ನಿರ್ಮಾಣ 2026’ ಮನೆ ನಿರ್ಮಾಣ ಕ್ಷೇತ್ರದ ನವೀನತೆಗೆ ವೇದಿಕೆ

ನಿರ್ಮಾಣ 2026’ ಮನೆ ನಿರ್ಮಾಣ ಕ್ಷೇತ್ರದ ನವೀನತೆಗೆ ವೇದಿಕೆ  'Nirmana 2026' – A platform for innovation in the home construction sector


ಬಳ್ಳಾರಿ, ಸೆ. 26: “ಮನೆ ನಿರ್ಮಾಣವೆಂದರೆ ಕೇವಲ ನಾಲ್ಕಾರು ಕಂಬಗಳು, ಇಟ್ಟಿಗೆ ಹಾಗೂ ಗೋಡೆಗಳಲ್ಲ. ಅದು ಒಂದು ಕುಟುಂಬದ ಅತಿ ದೊಡ್ಡ ಕನಸು ಮತ್ತು ಭವಿಷ್ಯದ ಭದ್ರತೆಯಾಗಿದೆ” ಎಂದು ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್ ಹೇಳಿದರು.  

ನಗರದ ಟಿಐಎಂ ಮೈದಾನದಲ್ಲಿ ಅಸೋಸಿಯೇಷನ್ ಆಫ್ ಕನ್ಸಲ್ಟಿಂಗ್ ಎಂಜಿನಿಯರ್ಸ್‌ ಆ್ಯಂಡ್ ಆರ್ಕಿಟೆಕ್ಚರಿಂಗ್ (ಂಅಅಇಂ), ಬಳ್ಳಾರಿ ವತಿಯಿಂದ ಮೂರು ದಿನಗಳ ಕಾಲ ಆಯೋಜಿಸಿರುವ ‘ನಿರ್ಮಾಣ 2026’ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.  

ನಿರ್ಮಾಣ ಕ್ಷೇತ್ರದಲ್ಲಿ ಹೊಸ ತಂತ್ರಜ್ಞಾನ, ಆಧುನಿಕ ಉತ್ಪನ್ನಗಳು ಹಾಗೂ ನಿರ್ಮಾಣ ಸಾಮಗ್ರಿಗಳನ್ನು ಒಂದೇ ವೇದಿಕೆಯಲ್ಲಿ ಪರಿಚಯಿಸುವ ಈ ಕಾರ್ಯಕ್ರಮ ಮನೆ ನಿರ್ಮಿಸುವವರಿಗೆ ಅತ್ಯಂತ ಉಪಯುಕ್ತವಾಗಲಿದೆ. ಕನಸಿನ ಮನೆ ಕಟ್ಟುವ ಪ್ರತಿಯೊಬ್ಬರಿಗೂ ಹೊಸ ಮಾಹಿತಿ ದೊರೆಯುವುದರ ಜೊತೆಗೆ ನಿರ್ಮಾಣ ಕ್ಷೇತ್ರದ ಉದ್ಯಮಿಗಳಿಗೆ ಹೊಸ ಅವಕಾಶಗಳು ಲಭಿಸಲಿವೆ ಎಂದು ಅವರು ಹೇಳಿದರು.  

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಎ.ಎಸ್‌. ಸತ್ಯನಾರಾಯಣ ಮಾತನಾಡಿ, ಬಳ್ಳಾರಿಯ ಜನರ ಅಗತ್ಯಗಳನ್ನು ಅರಿತು ಉತ್ತಮ ಗುಣಮಟ್ಟದ ನಿರ್ಮಾಣ ಸಾಮಗ್ರಿಗಳನ್ನು ಪರಿಚಯಿಸುವ ಉದ್ದೇಶದಿಂದ ‘ನಿರ್ಮಾಣ 2026’ ಆಯೋಜಿಸಲಾಗಿದೆ. ಒಂದೇ ಸೂರಿನಡಿ ಮನೆ ನಿರ್ಮಾಣಕ್ಕೆ ಅಗತ್ಯವಿರುವ ವಿವಿಧ ಸಾಮಗ್ರಿಗಳು, ತಂತ್ರಜ್ಞಾನ ಹಾಗೂ ಉತ್ಪನ್ನಗಳ ಪ್ರದರ್ಶನ ಏರಿ​‍್ಡಸಲಾಗಿದೆ. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಕರೆ ನೀಡಿದರು.  

ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಹಮ್ಮದ್ ಹಾರಿಸ್ ಸುಮೇರ್, ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷ ಅವ್ವಾರು ಮಂಜುನಾಥ್, ಕ್ರೀಸ್ಮರ್ ಕಂಪನಿಯ ಅಧ್ಯಕ್ಷ ಡಾ. ರಮೇಶ್ ಗೋಪಾಲ್, ಎಸಿಸಿಇಎ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.  ಕಾರ್ಯಕ್ರಮವನ್ನು ಶೀರೀಷಾ ನಿರೂಪಿಸಿದರು. ಜಗದೀಶ್ ಪ್ರಾರ್ಥಿಸಿದರು. ರಾಕೇಶ್ ಬಿಟಿ ವಂದಿಸಿದರು.