ಕನಕಾಂಬರ ಹೂವಿನ ಅಲಂಕಾರದ ಬಂಡಿ ಎಳೆವ ವಿಶಿಷ್ಟ ಮಾರ್ಕೆಪುನವ್ ಜಾತ್ರೆ
A unique Markepunav fair where a cart decorated with Kanakambar flowers is pulled
ಕಾರವಾರ 02: ಕರ್ನಾಟಕ -ಗೋವಾ ರಾಜ್ಯಗಳ ಗಡಿ ಗ್ರಾಮ ಮಾಜಾಳಿಯಲ್ಲಿ ವಿಶಿಷ್ಟ ಸಂಪ್ರದಾಯದ ಮಾರ್ಕೆ ಪುನವ್ ಜಾತ್ರೆಯು ಸೋಮವಾರ ಅದ್ಧೂರಿಯಾಗಿ ಜರುಗಿತು. ಗ್ರಾಮದ ಜನರು ಜಾತ್ರೆಯ ಸಂಭ್ರಮ ಸಡಗರದಲ್ಲಿ ಭಾಗಿಯಾಗಿದ್ದರು. ಮಾರ್ಕೆ ಪುನವ್ ಎಂದು ಕರೆಯುವ ಈ ಜಾತ್ರೆ ’ಭಾರತ ಹುಣ್ಣೆಮೆ’ಯ ದಿನ ನಡೆಯುತ್ತಾ ಬಂದಿದೆ. ಕನಕಾಂಬರ್ ಹೂವಿಂದ ಅಲಂಕರಿಸಿ ,ದೇವಿ ದೇವಸ್ಥಾನದ ತನಕ ಬಂಡೆ ಎಳೆಯುವುದು ಈ ಜಾತ್ರೆಯ ವಿಶೇಷ. ಈ ಜಾತ್ರೆಯಲ್ಲಿ ಸಂಪ್ರದಾಯಗಳು ಚಾಚು ತಪ್ಪದೆ ಕುಳಾವಿಗಳು ನಡೆಸುತ್ತಾರೆ . ಕಾರವಾರ -ಗೋವಾ ಗಡಿ ಭಾಗದ ಮಾಜಾಳಿ ಗ್ರಾಮದಲ್ಲಿ ನಡೆದ ದಾಡ ದೇವರು ಮತ್ತು ದೇವತಿ ದೇವರ ಮಾರ್ಕೆ ಪುನವ್ ಜಾತ್ರೆಯಲ್ಲಿ ಮದುವೆ ಮುಂಚಿತವಾಗಿ ಸಮುದಾಯದ 16 ತುಂಬದ ಗಂಡು ಮಕ್ಕಳ ಹೊಟ್ಟೆಯ ಚರ್ಮಕ್ಕೆ ಸೂಜಿ ದಾರ ಪೋಣಿಸುವ ಸಂಪ್ರದಾಯ, ಮದುವೆಯಾಗದ ಕುವರಿಯರು ಕುಲ ದೇವರಿಗೆ ದೀಪದ ಕಳಸ ( ದೀಪ ಹಚ್ಚಿದ ದೀವಜ್ ) ಹಿಡಿದು ದೇವತಿ ದೇವಸ್ಥಾನ ತನಕ ನಡೆದು ಬರುವ ಹರಕೆ ತೀರಿಸಿದರು . ಭರತ ಹುಣ್ಣಿಮೆಯಂದು ನಡೆದ ಜಾತ್ರೆ ಅದ್ಧೂರಿಯಾಗಿ ನಡೆಯಿತು.ಕಾರವಾರ ಮೂಲದವರು ಗೋವಾ, ಮಹಾರಾಷ್ಟ್ರ ರಾಜ್ಯ ಸೇರಿದಂತೆ ವಿವಿಧ ಕಡೆ ನೆಲಸಿದ ದೇವರ ಭಕ್ತರು ಜಾತ್ರೆಗೆ ಆಗಮಿಸಿ, ಹರಕೆ ತೀರಿಸಿದರು. ಬಂಡಿ ಎಳೆದು ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥಿಸಿದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 