ಚಿಕ್ಕೋಡಿ-ಸದಲಗಾ ಕ್ಷೇತ್ರದ ಅಭಿವೃದ್ಧಿಗೆ 4 ಕೋಟಿ ವಿಶೇಷ ಅನುದಾನ: ಪ್ರಕಾಶ ಹುಕ್ಕೇರಿ
4 crore special grant for the development of Chikkodi-Sadalaga constituency: Prakash Hukkeri
ಚಿಕ್ಕೋಡಿ 17: ಚಿಕ್ಕೋಡಿಹಿಸದಲಗಾ ಮತಕ್ಷೇತ್ರದ ವ್ಯಾಪ್ತಿಯ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಒಟ್ಟು ರೂ 4 ಕೋಟಿ ರೂ ಅನುದಾನವನ್ನು ಕರ್ನಾಟಕ ಸರ್ಕಾರ ಮಂಜೂರು ಮಾಡಿದೆ ಎಂದು ದೆಹಲಿ ವಿಶೇಷ ಪ್ರತಿನಿಧಿ ಹಾಗೂ ವಿಧಾನ ಪರಿಷತ್ ಸದಸ್ಯ ಪ್ರಕಾಶ ಹುಕ್ಕೇರಿ ತಿಳಿಸಿದರು. ತಾಲೂಕಿನ ಯಕ್ಸಂಬಾ ಪಟ್ಟಣದ ಗೃಹ ಕಚೇರಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಶಾಸಕ ಗಣೇಶ ಹುಕ್ಕೇರಿ ಅವರ ವಿಶೇಷ ಪ್ರಯತ್ನದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವುಕುಮಾರ ಮತ್ತು ವಿವಿಧ ಸಚಿವರು ಅನುದಾನ ಮಂಜೂರು ಮಾಡಿದ್ದಾರೆ ಎಂದರು.
ಇಂಗಳಿ ಗ್ರಾಮಹಿಮರಾಠ ಸಮಾಜ ಯಾತ್ರಿ ನಿವಾಸ ತಡೆಗೋಡೆ ನಿರ್ಮಾಣಕ್ಕೆ 1 ಕೋಟಿ ರೂ. ಪೇವರ್ ರಸ್ತೆ ಮತ್ತು ಕಟ್ಟಡ ಬಣ್ಣ ಹಚ್ಚುವ ಕಾರ್ಯಕ್ಕೆ 20 ಲಕ್ಷ ಮಂಜೂರಾಗಿದ್ದು, ಈ ವರ್ಷ ಮರಾಠ ಸಮಾಜಕ್ಕೆ ಒಟ್ಟಾರೆ 1.20 ಕೋಟಿ ರೂ ಅನುದಾನ ಲಭಿಸಿದೆ. ಕಲ್ಲೋಳಹಿಯಡೂರ ನೂತನ ಬ್ಯಾರೇಜಕ್ಕೆ ಸಾರ್ವಜನಿಕರ ಸುರಕ್ಷತಾ ದೃಷ್ಟಿಯಿಂದ ರಿಲಿಂಗ್ ನಿರ್ಮಾಣ ಮತ್ತು ಬ್ಯಾರೇಜ್‌ನಿಂದ ಮಿರ್ಜೆ ಪೂಜಾರಿ ತೋಟದವರೆಗೆ ರಸ್ತೆ ಸುಧಾರಣೆಗೆ 65 ಲಕ್ಷ ಮಂಜೂರಾಗಿವೆ. ನೇಜ ಗ್ರಾಮ ಹಿ ಸರ್ಕಾರಿ ಪ್ರೌಢ ಶಾಲೆಯಿಂದ ಚಂದ್ರವ್ವತಾಯಿ ಗುಡಿಯವರೆಗೆ ರಸ್ತೆ: 1 ಕೋಟಿ ರೂ.ಮನೂಚವಾಡಿ ಗ್ರಾಮ ಹಿ ರಸ್ತೆ ಸುಧಾರಣೆ 1 ಕೋಟಿ ರೂ.ಮಂಜೂರಾಗಿದೆ. ಎಲ್ಲ ಕಾಮಗಾರಿಗಳಿಗೆ ಶೀಘ್ರದಲ್ಲೇ ಟೆಂಡರ್ ಕರೆಯಬೇಕು ಎಂದು ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
ಬೆಳಗಾವಿ ಶೈಕ್ಷಣಿಕ ಜಿಲ್ಲೆಯ ಅನುದಾನಿತ ಶಾಲೆಗಳಿಗೆ 35 ಲಕ್ಷ ರೂ ಅನುದಾನ: ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿಯಿಂದ 2025ಹಿ26 ನೇ ಸಾಲಿನಲ್ಲಿ ಬೆಳಗಾವಿ ಶೈಕ್ಷಣಿಕ ಜಿಲ್ಲೆಯ ನಾಲ್ಕು ಅನುದಾನಿತ ಪ್ರಾಥಮಿಕ, ಪ್ರೌಢ ಶಾಲೆಗಳ ಕಾಮಗಾರಿಗಳಿಗೆ 35 ಲಕ್ಷ ಅನುದಾನ ಮಂಜೂರಾಗಿದೆ. ಶಿವಯೋಗೀಶ್ವರ ಹಿ.ಪ್ರಾ., ಪ್ರೌಢ ಶಾಲೆ, ಇಂಚಲ ಹಿ ಸವದತ್ತಿ ಶಾಲಾ ಕೊಠಡಿ ನಿರ್ಮಾಣ 10 ಲಕ್ಷ ರೂ. ಶೂರ ಸಂಗೊಳ್ಳಿ ರಾಯಣ್ಣ ಬಾಲಕರ ಪ್ರೌಢ ಶಾಲೆ, ಬೈಲಹೊಂಗಲ ಕಂಪೌಂಡ್ ಗೋಡೆ ನಿರ್ಮಾಣಕ್ಕೆ 10 ಲಕ್ಷ ರೂ. ಮಣ್ಣೂರ ಪ್ರೌಢ ಶಾಲೆ ಹಿ ಕಲ್ಮೇಶ್ವರ ಶಿಕ್ಷಣ ಸಂಸ್ಥೆ ಕಂಪೌಂಡ್ ಗೋಡೆ, ಶೌಚಾಲಯ ನಿರ್ಮಾಣಕ್ಕೆ 10 ಲಕ್ಷ ರೂ. ಮರಡಿ ಬಸವೇಶ್ವರ ಬಾಲಕರ ಪ್ರೌಢ ಶಾಲೆ, ಬೈಲಹೊಂಗಲ ವಿಜ್ಞಾನ ಪ್ರಯೋಗಾಲಯ ಕೊಠಡಿ ನಿರ್ಮಾಣಕ್ಕೆ5 ಲಕ್ಷ ರೂ ಅನುದಾನ ಮಂಜೂರಾಗಿದೆ ಎಂದರು. ವಿವಿಧ ಶಿಕ್ಷಣ ಸಂಸ್ಥೆಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 