ಹಾಡು, ಟ್ರೇಲರ್‌ನಲ್ಲಿ 'ಎಜುಕೇಟೆಡ್ ಬುಲ್ಸ್'
ಲೋಕದರ್ಶನ ವರದಿ
ಹಿರಿಯ ನಿರ್ದೇಶಕ ಜಿ.ಕೆ ಮುದ್ದುರಾಜ್ ಹತ್ತು ವರ್ಷಗಳ ಗ್ಯಾಪ್ ನಂತರ ಇದೀಗ 'ಎಜುಕೇಟೆಡ್ ಬುಲ್ಸ್' ಎಂಬ ಸಾಮಾಜಿಕ ಸಂದೇಶ ಹಾಗೂ ಇಂದಿನ ಯುವಕರ ಮನಸ್ಥಿತಿಯನ್ನು ಗಮನದಲ್ಲಿ ಇಟ್ಟುಕೊಂಡು ಸಿನಿಮಾ ಮಾಡಿದ್ದಾರೆ. ಮುದ್ದುರಾಜ್ ನಿರ್ದೇಶನದ 41ನೇ ಸಿನಿಮಾ ಈ 'ಎಜುಕೇಟೆಡ್ ಬುಲ್ಸ್'. ನಾಲ್ಕು ಜನ ಹೀರೋ ಒಬ್ಬಳು ಹೀರೋಯಿನ ಒಳಗೊಂಡ ಮನರಂಜನಾ ಸಿನಿಮಾ. ಈಗಾಗಲೇ ಸೆನ್ಸಾರ್‌ನಿಂದ ಯು/ಎ ಪ್ರಮಾಣಪತ್ರ ಪಡೆದಿರುವ ಈ ಚಿತ್ರವನ್ನು ಎಂ.ಎಸ್. ಎಂಟರ್‌ಪ್ರೈಸಸ್ ಲಾಂಚನದಲ್ಲಿ ಮುದ್ದುರಾಜ್ ಅವರೇ ನಿರ್ಮಾಣ ಕೂಡ ಮಾಡಿದ್ದಾರೆ. ಮೇನಲ್ಲಿ ತೆರೆಗೆ ಸಿದ್ದವಾಗಿರುವ ಈ ಚಿತ್ರದ ಟ್ರೇಲರ್ ಹಾಗೂ ಹಾಡುಗಳ ಬಿಡುಗಡೆ ಕಾರ್ಯಕ್ರಮ ಇತ್ತೀಚೆಗೆ ನಡೆಯುತು.
ಈ ಸಂದರ್ಭದಲ್ಲಿ ಮಾತನಾಡಿದ ಚಿತ್ರದ ನಿರ್ದೇಶಕ ಕಂ ನಿರ್ಮಾಪಕ ಜಿ.ಕೆ ಮುದ್ದುರಾಜ್, 'ಎಜುಕೇಟೆಡ್ ಬುಲ್ಸ್' ಎಂದರೆ, ವಿದ್ಯಾವಂತ ಗೋಡೆಗಳು ಎಂದು ಅರ್ಥ. ಒಂದು ವರ್ಷದ ಹಿಂದೆ ಈ ಚಿತ್ರ ಪ್ರಾರಂಭವಾಯ್ತು. ಇದರಲ್ಲಿರುವ ನಾಲ್ಕು ಜನ ನಾಯಕರು ಒಬ್ಬಳು ನಾಯಕಿ ಹೊಸ ಕಲಾವಿದರು. ಅವರೆಲ್ಲಾ ಹೊಸಬರಾದರೂ ಒಳ್ಳೆಯ ನಟನೆ ಮಾಡಿದ್ದಾರೆ. ಇದು ತಂತ್ರಜ್ಞರಿಂದ ಆದ ಸಿನಿಮಾ. 2022ರಲ್ಲಿ ಇದೇ ಶೀರ್ಷಿಕೆಯಲ್ಲಿ ಸಿನಿಮಾವೊಂದು ಶೂರು ಮಾಡಿದ್ದೆ. ಅದು ನಿರ್ಮಾಪಕರ ಕಾರಣದಿಂದ ನಿಂತು ಹೋಯಿತು. ನಂತರ ಕಥೆ ಬದಲಾವಣೆ ಮಾಡಿಕೊಂಡು ನಾನೇ ಈ ಸಿನಿಮಾ ನಿರ್ಮಾಣ ಮಾಡಿದೆ. ನಾಲ್ಕು ಜನ ಹೀರೋಗಳು ವಿದ್ಯಾವಂತರು. ಅವರಿಗೆ ಆಸೆ ಆಕಾಂಕ್ಷೆಗಳು ತುಂಬಾ ಇವೆ. ಕನಸು ಇಡೇಸುಕೊಳ್ಳಲು ಹೋಗಿ ಮೋಸಕ್ಕೆ ಒಳಗಾಗಿ ಏನೆಲ್ಲಾ ಮಾಡುತ್ತಾರೆ ಎಂಬುದು ಸಿನಿಮಾ. ಒಬ್ಬ ವ್ಯಕ್ತಿಗೆ ಬುದ್ದಿ, ವಿದ್ಯೆ ಎರಡು ಇರಬೇಕು ಅದರಲ್ಲು ಬುದ್ದಿ ಬಹಳ ಮುಖ್ಯ ಎಂಬ ಅಂಶದ ಮೇಲೆ ಸಿನಿಮಾ ಅಗುತ್ತದೆ. ಈಗಾಗಲೇ ಸಿನಿಮಾ ನೋಡಿದವರು ಹೊಗಳಿದ್ದು ಸದ್ಯದಲ್ಲೇ ರೀಲೀಸ್ ಪ್ಲ್ಯಾನ್ ಇದೆ. 10 ವರ್ಷದ ಗ್ಯಾಪ್ ನಂತರ ಈಗ ಸಿನಿಮಾ ಮಾಡಲು ಕಾರಣ ನನ್ನ ವ್ಯಕ್ತಿತ್ವಕ್ಕೆ ನಿರ್ಮಾಪಕರು, ನಟರು ಹೊಂದಾನಿಕೆ ಆಗಲಿಲ್ಲ. ನಾನು ನೇರ ನಿಷ್ಟೂರ ಮನುಷ್ಯ. ಕೆಲಸ ನಂಬಿಕೊಂಡು ಈಗ ಸಿನಿಮಾ ಮಾಡಿದ್ದೇನೆ. ಪ್ರೇಕ್ಷಕರಿಗೆ ತೃಪ್ತಿ ನೀಡುವ ಸಿನಿಮಾ ಇದಾಗಿದೆ. ಸಿನಿಮಾ ನೋಡಿದ ಮೂರು ಜನ ಬಿಡುಗಡೆಗೆ ಸಹಕಾರ ನೀಡಲು ಮುಂದೆಬಂದು ಸಹಾಯ ಮಾಡುತ್ತಿದ್ದಾರೆ' ಎಂದು ಹೇಳಿದರು.
'ಇದೊಂದು ಎಕ್ಸಿ-್ಪರೇನ್ಸ್ ಆಗಿ ಸಿನಿಮಾ ಮಾಡಿದ್ದೇನೆ. ಮೆಸೇಜ್ ಇರುವಂತ ಮನರಂಜನಾ ಸಿನಿಮಾ ಇದಾಗಿದೆ. ನಾನು ಈಗಾಗಲೇ 'ಬಿಚ್ಚುಗತ್ತಿ ಸೇರಿದಂತೆ 16 ಸಿನಿಮಾಗೆ ಕೆಲಸ ಮಾಡಿದ್ದೇನೆ' ಎನ್ನುವರು ಸಂಗೀತ ನಿರ್ದೇಶಕ ಸೂರಜ್ ಜೋಯಿಸ್. 25 ಕೋಟಿ ಹಣದ ಸುತ್ತ ನಡೆಯುವ ಕಥೆಯಲ್ಲಿ ಹೊಸ ಹಾಗೂ ಹಳೆ ಕಲಾವಿದರ ಸಮಾಗಮ ಆಗಿದೆ. ಚಿತ್ರದ ನಾಯಕರುಗಳಾಗಿ ನೀರಜ್, ಅಜಯ್ ರಾಮ್, ತೇಜಸ್ ಕುಮಾರ್, ರಾಕೇಶ್ ನಾಯಕಿಯಾಗಿ ಪೂರ್ವಿಕಾ ನಟಿಸಿದ್ದು, ಇವರೆಲ್ಲಾ ವೇದಿಕೆಯಲ್ಲಿ ತಮ್ಮ ಅನುಭವ ಹಂಚಿಕೊಂಡರು. ಇದೇ ಸಂದರ್ಭದಲ್ಲಿ ಸಹ ನಟ 'ಪಾಪಪಾಂಡು' ಖ್ಯಾತಿಯ ಚಿದಾನಂದ ಹಾಗೂ ಛಾಯಾಗ್ರಾಹಕ ರತಿಂದ್ ಗೌಡ ಸಿನಿಮಾ ಬಗ್ಗೆ ಮಾತನಾಡಿದರು. ಅಂದಂಗೆ ಚಿತ್ರಕ್ಕೆ ಎಂ.ಪಿ. ಅರುಣ್‌ಕುಮಾರ್ ಕಥೆ, ಹರೀಶ್ ಸಂಭಾಷಣೆ, ಥ್ರಿಲ್ಲರ್ ಮಂಜು ಸಾಹಸವಿದೆ. ಚಿತ್ರದಲ್ಲಿ ಮುಖ್ಯ ಪಾತ್ರಕ್ಕೆ ಹಿರಿಯ ನಟಿ ಭವ್ಯಾ ಅಭಿನಯ ಮಾಡಿದ್ದಾರೆ.
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 