‘ಯುವಕರು ನಿರುದ್ಯೋಗ ಸಮಸ್ಯೆಯನ್ನು ನಿವಾರಿಸುವ ಕೆಲಸ ಮಾಡಬೇಕು’
'Youth should work to overcome the unemployment problem'
ಲೋಕದರ್ಶನ ವರದಿ
ಜಮಖಂಡಿ ೨೭: ಮಕ್ಕಳು ಹೆಚ್ಚು ಅಂಕಗಳಸಿ ಮನೆತನಕ್ಕೆ ಅಷ್ಟೇ ಅಲ್ಲ ಸಮಾಜಕ್ಕೆ ಕೀರ್ತಿ ತರುವ ಕೆಲಸವನ್ನು ಮಾಡಿದ್ದಾರೆ. ಸ್ಪರ್ಧಾತ್ಮಕ ಪರೀಕ್ಷೆ ಯುಗದಲ್ಲಿ ಮುಂದೆ ಬರುವ ಕೆಲಸ ಮಾಡುವ ಜೊತೆಗೆ ಉನ್ನತ ಉದ್ಯೋಗದಂತ ಕೋರ್ಸಗಳನ್ನು ಕಲಿಯುವ ಜೊತೆಗೆ ದೊಡ್ಡ ಉದ್ಯಮಿಗಳಾಗಿ ನಿರುದ್ಯೋಗ ಸಮಸ್ಯೆಯನ್ನು ನಿವಾರಿಸುವ ಕೆಲಸ ಯುವಕರು ಮಾಡಬೇಕೆಂದು ಮಾಜಿ ಶಾಸಕ ಆನಂದ ನ್ಯಾಮಗೌಡ ಹೇಳಿದರು.
ನಗರದ ನಂದಿಕೇಶ್ವರ ದೇವಸ್ಥಾನದಲ್ಲಿ ಸಭಾ ಭವನದಲ್ಲಿ ನಡೆದ ತಾಲ್ಲೂಕಾ ಗಾಣಿಗ ಸಮಾಜ ಹಾಗೂ ತಾಲೂಕಾ ನೌಕರರ ಕ್ಷೇಮಾಭಿವೃದ್ಧಿ ಸಂಘ ಸಹಯೋಗದಲ್ಲಿ ಎಸ್.ಎಸ್.ಎಲ್.ಸಿ ಹಾಗೂ ಪಿಯುಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಸಾಧಕರಿಗೆ ಸನ್ಮಾನ ಸಮಾರಂಭ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಗಾಣಿಗ ಸಮಾಜದ ಸಂಘಟನೆಯು ೧೬ ನೇ ವರ್ಷಗಳ ಕಾಲ ನಿರಂತರವಾಗಿ ಪ್ರತಿಭಾ ಪುರಸ್ಕಾರ ಮಾಡುತ್ತಾ ಬಂದಿರುವುದು ಹೆಮ್ಮೆಯ ವಿಷಯವಾಗಿದೆ. ವಿದ್ಯಾರ್ಥಿಗಳು ಒಳ್ಳೆಯ ಶಿಕ್ಷಣ ಪಡೆದು ಡಾಕ್ಟರ್, ಇಂಜಿನೀಯರ, ಉನ್ನತ ಹುದ್ದೆಯ ಅಧಿಕಾರಿಗಳು ಆಗುವ ಜೊತೆಗೆ ಉದ್ಯೋಗದ ಕಡೆಗೆ ಗಮನಹರಿಸಿ ದೊಡ್ಡ ಉದ್ಯಮಿಗಳಾದರೆ ಸಾಕಷ್ಟು ವಿದ್ಯಾವಂತರು ನಿರುದ್ಯೋಗದಿಂದ ಇದ್ದಾರೆ. ಅಂತವರಿಗೆ ಕೆಲಸ ನೀಡಿದರೆ ನಿರುದ್ಯೋಗ ಸಮಸ್ಯೆ ಪರಿಹರಿಸಲು ಸಾಧ್ಯ. ಮಕ್ಕಳಲ್ಲಿ ಸಾಧನೆ ಮಾಡುವ ಗುರಿ,ಚಲವನ್ನು ಹೊಂದಬೇಕು. ಗಾಣಿಗ ಸಮಾಜ ಕೇವಲ ಗಾಣಿಗ ಸಮಾಜಕ್ಕೆ ಸೀಮಿತವಾಗದೆ ಎಲ್ಲ ಸಮಾಜದ ಜೊತೆ ಸೇರಿ ಸಾಧಕರಿಗೆ ಸನ್ಮಾನಿಸಿ ಗೌರವಿಸಿದು ಹೆಮ್ಮೆಯ ವಿಷಯವಾಗಿದೆ. ಅತೀ ಕಡುಬಡುವ ಮಕ್ಕಳಿಗೆ ಶಿಕ್ಷಣ ನೀಡುವ ಕೆಲಸ ಸಂಘಟನೆ ಮಾಡುವಂತೆ ಆಗಬೇಕು ಎಂದರು.
ಮಾಜಿ ವಿಪ ಸದಸ್ಯ ಜಿ,ಎಸ್,ನ್ಯಾಮಗೌಡ ಮಾತನಾಡಿ, ಸಮಾಜವನ್ನು ಕಟ್ಟುವ ಜೊತೆಗೆ ಬೇರೆಬೇರೆ ಸಮಾಜವನ್ನು ಪ್ರೀತಿಸೋಣ. ಸಹೋದರತೆಯಿಂದ ಕಾನೋಣ. ಮಕ್ಕಳಲ್ಲಿ ಸಂಸ್ಕಾರದ ಗುಣಗಳನ್ನು ಹೆತ್ತ ತಂದೆ, ತಾಯಿಯಂದಿರು ಮಾಡಬೇಕು ಎಂದರು.
ಅರ್ಬನ್ ಬ್ಯಾಂಕ್ ಅಧ್ಯಕ್ಷ ರಾಹುಲ ಕಲೂತಿ ಮಾತನಾಡಿ, ಇಂದು ಎರಡು ಪ್ರಮುಖ ಸಂಘಟನೆಯಗಳು ಕೆಲಸ ಮಾಡುತ್ತಿವೆ. ಒಂದು ಸಂಘ ಸಮಾಜವನ್ನು ತಿದ್ದುವ ಕೆಲಸವನ್ನು ಹಿರಿಯರ ಜೊತೆ ಕೂಡಿಕೊಂಡು ಕೆಲಸ ಮಾಡುತ್ತಿದೆ. ಹಿರಿಯರು ಸಮಾಜವನ್ನು ಕಟ್ಟುವ ಜೊತೆಗೆ ವಿದ್ಯಾರ್ಥಿಗಳನ್ನು ಮತ್ತು ಯುವಕರನ್ನು ಸಂಘಟಿಸುವ ಕೆಲಸ ಮಾಡುತ್ತಿದೆ. ಎರಡನೆಯದು ಬಹಳ ಮುಖ್ಯವಾಗಿ ಕೆಲಸವನ್ನು ಮಾಡುತ್ತಿದೆ. ಇಂದಿನ ಯುವಕರಲ್ಲಿ ಆತ್ಮಸ್ಥೈರ್ಯವನ್ನು ತುಂಬುವ ಕೆಲಸ ಮಾಡುವ ಜೊತೆಗೆ ವಿದ್ಯಾರ್ಥಿಗಳು ವರ್ಷದಿಂದ ವರ್ಷಕ್ಕೆ ಹೆಚ್ಚು ಅಂಕಗಳನ್ನು ಪಡೆದು ಕೀರ್ತಿ ತರುವ ಕೆಲಸವನ್ನು ಮಾಡುತ್ತಿದೆ. ಅಂತವರಿಗೆ ಸನ್ಮಾನಿ, ಗೌರವಿಸುವ ಕೆಲಸ ಈ ಸಂಘಟನೆ ಮಾಡುತ್ತಿರುವುದು ಹೆಮ್ಮೆಯ ವಿಷಯವಾಗಿದೆ ಎಂದರು.
ಗಾಣಿಗ ಸಮಾಜದ ಅಧ್ಯಕ್ಷ ಕೆ.ಕೆ.ತುಪ್ಪದ ಮಾತನಾಡಿದರು. ಸಿದ್ದಕ್ಷೇತ್ರದ ಸಿದ್ದಮುತ್ಯಾ ಶ್ರೀಗಳು ಆರ್ಶೀವಚನ ನೀಡಿದರು.
ವೇದಿಕೆಯಲ್ಲಿ ಮಲ್ಲಿಕಾರ್ಜುನ ನಿಂಗನೂರ, ಸಿದ್ರಾಮ ಜಂಬಗಿ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಜಗದೇವ ಪಾಸೋಡೆ, ಶಾಂತಾ ನ್ಯಾಮಗೌಡ, ರಾಜೇಶ್ರೀ ನ್ಯಾಮಗೌಡ, ನಾಗಪ್ಪ ಮುತ್ತಕ್ಕನವರ ಉಪಸ್ಥಿತರಿದರು.
ಸಂಗಮೇಶ ಗಾಣಿಗೇರ ಸ್ವಾಗತಿಸಿದರು. ಎಮ್,ಎಸ್,ನ್ಯಾಮಗೌಡ ಪ್ರಾಸ್ತಾವಿಕ ಮಾತನಾಡಿದರು.ಕವಿತಾ ರಾಮದುರ್ಗ ನಿರೂಪಿಸಿದರು. ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರಿಗೆ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನಿಸಿ, ಗೌರವಿಸಿದರು.
ಸುಪ್ರೀಂನಲ್ಲಿರುವ ಬೆಳಗಾವಿ ಜಿಲ್ಲೆಯ 350 ಪ್ರಕರಣಗಳಿಗೆ ರಾಜಿ ಸಂಧಾನದಿಂದ ಇತೇರ್ಥಕ್ಕೆ ಪ್ರಯತ್ನ : ನ್ಯಾ. ಮಂಜುನಾಥ ನಾಯಕ
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ
ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಇಂಧನ ಭದ್ರತೆ ರಾಷ್ಟ್ರದ ಪ್ರಮುಖ ಆದ್ಯತೆಗಳು: ಪ್ರಧಾನಿ ಮೋದಿ
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ 