ಶ್ರೀ ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವ-2026 ಮಹಾದಾಸೋಹದಲ್ಲಿ 50 ಜನ ಬಾಣಸಿಗರಿಂದ ಹಪ್ಪಳದ ತಯಾರಿಕೆ
50 chefs prepare Happalam at Sri Gavisiddheshwara Jatra Mahotsav-2026 Mahadasoha
ಕೊಪ್ಪಳ 07: ಶ್ರೀ ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವದ ಪ್ರತಿ ವರ್ಷದಂತೆ ಜಾತ್ರಾ ಮಹಾದಾಸೋಹದಲ್ಲಿ ಈ ವರ್ಷವೂ ಜಾತ್ರಾ ಮಹೋತ್ಸವದ ಮೂರನೇ ದಿನವಾದ 7.01.26ರ ಬುಧವಾರದಂದು ವಿಶೇಷ ಖಾದ್ಯವಾದ ಹಪ್ಪಳ ವಿತರಿಸಲಾಯಿತು. ಕಳೆದ 8 ವರ್ಷಗಳಿಂದ ಜಾತ್ರಾ ವಿವಿಧ ಮಿರ್ಚಿ,ಜಿಲೇಬಿ ತಯಾರಿಕೆಯ ಸೇವೆಗಳಲ್ಲಿ ತೊಡಗಿಸಿಕೊಂಡಿದ್ದ ಬಳ್ಳಾರಿ ಜಿಲ್ಲೆಯ ಸಿರಗುಪ್ಪಾ ತಾಲೂಕಿನ ಸಿರಿಗೇರೆಯ ಗವಿಶ್ರೀ ಸ್ನೇಹ ಗೆಳೆಯರ ಬಳಗ ಹಾಗೂ ಉದಯ ಗ್ರೂಪ್ ಗೆಳೆಯರ ಬಳಗ ಹಾಗೂ ಸಿದ್ರಾಂಪುರ, ಹಾವಿನಾಳ,ಸಿರಿಗೇರಿ,ದಾಸಾಪುರ, ಕೊಂಚಗೇರಿ,ಮುತ್ತಟ್ ನೂರು, ಗುಂಡಿಗನೂರು ಮತ್ತು ಸುತ್ತಮುತ್ತಲಿನ ಗ್ರಾಮಸ್ಥರ ಸಹಭಾಗಿತ್ವದಲ್ಲಿ ಈ ವರ್ಷ ಹಪ್ಪಳ ವಿತರಣಾ ಸೇವೆ ಕೈಗೊಂಡಿದೆ.
ಹಪ್ಪಳ ತಯಾರಿಕೆಗೆ 14 ಡಬ್ಬಿ ಎಣ್ಣೆ, ಹಪ್ಪಳ ತಯಾರಿಕೆಗೆ 50 ಜನ ಬಾಣಸಿಗರು ಹಾಗೂ ಅವರಿಗೆ 20 ಜನ ಸಹಾಯ ಮಾಡುವುದರ ಮೂಲಕ ಹಪ್ಪಳ ತಯಾರಿಕೆಯ ಸೇವೆಯಲ್ಲಿ ತೊಡಗಿಸಿಕೊಂಡಿದ್ದರು. ಒಟ್ಟು 5 ಲಕ್ಷ ಹಪ್ಪಳಗಳನ್ನು ತಯಾರಿಸುವುದರ ಮೂಲಕ ಜಾತ್ರಗೆ ಬಂದ ಭಕ್ತಾಧಿಗಳಿಗೆ ವಿತರಿಸುವ ಸೇವೆಗೈದರು ಎಂದು ಶ್ರೀ ಗವಿಮಠದ ಪ್ರಕಟಣೆ ತಿಳಿಸಿದೆ.
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ 