ಜೂನ್ 12ರಂದು 'ಮೃತ್ಯುದೇವತೆ' ಥಿಯೇಟರ್ಗೆ: ಇದು ಮಹಿಳಾ ಪ್ರಧಾನ ಸಿನಿಮಾ
ನಮ್ಮ ಸಮಾಜದಲ್ಲಿ ದಿನನಿತ್ಯ ಮಹಿಳೆಯರ ಮೇಲೆ ಅನ್ಯಾಯ, ಅತ್ಯಾಚಾರ ನಡೆಯುತ್ತಲೇ ಇವೆ. ಇಂತಹ ಟ್ರ್ಯಾಪ್ಗೆ ಒಳಗಾದ ಮೂವರು ಹೆಣ್ಣು ಮಕ್ಕಳು ಹೇಗ ಅದರಿಂದ ಹೊರಬರುತ್ತಾರೆ. ಹಾಗೂ ದುಷ್ಟರ ವಿರುದ್ದ ಹೇಗೆ ತಮ್ಮ ಸೇಡು ತೀರಿಸಿಕೊಳ್ಳುತ್ತಾರೆ ಎಂಬುದನ್ನು 'ಮೃತ್ಯದೇವತೆ' ಮೂಲಕ ನಿರ್ದೇಶಕ ನವೀನ್ ಮಹದೇವ್ ಹೇಳ ಹೊರಟಿದ್ದಾರೆ. ಎಲ್ಲಾ ಅಂದುಕೊಂಡಂತೆ ಆಗಿದ್ದರೆ, ಸಿನಿಮಾ ಕಳೆದ ತಿಂಗಳು ರೀಲೀಸ್ ಆಗಬೇಕಿತ್ತು. ಸೆನ್ಸಾರ್ ಹಾಗೂ ಅನಿಮಲ್ ಬೋರ್ಡ್ ಸಮಸ್ಯೆಯಿಂದಾಗಿ ರೀಲೀಸ್ ಆಗಲಿಲ್ಲ. ಈಗ ಜೂನ್ 12ರಂದು ಚಿತ್ರವನ್ನು ರಾಜ್ಯಾದ್ಯಂತ ತೆರೆಗೆ ತರಲು ತಂಡ ಪ್ಲ್ಯಾನ್ ಮಾಡಿಕೊಂಡಿದೆ. ಈಗಾಗಲೇ ಹಾಡು, ಟ್ರೇಲರ್ನಿಂದ ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಿರುವ 'ಮೃತ್ಯುದೇವತೆ' ಮಹಿಳಾಪ್ರಧಾನ ಕಥಾಹಂದರ ಒಳಗೊಂಡ ಚಿತ್ರವಾಗಿದ್ದು ಮುಖ್ಯ ಪಾತ್ರಗಳಲ್ಲಿ ಹಿರಿಯನಟಿ ವಿನಯಾ ಪ್ರಸಾದ್, ಸಾರಿಕಾ ರಾವ್, ಡಯಾನ ಹಾಗೂ ಹಿಮಶ್ರೀ ಅಭಿನಯಿಸಿದ್ದಾರೆ. ನವೀನ್ ಮಹದೇವ ಈ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ, ಸಾಹಿತ್ಯ ಬರೆದು ನಿರ್ದೇಶನದ ಜೊತೆಗೆ ನಟನೆ ಕೂಡ ಮಾಡಿದ್ದಾರೆ. ವರ್ಷಿತಾ ಪ್ರೊಡಕ್ಷನ್ ಬ್ಯಾನರ್ ಅಡಿ ನಿರ್ದೇಶಕರ ಪತ್ನಿ ಸರಸ್ವತಿ ಅವರು ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.
ಚಿತ್ರದ ಬಗ್ಗೆ ಮಾಹಿತಿ ನೀಡುವ ನಿರ್ದೇಶಕ ನವೀನ್ ಮಹದೇವ್, 'ಇದು ಹೆಣ್ಣುಮಕ್ಕಳನ್ನು ವಿಭಿನ್ನವಾಗಿ ಟ್ರ್ಯಾಪ್ ಮಾಡುವವರ ಕಥೆ. ಹಾಗೆ ಅನ್ಯಾಯಕ್ಕೊಳಗಾದ ಮೂವರು ಹೆಣ್ಣುಮಕ್ಕಳು ಅದರಿಂದ ಹೇಗೆ ಹೊರಬರುತ್ತಾರೆ. ಅವರು ಎಷ್ಟೇ ಬುದ್ದಿವಂತೆಯರಾಗಿದ್ದರೂ ಹೇಗೆ ವಂಚನೆಗೆ ಒಳಗಾಗುತ್ತಿದ್ದಾರೆ ಎಂಬುದನ್ನು ನೈಜ ಪ್ರಕರಣಗಳನ್ನು ಸ್ಟಡಿ ಮಾಡಿ ನಿರೂಪಿಸಿದ್ದೇನೆ. ಸಹನಾಮಯಿ ಹೆಣ್ಣಿನ ಸಹನೆಯ ಕಟ್ಟಿ ಒಡೆದಾಗ ಏನಾಗುತ್ತದೆ ಎಂಬುದೇ ಚಿತ್ರದ ಕಾನ್ಸೆಪ್ಟ್. ಈಗಾಗಲೇ ನಮ್ಮ ಚಿತ್ರದ ಸೆನ್ಸಾರ್ ಪ್ರಕ್ರಿಯೆ ಮುಗಿದಿದ್ದು, ಜೂನ್ 12ರಂದು ತೆರೆಗೆ ಬರಲಿದೆ' ಎಂದು ಹೇಳಿದ್ದಾರೆ.
ನಾಯಕಿ ಸಾರಿಕಾರಾವ್, 'ಇದಕ್ಕೂ ಮೊದಲು ನಾನು ಸಹರಾ ಎಂಬ ಮಹಿಳಾಪ್ರಧಾನ ಚಿತ್ರದಲ್ಲಿ ಅಭಿನಯಿಸಿದ್ದರಿಂದ ಪಾತ್ರ ನಿರ್ವಹಿಸುವುದು ಕಷ್ಟವಾಗಲಿಲ್ಲ. ಚಿತ್ರದ ಬಹುತೇಕ ಸೀನ್ಗಳಲ್ಲಿ ನಾನಿದ್ದೇನೆ. ಚಿತ್ರದಲ್ಲಿ ಆರತಿ ಎಂಬ ಪಾತ್ರ ಮಾಡಿದ್ದೇನೆ. ತುಂಬಾ ಮುಗ್ಧ, ಆಕೆಯನ್ನು ಕೆಣಕಿದಾಗ ಎಕ್ಸ್ ಟೀಮ್ ಲೆವೆಲ್ಗೆ ಹೋಗ್ತಾಳೆ. ನಾನಿಲ್ಲಿ ಫೈಟಿಂಗ್ ಕೂಡ ಮಾಡಿದ್ದೇನೆ' ಎನ್ನುವರು. ಈ ಚಿತ್ರದಲ್ಲಿ ವಿಲನ್ ಪಾತ್ರವನ್ನ ಮಾಹೀನ್ ನಿರ್ವಹಿಸಿದ್ದಾರೆ. ಛಾಯಾಗ್ರಾಹಕ ಅನಿರುದ್ ಚಿತ್ರದಲ್ಲಿ ಹೊಸ ಕ್ಯಾಮೆರಾ ಬಳಸಿದ್ದು, ಸಂಪೂರ್ಣವಾಗಿ ಅದರಲ್ಲೇ ಶೂಟ್ ಮಾಡಿದ್ದಾರೆ. ಶಿವಪ್ರಸಾದ್ ಅವರ ಸಂಗೀತ ನಿರ್ದೇಶನ, ಮಂಜು, ವಿಕ್ರಂ ಅವರ ಸಂಕಲನ ಈ ಚಿತ್ರಕ್ಕಿದೆ. ಬೇಬಿ ವರ್ಷಿತಾ ಕೂಡ ಅಭಿನಯ ಮಾಡಿದ್ದಾರೆ.
ಒಬ್ಬರಿಗೆ ಒಂದೇ ಹುದ್ದೆ ಕಾಂಗ್ರೆಸ್ ಪಕ್ಷದ ನಿಯಮದಿಂದ ಕೆಪಿಸಿಸಿ ಅಧ್ಯಕ್ಷ ಸ್ಥಾನ ಕೈ ತಪ್ಪಿದೆ : ಸಚಿವ ಸತೀಶ ಜಾರಕಿಹೊಳಿ
ಖಾತೆ ಮುಟ್ಟುಗೋಲಾದರೂ ಶಿವಂ ಸಂಸ್ಥೆಗೆ ಜನರಿಂದ ಇನ್ನೂ ದುಡ್ಡು ಠೇವಣಿ : ವಂಚನೆ ಜಾಲದಿಂದ ದೂರ ಇರಿ, ಜನರಿಗೆ ಸಿಐಡಿ ಡಿಐಜಿಪಿ ಗುಳೇದ್ ಮನವಿ
ಬಹುಕೋಟಿ ಹಣ ವಂಚನೆ : ಆದಿತ್ಯರಾಜ್ ಕೇಸು ಸಿಐಡಿಗೆ, ಸಿಇಓ ವಿರುದ್ಧ ಲುಕ್ ಔಟ್ ನೋಟಿಸ್ ಜಾರಿ, ಏರ್ಪೋರ್ಟ್ ಗಳಿಗೆ ಮಾಹಿತಿ ರವಾನೆ
ಚಿನ್ನ ದೋಚಿದ್ದ ಖದೀಮನ ಬಂಧನ : 15.73 ಲಕ್ಷ ಮೌಲ್ಯದ 103.97 ಗ್ರಾಂ ಚಿನ್ನ ವಶ
ಕಣಗಲಾ ಬಳಿ ಲಾರಿ, ದ್ವಿಚಕ್ರವಾಹನ ನಡುವೆ ಅಪಘಾತ : ಇಬ್ಬರ ಸಾವು
ಗಾಂಜಾ ಮಾರಾಟಗಾರರ ಮೇಲೆ ದಾಳಿ; 9,21 ಲಕ್ಷದ ವಸ್ತುಗಳ ವಶ, ಐವರ ಬಂಧನ 