ಹೂವಿನ ಹಡಗಲಿ

ಗವಿಮಠದಲ್ಲಿ 206 ಮಾಸಿಕ ಶಿವಾನುಭವ ಕಾರ್ಯಕ್ರಮ

ಗವಿಮಠದಲ್ಲಿ 206 ಮಾಸಿಕ ಶಿವಾನುಭವ ಕಾರ್ಯಕ್ರಮ

ಗವಿಮಠದಲ್ಲಿ 206 ಮಾಸಿಕ ಶಿವಾನುಭವ ಕಾರ್ಯಕ್ರಮ   

ಹೂವಿನ ಹಡಗಲಿ  6: ಪಟ್ಟಣದ ಗವಿಸಿದ್ದೇಶ್ವರ ಶಾಖಾಮಠದಲ್ಲಿ  ಮಾಸಿಕ 206ನೇ ಶಿವಾನುಭವ ಕಾರ್ಯಕ್ರಮವನ್ನು ಜರುಗಿತು. ಸಹಾಯಕ ಜೈಲರ್  ಪ್ರಕಾಶ್ ವಾಸು ಕಾಂಬ್ಳೆ ಹಾಗೂ ದಾನಿಗಳಾದ ಕೆ. ಸಂಗಪ್ಪ   ಸಸಿಗೆ ನೀರು ಹಾಕುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿದರು.  ಭಾರತೀಯ ಹಬ್ಬಗಳ ವೈಶಿಷ್ಟ್ಯತೆ ಮತ್ತು ಮಹತ್ವ ಎಂಬ  ವಿಷಯದ ಕುರಿತು ಬೆಟಗೇರಿ ಗ್ರಾಮದ ಮಾಜಿ ಸೈನಿಕರಾದ  ಗುರುಬಸಯ್ಯ ಅನ್ನದಾನಯ್ಯ ಬೃಹನ್ಮಠ  ರವರು ಉಪನ್ಯಾಸ ನೀಡಿದರು.ಕರ್ನಾಟಕ ಪ್ರೆಸ್ ಕ್ಲಬ್ ಅಧ್ಯಕ್ಷ ಬಿಚ್ಚುಗತ್ತಿ ಖಾಜಾ ಹುಸೇನ್ ಮಾತನಾಡಿದರು. ಡಾ. ಹಿರಿಶಾಂತವೀರ ಮಹಾಸ್ವಾಮಿಗಳು  ಆಶೀರ್ವಚನ ನೀಡಿದರು.ಈ ಸಂದರ್ಭದಲ್ಲಿ ಪತ್ರಕರ್ತರಿಗೆ, ಸೈನಿಕರಿಗೆ,, ಉಪನ್ಯಾಸಕರಿಗೆ, ಕಲಾವಿದರಿಗೆ, ಹಾಗೂ ಭಕ್ತಿ ಸೇವೆ ಸಲ್ಲಿಸಿದಂತಹ ಸೇವಾರ್ಥಿಗಳಿಗೆ ಗುರುರಕ್ಷೆ ನೀಡಿ ಆಶೀರ್ವದಿಸಿದರು. ಪತ್ರಕರ್ತರ ಸಂಘದ ಅಧ್ಯಕ್ಷ ಎಂಪಿಎಂ ಶಿವಪ್ರಕಾಶ  . ಪತ್ರಕರ್ತರ ಧ್ವನಿ ಸಂಘದ ಅಧ್ಯಕ್ಷ ವೀರೇಶ್ ಕಲ್ಮಠ, ನಿವೃತ್ತ ಚಾಲಕ ಕೆ. ಪ್ರಭಾಕರ,  ಸುರೇಶ್ ಅಡವಿಸ್ವಾಮಿ ಹಿರೇಮಠ, ಚಿತ್ರಕಲಾ ಪ್ರತಿಭೆ ಕುಶಾಲ್ ಹೊಸಮನಿ  ಹೊಸಪೇಟೆ, ಸಂಗೀತ ಶಿಕ್ಷಕ ಯುವರಾಜಗೌಡ್ರು, ಶಾಂತಮ್ಮ ಪುಟ್ಟಯ್ಯ ಹಿರೇಮಠ, ಪತ್ರಕರ್ತರಾದ ಎಂ. ದಯಾನಂದ, ಎಂ. ರಾಜಪ್ಪ ಇದ್ದರು. 


ಸುದ್ದಿ ಓದಿ