ಶ್ರೀಕಾಂತ್ ಪೂಜಾರಗೆ ಕರ್ನಾಟಕ ವಿಕಾಸ ರತ್ತ ಪ್ರಶಸ್ತಿ ಪ್ರಧಾನ : ಹಲವರಿಂದ ಹರ್ಷ ಅಭಿನಂದನೆ
ಕೊಪ್ಪಳ 03: ಜಿಲ್ಲೆಯ ಕುಕನೂರು ತಾಲೂಕಿನ ಇಟಗಿ ಗ್ರಾಮದ ಹಿರಿಯ ನಿವಾಸಿ ಪ್ರಗತಿಪರ ರೈತ ಶ್ರೀಕಾಂತ್ ಡಿ ಪೂಜಾರ್ ರವರಿಗೆ ಸುರ್ವೇ ಕಲ್ಚರಲ್ ಅಕಾಡೆಮಿ ಬೆಂಗಳೂರು ವತಿಯಿಂದ ಕೊಡ ಮಾಡುವ ಪ್ರತಿಷ್ಠಿತ ಕರ್ನಾಟಕ ವಿಕಾಸ ರತ್ನ ರಾಜ್ಯ ಮಟ್ಟದ ಪ್ರಶಸ್ತಿಯನ್ನು ಪ್ರಧಾನ ಮಾಡಿ ಸತ್ಕರಿಸಲಾಯಿತು.
ಬೆಂಗಳೂರಿನಲ್ಲಿ ಜರುಗಿದ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಪಾಲ್ಗೊಳ್ಳಲು ಶ್ರೀಕಾಂತ್ ಪೂಜಾರ್ ರವರಿಗೆ ಸಾಧ್ಯ ವಾಗಲಿಲ್ಲ ,ಅವರು ಕಾರ್ಯಕ್ರಮಕ್ಕೆ ಗೈರು ಹಾಜರಾದ ನಿಮಿತ್ಯ ಕಾರ್ಯಕ್ರಮದ ಸಂಘಟಕ ರಮೇಶ್ ಸುರ್ವೆ ರವರ ನೇತೃತ್ವದ ಸಂಘಟಕರ ತಂಡ ಶ್ರೀಕಾಂತ್ ಪೂಜಾರ್ ರವರನ್ನು ಕೊಪ್ಪಳಕ್ಕೆ ಬರಮಾಡಿಕೊಂಡು ಸನ್ಮಾನಿಸಿ ಪ್ರಶಸ್ತಿ ಪ್ರಧಾನ ಮಾಡಲಾಯಿತು,
ಈ ಸಂದರ್ಭದಲ್ಲಿ ನಿವೃತ್ತ ಶಿಕ್ಷಕ ಉಮೇಶ್ ಸುರ್ವೇ, ಹಿರಿಯ ಪತ್ರಕರ್ತ ಎಂ ಸಾಧಿಕ್ ಅಲಿ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು, ಶ್ರೀಕಾಂತ್ ಡಿ ಪೂಜಾರ್ ಅವರಿಗೆ ಪ್ರಶಸ್ತಿ ಲಭಿಸಿರುವುದಕ್ಕೆ ಕುಕನೂರು ತಾಲೂಕಿನ ಅದರಲ್ಲೂ ವಿಶೇಷವಾಗಿ ಇಟಗಿ ಗ್ರಾಮದ ವಿವಿಧ ಸಂಘಟನೆಗಳು ಸೇರಿದಂತೆ ಜಿಲ್ಲೆಯ ಪ್ರಗತಿಪರ ಸಂಘಟನೆಗಳು ಹರ್ಷ ವ್ಯಕ್ತಪಡಿಸಿ ಅಭಿನಂದಿಸಿದ್ದಾರೆ.