ಅಬಕಾರಿ ಇಲಾಖೆ ದಾಳಿಯಲ್ಲಿ 17.280 ಲೀಟರ್ ಮಧ್ಯ ವಶ
17,280 liters of liquor seized in Excise Department raid
ಲೋಕದರ್ಶನ ವರದಿ
ಇಂಡಿ 07 : ಹೋಳಿ ಹಬ್ಬದ ನಿಮಿತ್ಯ ವಿಜಯಪುರ ಜಿಲ್ಲ್ಯಧ್ಯಾಂತ ಮದ್ಯ ಮಾರಾಟ ನಿಷೇದಾಜ್ಞೆ ಜಾರಿಯಲ್ಲಿ ಇರುವುದರಿಂದ ದಿನಾಂಕ-07/03/2026 ರಂದು ಮಧ್ಯಾಹ್ನ 2.40 ಗಂಟೆಗೆ ಇಂಡಿ ತಾಲ್ಲೂಕಿನ ನಾದ ಕೆಡಿಗ್ರಾಮದಿಂದ -ಆಲಮೇಲ ಹೋಗುವ ರಸ್ತೆಯಲ್ಲಿ ಇರುವ ಆರ್ ಪಿ ಗಾರ್ಡನ್ ಮತ್ತು ಫ್ಯಾಮಿಲಿ ರೆಸ್ಟೋರೆಂಟ್ ಮೇಲೆ ಅಬಕಾರಿ ಇಲಾಖೆ ದಾಳಿ ಮಾಡಿ ಒಟ್ಟ 17.280 ಲೀಟರ್ ಮಧ್ಯ ಹಾಗೂ 15.6 ಲೀಟರ್ ಬಿಯರ್ ಜಪ್ತಿ ಮಾಡಿ ವಶಪಡಿಸಿಕೊಂಡಿದ್ದಾರೆ.
ಆರೋಪಿ ಮಂಜುನಾಥ ಚಂದ್ರಕಾಂತ್ ಕುಂಬಾರ ಸಾ.ನಾದಕೆಡಿ ತಾ.ಇಂಡಿ ಸದರಿ ಆರೋಪಿ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಮತ್ತು ಮಾನ್ಯ ನ್ಯಾಯಾಲಯಕ್ಕೆ ಹಾಜರು ಪಡಿಸಲಾಯಿತ್ತು . ರಾಹುಲ್ ಎಸ್ ನಾಯಕ ಅಬಕಾರಿ ನೀರೀಕ್ಷಕರು ಇಂಡಿ ಇವರನೇತೃತ್ವದಲ್ಲಿ ದಾಳಿ ಮಾಡಲಾಯಿತು.ಈ ದಾಳಿಯಲ್ಲಿ ಎಸ್ ಜಿ ಅಂಗಡಿ ಅಬಕಾರಿ ಉಪ ನೀರೀಕ್ಷಕರು-2 ಇಂಡಿ ವಲಯ ಇವರು ಪ್ರಕರಣವನ್ನು ದಾಖಲಿಸಿಕೊಂಡರು ಈ ದಾಳಿಯಲ್ಲಿ ಸಿಬ್ಬಂದಿಗಳಾದ ಶಿವಶಂಕರ ಗೋಟ್ಯಾಳಯ ಸುಭಾಷ್ ಅಥರ್ಗಾ , ಸಂಜುಕುಮಾರಹೂವಿನವರ , ಮಲ್ಲಪ್ಪ ಬಿರಾದಾರ, ದಾಳಿಯಲ್ಲಿ ಪಾಲ್ಗೊಂಡಿದ್ದರು ಎಂದು ರಾಹುಲ್ ನಾಯಕಅಬಕಾರಿ ನೀರೀಕ್ಷಕರು ಇಂಡಿ ಅವರು ತಿಳಿಸಿದ್ದಾರೆ.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 