ಮನೆ ಕಳ್ಳತನ ತಡೆಗೆ ‘ಲಾಕ್ಡ್ ಹೌಸ್ ಬೀಟ್ ಸಿಸ್ಟಂ’ : ದಾಂಡೇಲಿಯಲ್ಲಿ ರಕ್ಷಾ ಕಾರ್ಯಕ್ರಮ
'Locked House Beat System' to Prevent Burglaries: 'Raksha' Programme in Dandeli
ಲೋಕದರ್ಶನ ವರದಿ
ದಾಂಡೇಲಿ 20 : ದಾಂಡೇಲಿ ಪೋಲಿಸ್ ಉಪ ವಿಭಾಗದಿಂದ ಅಂಬೇವಾಡಿಯ ಜಿ+2 ಮನೆಗಳ ಸಮುಚ್ಚಯದಲ್ಲಿ ರಕ್ಷಾ ಕಾರ್ಯಕ್ರಮ ಆಯೋಜಿಸಲಾಯಿತು. ಈ ಕಾರ್ಯಕ್ರದಡಿ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳ ನಿರ್ದೇಶನದ ಮೇರೆಗೆ ಲಾಕ್ಡ್ ಹೌಸ್ ಬೀಟ್ ಸಿಸ್ಟಮ್ ಎಂಬ ಕಾರ್ಯಕ್ರಮ ಏರಿ್ಡಸಿ ಸಾರ್ವಜನಿಕರಿಗೆ ಇದರ ಉದ್ದೇಶವನ್ನು ತಿಳಿಸಿದ್ದು, ಮುಖ್ಯವಾಗಿ ಮನೆ ಕಳ್ಳತನ ತಡೆಗಟ್ಟುವದು ಮತ್ತು ಮನೆಗಳ ಸುರಕ್ಷತೆ ಕಾಪಾಡುವದಾಗಿದೆ.
ಈ ಹಿನ್ನೆಲೆಯಲ್ಲಿ ಸಿ.ಪಿ.ಐ ಶಿವಾನಂದ ಅಂಬಿಗೇರ ಮಾರ್ಗದರ್ಶನದಲ್ಲಿ ಪಿ.ಎಸ್.ಐ ಕಿರಣ ಪಾಟೀಲ್ ರಕ್ಷಾ ಕಾರ್ಯಕ್ರಮದಲ್ಲಿ ಸಾರ್ವಜನಿಕರು ಮನೆಯನ್ನು ಬಿಟ್ಟು ಪರ ಊರಿಗೆ ಹೋಗುವಾಗ ಮನೆಯ ಸುರಕ್ಷತೆಯ ದೃಷ್ಟಿಯಿಂದ ಮಾಡಬೇಕಾದ ಕ್ರಮಗಳ ಕುರಿತು ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಪೌರಾಯುಕ್ತ ವಿವೇಕ್ ಬನ್ನೆ, ಮಾಜಿ ನಗರಯೋಜನಾ ಪ್ರಾಧಿಕಾರದ ಅಧ್ಯಕ್ಷ ಅಶೋಕ ಪಾಟೀಲ್ ಮತ್ತು ಸ್ಥಳೀಯ ನಾಗರಿಕರು ಉಪಸ್ಥಿತರಿದ್ದರು.
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು
ನಾಗರಿಕರ ಬಹುಕೋಟಿ ಹಣ ವಂಚನೆ ಪ್ರಕರಣ: ಮತ್ತೋರ್ವ ಆರೋಪಿಯ ಬಂಧನ 