‘ಸ್ಪಷ್ಟವಾದ ಗುರಿ ಇದ್ದರೆ ಮಾತ್ರ ವಿದ್ಯಾರ್ಥಿಗಳು ಜೀವನದಲ್ಲಿ ಯಶಸ್ಸು ಹೊಂದಲು ಸಾಧ್ಯ’

‘ಸ್ಪಷ್ಟವಾದ ಗುರಿ ಇದ್ದರೆ ಮಾತ್ರ ವಿದ್ಯಾರ್ಥಿಗಳು ಜೀವನದಲ್ಲಿ ಯಶಸ್ಸು ಹೊಂದಲು ಸಾಧ್ಯ’ 'Students can only be successful in life if they have clear goals'

ಲೋಕದರ್ಶನ ವರದಿ

 ಧಾರವಾಡ ೨೭: ವಿದ್ಯಾರ್ಥಿಗಳಿಗೆ ಸರಿಯಾದ ರೀತಿಯಲ್ಲಿ ಹಿರಿಯರಿಗೆ ಕಿರಿಯರಿಗೆ, ಪೋಷಕರಿಗೆ ಗೌರವ ಕೊಡುವ ತಿಳುವಳಿಕೆ ಬಹಳ ಮುಖ್ಯ. ಸ್ಪಷ್ಟವಾದ ಗುರಿ ಇದ್ದರೆ ಮಾತ್ರ ವಿದ್ಯಾರ್ಥಿಗಳು ಜೀವನದಲ್ಲಿ ಯಶಸ್ಸು, ಶಕ್ತಿ, ಸಾಮರ್ಥ್ಯ ಹೊಂದಲು ಸಾಧ್ಯ ಎಂದು ಕ.ವಿ.ವಿ. ಪ್ರಸಾರಾಂಗ ನಿವೃತ್ತ ನಿರ್ದೇಶಕ ಡಾ. ಚಂದ್ರಶೇಖರ ರೊಟ್ಟಿಗವಾಡ ಹೇಳಿದರು. 

ಅವರು ಕರ್ನಾಟಕ ವಿದ್ಯಾವರ್ಧಕ ಸಂಘದ ಯುವಜನ ಮತ್ತು ಕ್ರೀಡಾ ಮಂಟಪವು, ಇಟಗಿಯ ಚೆನ್ನಮ್ಮ ರಾಣಿ ಸ್ಮಾರಕ ಸಂಯುಕ್ತ ಪ.ಪೂ. ಮಹಾವಿದ್ಯಾಲಯದ ಸಹಯೋಗದಲ್ಲಿ ಆಯೋಜಿಸಿದ್ದ `ಉಪನ್ಯಾಸ, ಸಂವಾದ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಹಳ್ಳಿಗಳು ಧಾರ್ಮಿಕ, ಸಾಹಿತ್ಯಿಕ, ಶೈಕ್ಷಣಿಕ ಹಾಗೂ ಇನ್ನಿತರ ಕ್ಷೇತ್ರಗಳಲ್ಲಿ ಪ್ರಭಾವ ಬೀರುತ್ತವೆ. ಗ್ರಾಮಗಳು  ಅದರದೇ ಆದ ಸಾಮರ್ಥ್ಯ ಹೊಂದಿರುತ್ತವೆ. ಹಳ್ಳಿಗಳಲ್ಲಿ ಪ್ರೀತಿ, ವಿಶ್ವಾಸ ನಂಬಿಕೆ ಶಹರದ ಕಲುಷಿತ ವಾತಾವರಣಕ್ಕಿಂತ  ಹೆಚ್ಚಾಗಿ ಸಿಗುತ್ತದೆ. ಈ ಹಿಂದೆ ಸಾಧನೆ ಮಾಡಿದ ಸಾಧಕ ವ್ಯಕ್ತಿಗಳು ಎಲ್ಲರ ಮನಸಿನಲ್ಲಿ ಅಚಲವಾಗಿ ಮೂಡಿರುತ್ತಿದ್ದರು. ಅದಕ್ಕೆ ಕಾರಣ ಹಳ್ಳಿಯಿಂದ ಕಷ್ಟಪಟ್ಟು  ಮತ್ತು ಸಿದ್ಧಾಂತಗಳನ್ನು ನಂಬಿ ಸಾಧನೆ ಮಾಡಿದ್ದರು. ಇಂದಿನ ಸಾಧನೆಗೈದವರಲ್ಲಿ ಬಹಳ ಜನರ ಮನಸಿನಲ್ಲಿ ಕೆಲವೇ ದಿನಗಳು ಇರುತ್ತಾರೆ ಇದಕ್ಕೆ ತತ್ವಸಿದ್ಧಾಂತ ಕೊರತೆ ಕಾರಣ ಎಂದರು. 

ಬಹುತೇಕ ಸಾಧನೆ ಮಾಡಿದವರು ಮೂಲ ಹಳ್ಳಿಯಿಂದ ಬಂದವರಾಗಿರುತ್ತಾರೆ. ಮಕ್ಕಳಿಗೆ ತಮ್ಮ ಜೀವನವನ್ನು ರೂಪಿಸಿಕೊಳ್ಳಲಿಕ್ಕೆ ಏಕಾಗ್ರತೆ ಬಹಳ ಮುಖ್ಯ. ಜೀವನವೆಂದರೆ ಅದು ಒಂದು ತಪಸ್ಸು ಇದ್ದ ಹಾಗೆ.  ಕಷ್ಟವಿಲ್ಲದೆ ಬದುಕು ಇಲ್ಲವೇ ಇಲ್ಲ. ಸಂಸ್ಕಾರದಿAದ ಇರುವಂತ ವಿದ್ಯಾರ್ಥಿಗಳಿಗೆ ಕಲಿಸಿದ ಗುರುಗಳ, ತಂದೆ-ತಾಯಿಗಳ ಆಶೀರ್ವಾದವೇ ಶ್ರೀರಕ್ಷೆ. ಏಕಾಗ್ರತೆಗೆ ಪಠ್ಯಪುಸ್ತಕದ ಜೊತೆಗೆ ಸಾಮಾನ್ಯ ಜ್ಞಾನ ಹೊಂದುವುದು ಬಹಳ ಮುಖ್ಯ. ಇಂದಿನ ಯುವಜನಾಂಗದಲ್ಲಿ ನಾಯಕತ್ವ ಗುಣ ಕಡಿಮೆಯಾಗುತ್ತ ಬರುತ್ತಿದೆ. ಗುರುಭಕ್ತಿ, ನಿಷ್ಠೆ, ಏಕಾಗ್ರತೆ, ಶಿಸ್ತು ಇವೆಲ್ಲವನ್ನು ಅಳವಡಿಸಿಕೊಂಡಾಗ ನಾಯಕತ್ವ ಗುಣ ಬೆಳೆಸಿಕೊಳ್ಳಲು ಸಾದ್ಯವಾಗುತ್ತದೆ.  

ಕಿತ್ತೂರಿನ ಸಿಪಿಐ ಶಿವಾನಂದ ಗುಡಗನಟ್ಟಿ ಮುಖ್ಯ ಅತಿಥಿಯಾಗಿ ಮಾತನಾಡಿ, ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘಕ್ಕೆ ಅದರದೇ ಆದ ಇತಿಹಾಸವಿದೆ. ಇಂಥ ಮಹಾನ್ ಸಂಸ್ಥೆ ನಿಮ್ಮ ಶಿಕ್ಷಣ ಸಂಸ್ಥೆಗೆ ಬಂದಿದೆ ಎಂದರೆ ನೀವು ಭಾಗವ್ಯವಂತರು. ಇಲ್ಲಿ ಬಂದAತ ಪ್ರತಿಯೊಬ್ಬ ಗಣ್ಯವ್ಯಕ್ತಿಗಳು ತಮ್ಮ ಕೆಲಸದ ಒತ್ತಡವಿದ್ದರೂ ನಿಮ್ಮ ಜೀವನ ರೂಪಿಸಿಕೊಳ್ಳಲು ತಮ್ಮ ಅನುಭವ ಹಂಚಲು ಬಂದಿರುತ್ತಾರೆ. ಅವುಗಳನ್ನು ನಿಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. 

ಪ್ರಸ್ತುತ ಸಮಾಜದಲ್ಲಿ ಪೊಲೀಸರ ಬಗ್ಗೆ ತಪ್ಪು ಅಭಿಪ್ರಾಯವಿದೆ.  ಪೊಲೀಸರ ಬಗ್ಗೆ ಏನು, ಎಂತಹ, ಅವರ ಕೆಲಸದ ಬಗ್ಗೆ ಕಾನೂನಿನ ಬಗ್ಗೆ ತಿಳಿದುಕೊಳ್ಳದೆ ಪೊಲೀಸರ ಬಗ್ಗೆ ಕಂಡ ಕಂಡಲ್ಲಿ ನಕಾರಾತ್ಮಕವಾಗಿ ಚರ್ಚೆ ಮಾಡುತ್ತೀರಿ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಕಮೆಂಟ್ ಮಾಡುವುದರ ಮೂಲಕ ಕೆಟ್ಟ ಕೆಟ್ಟ ಅಭಿಪ್ರಾಯಗಳನ್ನು  ವ್ಯಕ್ತಪಡಿಸುತ್ತೀರಿ. ಮಾಧ್ಯಮ ಲೋಕದಲ್ಲಿ ಅದು ಪತ್ರಿಕೆ ಇರಬಹುದು. ವಿದ್ಯುನ್ಮಾನ ಇರಬಹುದು ಆ ಸಂಸ್ಥೆಗಳಿಗೆ ಅಲ್ಲಿ ಬರೆಯುವಂತಹ ವರದಿಯ ಸಾಧಕ-ಬಾಧಕಗಳ ಅವಲೋಕನಕ್ಕೆ ಸಂಪಾದಕರಿರುತ್ತಾರೆ. ಆದರೆ ಸಾಮಾಜಿಕ ಜಾಲತಾಣಕ್ಕೆ ಯಾರು ಹೇಳುವವರಿಲ್ಲ, ಕೇಳುವವರಿರುವುದಿಲ್ಲ. ಅದರಲ್ಲಿ ಏನು ಬರೆಯುತ್ತಾರೋ ಅವರಿಗೆ ಗೊತ್ತು. ಹೀಗಾಗಿ ಸಾಮಾಜಿಕ ಜಾಲತಾಣದಿಂದ  ಬರುವಂತ ಕೆಲವೊಂದು ಸುದ್ದಿಗಳು ಸಮಾಜಕ್ಕೆ ಮಾರಕವಾಗುತ್ತಿವೆ. ಸಾಮಾಜಿಕ ಜಾಲತಾಣದಲ್ಲಿ ಇವತ್ತಿನ ದಿನಮಾನಗಳಲ್ಲಿ ಸತ್ಯ, ಅಸತ್ಯ ಇದ್ದರೂ ಅವೇ ನಿಜವಾದ ಸಂಗತಿಗಳು ಎನ್ನುವಷ್ಟು ಬಿಂಬಿತವಾಗುತ್ತಿವೆ. ಪ್ರತಿಯೊಬ್ಬ ವಿದ್ಯಾರ್ಥಿ ಗುರಿಗೆ ಹಿಂದೊಬ್ಬ ಗುರು ಇರಬೇಕು. ಕಷ್ಟಪಡಬೇಕು. ಆತ್ಮಸಾಕ್ಷಿ ಇಲ್ಲದೆ ಏನೂ ಸಾಧನೆ ಮಾಡಲು ಅಗುವುದಿಲ್ಲ. ಇಂದಿನ ವಿದ್ಯಾರ್ಥಿಗಳಿಗೆ ಯಾರ ಮಾತನ್ನು ಕೇಳುವ ವ್ಯವದಾನ ಇಲ್ಲ. ಎಲ್ಲವೂ ನಮಗೆ ಗೊತ್ತು ಎನ್ನುವ ದುರಹಂಕಾರ ವಿದ್ಯಾರ್ಥಿಗಳಿಗಿದೆ. ಪ್ರತಿಯೊಬ್ಬರ ವಿದ್ಯಾರ್ಥಿ ಜೀವನದಲ್ಲಿ ಗುರು, ಹಿರಿಯರ, ಪಾಲಕರ ಮಾರ್ಗದರ್ಶನದಲ್ಲಿ ನಡೆದರೆ ಒಂದು ಶಿಲ್ಪಿಯಾಗಿ ಹೊರಹೊಮ್ಮುತ್ತಾನೆ. ಕೆಟ್ಟದಾರಿಯಲ್ಲಿ ಸಾಗುವುದು ತಪ್ಪುತ್ತದೆ.  

ಇಟಗಿಯ ಕೆ. ಬಿ. ಕಾಪೋಲಿ, ಪ್ರಾಂಶುಪಾಲರು, ಚೆನ್ನಮ್ಮ ರಾಣಿ ಸ್ಮಾರಕ ಸಂಯುಕ್ತ ಪ.ಪೂ. ಮಹಾವಿದ್ಯಾಲಯ ಹಾಗೂ ನಿವೃತ್ತ ಶಿಕ್ಷಕ ವಿಜಯಕುಮಾರ ಬಡಿಗೇರ ಅತಿಥಿಗಳಾಗಿ ಭಾಗವಹಿಸಿದ್ದರು.

ಶ್ರೀಶೈಲ ತುರಮರಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. 

ಯುವಜನ ಮತ್ತು ಕ್ರೀಡಾ ಮಂಟಪದ ಸಲಹಾ ಸಮಿತಿ ಸದಸ್ಯ, ಪತ್ರಕರ್ತ ಲಿಂಗರಾಜ ಅಂಗಡಿ, ಅಧ್ಯಕ್ಷರಾದ ವಿಜಯಕುಮಾರ ಸೂರೆಕೊಪ್ಪ, ಉಪಾಧ್ಯಕ್ಷ ಶಂಕರ ಗಣಾಚಾರಿ, ಬಿ.ಎಸ್. ಪುಂಡಿ, ಬಿ.ವಿ. ಬೆಣಚನಮರಡಿ, ಆರ್.ಬಿ. ಹುಣಸಿಕಟ್ಟಿ, ಎಸ್.ಎಸ್. ಹಿರೇಮಠ, ಎಂ.ಎಸ್. ಸಾಣಿಕೊಪ್ಪ, ರುದ್ರಮ್ಮ ಕಾಪೋಲಿ ವೇದಿಕೆಯಲ್ಲಿದ್ದರು.

ಯುವಜನ ಮತ್ತು ಕ್ರೀಡಾ ಮಂಟಪದ ಸಂಚಾಲಕಿ ವಿಶ್ವೇಶ್ವರಿ ಹಿರೇಮಠ ಸ್ವಾಗತಿಸಿದರು. ಸತೀಶ ತುರಮರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿವಮೂರ್ತಿ ನಿರೂಪಿಸಿದರು.   ಕಾಲೇಜು ವಿದ್ಯಾರ್ಥಿಗಳಿಂದ ಪ್ರಾರ್ಥನೆ ಜರುಗಿತು. 

ನಂತರ ಹೆಜ್ಜೆ ಗೆಜ್ಜೆ ಜನಪದ ಕಲಾ ತಂಡದಿAದ ತತ್ವಪದ ಗಾಯನ ಹಾಗೂ ನೃತ್ಯ ಕಾರ್ಯಕ್ರಮಗಳು ಜರುಗಿದವು.