ಲೋಕದರ್ಶನ ವರದಿ
ಬೆಳಗಾವಿ, 4: ಯಾವತ್ತು ಹೊಸತನವನ್ನೊಡುಕ್ಕುತ್ತಿರುವ ಬೆಳಗಾವಿ ದಕ್ಷಿಣ ವಿಧಾನಸಭಾ ಶಾಸಕ ಅಭಯ ಪಾಟೀಲರು ಬೆಳಗಾವಿಯ ಶಾಹಪುರದಲ್ಲಿರುವ ಶಿವಾಜಿ ಉದ್ಯಾನವನದಲ್ಲಿ ನಿರ್ಮಿಸಿರುವ ಶಿವಾಜಿ ಮಹಾರಾಜರ ಕುರಿತ ಚಿತ್ರಗಳು ಹಾಗು ಸಂಗೀತ ಕಾರಂಜಿಗಾಗಿ ಶಿವಾಜಿ ಮಹಾರಾಜರ ಜೀವನವನ್ನ ಕುರಿತ "ಶಿವಚರಿತ್ರೆಯ ಹೆಸರಲ್ಲಿ ಸಾಹಿತ್ಯವನ್ನ ಸ್ವತಃ ತಾವೆ ಬರೆದು ಇದನ್ನ ಉತ್ತಮವಾಗಿ ದ್ವನಿ ಮುದ್ರಿಸುವ ಕನಸು ಕಂಡಿದ್ದರು. ಮರಾಠಿ ಭಾಷೆಯಲ್ಲಿ ಈ ಸಾಹಿತ್ಯವನ್ನ ದ್ವನಿರೊಪಕಕ್ಕಾಗಿ ಪುಣೆಯ ಹೆಸರಾಂತ ಸ್ಟೊಡಿಯೋದವರು ನಿರ್ಮಿಸಿದ್ದರು. ಇದರ ಕನ್ನಡ ಅವತರಣಿಕೆಯ ಜವಬ್ದಾರಿಯನ್ನ ಬೆಳಗಾವಿಯ ಸಿನಿ ಹಾಗು ಕಿರುತೆರೆ ಕಲಾವಿದ ಮತ್ತು ಕೆ.ಎಲ್.ಇ ವಿಶ್ವವಿದ್ಯಾಲಯದ ಮಾಜಿ ಮಾಧ್ಯಮ ಸಂಯೋಜಕ ಎನ್.ನಟರಾಜ್ ಇವರಿಗೆ ಬೆಳಗಾವಿ ನಗರಾಭಿವೃದ್ದಿ ಪ್ರಾಧಿಕಾರದಿಂದ ನೀಡಲಾಗಿತ್ತು. ಕನ್ನಡದ ಸಿನಿಮಾರಂಗದ ಹೆಸರಾಂತ ಕಂಠದಾನ ಕಲಾವಿದರನ್ನ ಬಳಸಿ ಉಮಾ ಮಿಡಿಯಾ ಕನ್ಸಲ್ಟೆನ್ಸಿ ಅಡಿಯಲ್ಲಿ ಯಶಸ್ವಿಯಾಗಿ ನಿರ್ಮಿಸಲಾಗಿದ್ದು ಶಾಸಕ ಅಭಯ ಪಾಟೀಲರು ತಮ್ಮ ಮಹತ್ವದ ಆಸೆಯಾದ "ಶಿವಚರಿತ"ಯ ಕನ್ನಡ ಆಡಿಯೋವನ್ನ ಆಲಿಸುತ್ತಿರುವುದು. ಚಿತ್ರದಲ್ಲಿ ಕನ್ನಡ ಅವತರಣಿಕೆಯನ್ನ ನಿರ್ಮಿಸಿದ ಎನ್. ನಟರಾಜ ಇದ್ದಾರೆ.