ಚೆನ್ನಾಗಿ ಹೂವು ಹಿಡಿದು, ಕಾಯಿ ಕಟ್ಟಿ, ಗುಣಮಟ್ಟದ ಉತ್ಪಾದನೆಗೆ ಸಹಕಾರಿಯಾಗುತ್ತದೆ. ಸದರಿ ಎಲ್ಲ ಪೋಷಕಾಂಶಗಳು ಕೃಷಿ ಇಲಾಖೆಯ ರೈತ ಸಂಪರ್ಕ ಕೇಂದ್ರಗಳಲ್ಲಿ ರಿಯಾಯಿತಿ ದರದಲ್ಲಿ ಲಭ್ಯವಿದ್ದು, ಜಿಲ್ಲೆಯ ಎಲ್ಲ ರೈತರು ಅವುಗಳ ಉಪಯೋಗ ಪಡೆಯುವಂತೆ ಜಂಟಿ ಕೃಷಿ ನಿರ್ದೇಶಕರು ಮನವಿ ಮಾಡಿದ್ದಾರೆ. ಸದರಿ ಪೋಷಕಾಂಶಗಳನ್ನು ರೈತ ಬಾಂಧವರು ಸಿಂಪಡಿಸುವ ಕೀಟನಾಶಕಗಳ ಜೊತೆಗೆ ಕೂಡ ಮಿಶ್ರ ಮಾಡಿ ಸಿಂಪಡಿಸಬಹುದಾಗಿದೆ ಎಂದು ತಿಳಿಸಿದ್ದಾರೆ.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 