39 ನೇ ವಾರ್ಷಿಕ ರಾಷ್ಟ್ರೀಯ ಸಂಶೋಧನಾ ಸಮ್ಮೇಳನ ರಾಷ್ಟ್ರದ ಆರ್ಥಿಕ ಹಾಗೂ ಸಾಮಾಜಿಕ ಬೆಳವಣಿಗೆಗೆ ಸಹಕಾರ ಕ್ಷೇತ್ರದ ಕೊಡುಗೆ ಅಪಾರ

39th Annual National Research Conference Contribution of cooperative sector to the economic and soc


39 ನೇ ವಾರ್ಷಿಕ ರಾಷ್ಟ್ರೀಯ ಸಂಶೋಧನಾ ಸಮ್ಮೇಳನ ರಾಷ್ಟ್ರದ ಆರ್ಥಿಕ ಹಾಗೂ ಸಾಮಾಜಿಕ ಬೆಳವಣಿಗೆಗೆ ಸಹಕಾರ ಕ್ಷೇತ್ರದ ಕೊಡುಗೆ ಅಪಾರ    

ಗದಗ 3: ಭಾರತದಲ್ಲಿ ಸಹಕಾರ ಚಳುವಳಿ0ುು ಒಂದು ಶತಮಾನಕ್ಕೂ ಹೆಚ್ಚು ಇತಿಹಾಸವನ್ನು ಹೊಂದಿದ್ದು, ರಾಷ್ಟ್ರದ ಆರ್ಥಿಕ ಹಾಗೂ ಸಾಮಾಜಿಕ ಬೆಳವಣಿಗೆಗೆ ಸಹಕಾರ ಕ್ಷೇತ್ರದ ಕೊಡುಗೆ ಅಪಾರವಾಗಿದೆ  ಎಂದು ರಾಜ್ಯದ  ಕಾನೂನು, ನ್ಯಾಯ, ಮಾನವ ಹಕ್ಕುಗಳು, ಸಂಸದೀಯ ವ್ಯವಹಾರಗಳು, ಶಾಸನ ರಚನೆ ಮತ್ತು ಪ್ರವಾಸೋದ್ಯಮ ಸಚಿವರು ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಎಚ್‌.ಕೆ.ಪಾಟೀಲ ಅವರು ತಿಳಿಸಿದರು 

ನಾಗಾವಿಯ ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವ ವಿದ್ಯಾಲಯದ ಆಡಿಟೋರಿಯಂದಲ್ಲಿ ಶುಕ್ರವಾರ ಗದಗನ ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯ , ಭಾರತೀಯ ಸಹಕಾರ ಅಧ್ಯಯನ ಸಂಸ್ಥೆ ಪುಣೆ, ಕರ್ನಾಟಕ ರಾಜ್ಯ ಸೌಹಾರ್ಧ ಸಂಯುಕ್ತ ಸಹಕಾರಿ ನಿಯಮಿತ ಬೆಂಗಳೂರು ಮತ್ತು ವೈಕುಂಟ್ ಮೇಹ್ತಾ ರಾಷ್ಟ್ರೀಯ ಸಹಕಾರ ನಿರ್ವಹಣೆ ಸಂಸ್ಥೆ, ಪುಣೆ ಇವರ ಸಹಯೋಗದಲ್ಲಿ ನಾಗಾವಿಯ ಕ.ರಾ.ಗ್ರಾ.ಪಂ.ರಾ.ವಿ.ವಿ.ದ ಆಡಿಟೋರಿಯಂ ಹಾಲ್‌ದಲ್ಲಿ ಹಮ್ಮಿಕೊಳ್ಳಲಾಗಿದ್ದ  ಸ್ಥಿತಿಸ್ಥಾಪಕತ್ವ ಮತ್ತು ಸುಸ್ಥಿರತೆಗಾಗಿ ಸಹಕಾರ ವ್ಯವಹಾರ ಮಾದರಿ  ಎಂಬ ವಿಷಯದ ಮೇಲೆ 39ನೇ ವಾರ್ಷಿಕ ರಾಷ್ಟ್ರೀಯ ಸಂಶೋಧನಾ ಸಮ್ಮೇಳನವನ್ನು ್ಲಉದ್ಘಾಟಿಸಿ ಮಾತನಾಡಿದರು.  

ಗದಗ ಜಿಲ್ಲೆ0ು ಕಣಗಿನಹಾಳದಲ್ಲಿ  1905 ರಲ್ಲಿ  ಸಿದ್ದನಗೌಡ ಸಣ್ಣ ರಾಮನಗೌಡ ಪಾಟೀಲ ಅವರು ಮೊದಲ ಕೃಷಿ ಸಾಲ ಸಹಕಾರ ಸಂಘವನ್ನು ಸ್ಥಾಪಿಸುವ ಮೂಲಕ ಸಹಕಾರದ ಬೀಜಗಳನ್ನು ಬಿತ್ತಿದರು. ನಂತರ ಜಿಲ್ಲೆಯ ಹಿರೇ ಹಂದಿಗೋಳ ಹಾಗೂ ಹುಲಕೋಟಿಯಲ್ಲಿ ಸಹಕಾರ ಸಂಘ ಸ್ಥಾಪನೆಗೊಂಡವು.  1904 ರಲ್ಲಿ ಸಹಕಾರಿ ಕ್ರೆಡಿಟ್ ಸೊಸೈಟಿಗಳ ಕಾಯಿದೆ0ುನ್ನು ಜಾರಿಗೊಳಿಸಿದಾಗಿನಿಂದ 2011 ರ 97 ನೇ ಸಾಂವಿಧಾನಿಕ ತಿದ್ದುಪಡಿ0ುವರೆಗೆ, ಸಹಕಾರಿ ಸಂಸ್ಥೆಗಳು ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಆರ್ಥಿಕ ಒಳಗೊಳ್ಳುವಿಕೆ0ು ಪ್ರಮುಖ ಸಾಧನಗಳಾಗಿ ಹೊರಹೊಮ್ಮಿವೆ ಎಂದರು.   

ಸಹಕಾರಿ ಹೃದಯ ಸ್ಥಿತಿಸ್ಥಾಪಕತ್ವ, ಹೊಂದಿಕೊಳ್ಳುವ ಮತ್ತು ಬಲವಾಗಿ ಹೊರ ಹೊಮ್ಮುವ ಸಾಮರ್ಥ್ಯ , ಭಾರತದ ಸಹಕಾರಿ ಚಳುವಳಿಯ ಮೂಲಾಧಾರವಾಗಿವೆ.  ಭಾರತದ ಸಹಕಾರಿ ಕ್ಷೇತ್ರವು 8.50 ಕೋಟಿ ಸೊಸೈಟಿಗಳು ಮತ್ತು 29 ಕೋಟಿ ಸದಸ್ಯರನ್ನು ಹೊಂದಿರುವ ವಿಶ್ವದಲ್ಲೇ ಅತಿ ದೊಡ್ಡ ಸಹಕಾರ ಕ್ಷೇತ್ರ ಹೊಂದಿರುವ ದೇಶವಾಗಿದೆ. ಈ ಸಂಸ್ಥೆಗಳು ಕೃಷಿ, ಸಂಬಂಧಿತ ವಲ0ುಗಳು, ಬ್ಯಾಂಕಿಂಗ್ ಮತ್ತು ಅದರಾಚೆಗಿನ ಬೆಳವಣಿಗೆ0ು ಎಂಜಿನ್‌ಗಳಾಗಿ ಕಾ0ುರ್ನಿರ್ವಹಿಸುತ್ತವೆ, ರಾಷ್ಟ್ರದ ಆರ್ಥಿಕ ಮತ್ತು ಸಾಮಾಜಿಕ ರಚನೆಗೆ ಗಮನಾರ್ಹವಾಗಿ ಕೊಡುಗೆ ನೀಡುತ್ತಿವೆ.  

ಸ್ವಾತಂತ್ರ್ಯ ಪೂರ್ವ ಬೆಳವಣಿಗೆಯ ಪ್ರಮುಖ ಲಕ್ಷಣಗಳನ್ನು ವಿವರಿಸಿದ ಸಚಿವರು, ಸಹಕಾರಿ ಭೀಷ್ಮ  ಕೆ.ಎಚ್‌. ಪಾಟೀಲರಂತಹ ನಾ0ುಕರು ಸಹಕಾರಿಗಳನ್ನು ಸಮಗ್ರ ಅಭಿವೃದ್ಧಿಗೆ ಸಾಧನವಾಗಿ, ಕೈಗೆಟುಕುವ ಸಾಲ, ಗ್ರಾಮೀಣ ಮೂಲಸೌಕ0ುರ್, ಶಿಕ್ಷಣ, ಕೈಗಾರಿಕೆ, ಜವಳಿ, ಜಾನುವಾರುಗಳ ಆಹಾರ ಮತ್ತು ಸಾಮಾಜಿಕ ಸಮಾನತೆ0ುನ್ನು ಉತ್ತೇಜಿಸುವ ಸಾಧನಗಳಾಗಿ ರೂಪಿಸಿದರು ಎಂದರು.  

ಪ್ರಸಕ್ತ ವರ್ಷವನ್ನು ರಾಷ್ಟ್ರೀಯ ಸಹಕಾರ ವರ್ಷವೆಂದು ಘೋಷಣೆ ಮಾಡಲಾಗಿದೆ. ಪ್ರಸಕ್ತ ವರ್ಷದಲ್ಲಿ ಸಹಕಾರಿ ರಂಗ ಉದಯಿಸಿದ ಗದಗ ಜಿಲ್ಲೆಯಲ್ಲಿಯೇ ಕಾರ್ಯಕ್ರಮ ಆಯೋಜಿಸಿರುವುದು ಖುಷಿ ತಂದಿದ್ದು ಗದಗ ಜಿಲ್ಲೆ ನಮ್ಮ ಹೆಮ್ಮೆ ಎಂದು ಸಚಿವ ಎಚ್‌.ಕೆ.ಪಾಟೀಲ ಹರ್ಷ ವ್ಯಕ್ತಪಡಿಸಿದರು 

ಕ.ರಾ.ಗ್ರಾ. ಪಂ.ರಾ. ವಿ.ವಿ. ರೆಜಿಸ್ಟ್ರಾರ್ ಡಾ.ಸುರೇಶ ನಾಡಗೌಡರ ಪ್ರಾಸ್ತಾವಿಕವಾಗಿ ಮಾತನಾಡಿ  ಸ್ಥಿತಿಸ್ಥಾಪಕತ್ವ ಮತ್ತು ಸುಸ್ಥಿರತೆಗಾಗಿ ಸಹಕಾರ ವ್ಯವಹಾರ ಮಾದರಿ ಎಂಬ ವಿಷಯದ ಮೇಲೆ 39ನೇ ವಾರ್ಷಿಕ ರಾಷ್ಟ್ರೀಯ ಸಂಶೋಧನಾ ಸಮ್ಮೇಳನ ವಿಶ್ವ ವಿದ್ಯಾಲಯದಲ್ಲಿ ಆಯೋಜಿಸಿರುವುದು ಅತ್ಯಂತ ಸಮಂಜಸವಾಗಿದೆ. ಈ ಕಾರ್ಯಕ್ರಮ ಅಚ್ಚುಕಟ್ಟಾಗಿ ಆಯೋಜನೆ ಮಾಡಲು ಹಾಗೂ ವಿಶ್ವ ವಿದ್ಯಾಲಯ ಸ್ಥಾಪನೆಗೆ ಕಾರಣೀಭೂತರಾದ ಸಚಿವರಾದ ಎಚ್‌.ಕೆ.ಪಾಟೀಲ ಅವರು ಅಭಿನಂದನಾರ್ಹರು ಎಂದು ಪ್ರಶಂಸನಾಪೂರ್ವಕ ಮಾತುಗಳನ್ನಾಡಿದರು.   

ಈ ಸಂದರ್ಭದಲ್ಲಿ ಪುಣೆಯ ಭಾರತೀಯ ಸಹಕಾರ ಅಧ್ಯಯನ ಸಂಸ್ಥೆಯ ಅಧ್ಯಕ್ಷ ಜಿ.ಎಚ್‌. ಅಮಿನ್, ಬೆಂಗಳೂರು ಚಾಣಕ್ಯ ವಿಶ್ವವಿದ್ಯಾಲಯ  ಕುಲಪತಿ ಪ್ರೊ.ಯಶವಂತ ಡೋಗ್ರೆ,  ಪಿ.ಎಲ್‌.ಡಿ. ಬ್ಯಾಂಕ್‌ದ ಗುರಣ್ಣಾ ಬಳಗಾನೂರ,  ಮರ್ಚಂಟ್ ಲಿಬರಲ್ ಕೋ ಆಪರೇಟಿವ್ ಬ್ಯಾಂಕ್‌ದ ಅಧ್ಯಕ್ಷರಾದ ಮೋಹನ ಕೋಟಿ, ನಬಾರ್ಡದ ಜಿ.ಜಗದೀಶ , ಕೆಎಸ್‌ಎಸ್‌ಎಫ್‌ಸಿಎಲ್ ದ ಉಪಾಧ್ಯಕ್ಷರಾದ ಎ.ಆರ. ಪ್ರಸನ್ನಕುಮಾರ್, ಪುಣೆಯ  ಇಂಡಿಯನ್ ಸೊಸೈಟಿ ಫಾರ್‌ಸ್ಟಡೀಸ್‌ಇನ ಕೋ ಆಪರೇಷನ್‌ದ ಕಾರ್ಯದರ್ಶಿ ಡಾ. ಅನಿಲ ಕರಂಜಿಕರ್, ಕೆ.ಎಸ್‌.ಎಸ್‌.ಎಫ್‌.ಸಿ.ಎಲ್‌. ಮ್ಯಾನೇಜಿಂಗ್ ಡೈರೆಕ್ಟರ್ ಶರಣಗೌಡ ಪಾಟೀಲ,  ವಿಶ್ವವಿದ್ಯಾಲಯದ  ಡಾ. ಅಬ್ದುಲ್ ಅಜಿಜ್ ಮುಲ್ಲಾ , ಡಾ. ಅಭಯಕುಮಾರ್ ಗಸ್ತಿ ಹಾಜರಿದ್ದರು.