“ಶೂನ್ಯದಿಂದ ಬಂದವರೇ ಹೆಚ್ಚು ಸಾಧನೆಯ ಶಿಖರವೇರಿದ್ದಾರೆ ಹಿ ಶಿವಾನಂದ ಕ್ಯಾಲಕೊಂಡ”
“It is those who started from scratch who have scaled the greatest heights of achievement.” — Shivan
ಲೋಕದರ್ಶನ ವರದಿ
ಹಾವೇರಿ 12: ಅಕ್ಕಿ-ಆಲೂರು ಹಿ ನಗರದ ಹಾನಗಲ್ ರಸ್ತೆಯಲ್ಲಿರುವ ಹಾವೇರಿಯ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ಭಗತ್ಸಿಂಗ್ ಸಂಸ್ಥೆಯ ಸಹಯೋಗದಲ್ಲಿ ನಡೆಯುತ್ತಿರುವ ಎನ್.ಡಿ.ಪಿ.ಯು ಕಾಲೇಜು(ವಿಜ್ಞಾನ ವಿಭಾಗ)ದಲ್ಲಿ ನಡೆದ ಪ್ರಥಮ ಪಿ.ಯು ವಿದ್ಯಾರ್ಥಿಗಳ ಸ್ವಾಗತ ಸಮಾರಂಭ ಮತ್ತು ವಿದ್ಯಾರ್ಥಿ ಸಂಸತ್ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ಹಾನಗಲ್ ಪುರಸಭೆಯ ಯೋಜನಾಧಿಕಾರಿಗಳಾದ ಶಿವಾನಂದ ಕ್ಯಾಲಕೊಂಡರವರು ಮಾತನಾಡಿ ಸಮಾಜದಲ್ಲಿ ಶೂನ್ಯದಿಂದ ಬಂದವರೇ ಹೆಚ್ಚು ಸಾಧನೆಯ ಶಿಖರವೇರಿದ್ದಾರೆ ಎಂದು ಮಕ್ಕಳಿಗೆ ತಿಳಿಸಿದರು.
ಮಕ್ಕಳಿಗೆ ನೀವುಗಳೆಲ್ಲಾ ಶಿಕ್ಷಣ ಸಂಸ್ಥೆಗಿಂತಾ ಹತ್ತುಪಟ್ಟು ಹೆಚ್ಚು ಶ್ರಮಪಟ್ಟು ನಿಮ್ಮ ಪಾಲಕರು ನಿಮ್ಮ ಮೇಲಿಟ್ಟಿರುವ ನಂಬಿಕೆಯನ್ನು ಉಳಿಸಿಕೊಳ್ಳಬೇಕು. ನಿಮ್ಮ ಪಾಲಕರು ಆಶಿಸುವ ಹಾಗೆ ಕುದುರೆ ಹತ್ತಿ ಬರೋ ರಾಜಕುಮಾರ ಆಗಬೇಕು. ಜಗತ್ತೆ ಬೆರಗಾಗಿ ನೋಡಿದ ಎಲಾನ್ ಮಾಸ್ಕ ರೀತಿ ಬೆಳೆದು ತೋರಿಸಬೇಕು.ಹಾಗೆ ನಿಂತ ನೀರಾಗದೇ ಚಲನಶೀಲರಾಗಬೇಕು ಎಂದು ತಿಳಿಸಿ ನಿಮ್ಮ ಬದುಕು ಬಂಗಾರವಾಗಲಿ ಎಂದು ಹಾರೈಸಿದರು.ಮತ್ತೂರ್ವ ಅತಿಥಿಯಾಗಿ ಆಗಮಿಸಿದ ಸಮಾಜ ಕಲ್ಯಾಣ ಇಲಾಖೆಯ ವಸತಿ ನಿಲಯ ಪಾಲಕರಾದ ಸುಜಾತಾ ಕಡೇಮನಿ ಮಾತನಾಡಿ ಶಿಕ್ಷಣವೆಂಬುದು ಹುಲಿಯ ಹಾಲಿದ್ದಂತೆ ಅದನ್ನು ಕುಡಿದವರು ಘರ್ಜಿಸಲೇಬೇಕು ಹಾಗಾಗಿ ನೀವೂ ಕೂಡ ಸಂಸ್ಥೆಯವರು ಕೊಟ್ಟ ಎಲ್ಲ ಅವಕಾಶಗಳನ್ನು ಉಪಯೋಗಿಸಿಕೊಂಡು ಮುನ್ನಡೆಯಿರಿ ಎಂದು ತಿಳಿಸಿದರು.
ಉಪನ್ಯಾಸಕರಾದ ಆಸ್ಮಾ ತಳಕಲ್ ಮತ್ತು ಪಂಚಾಕ್ಷರಿ ಕಾಡಪ್ಪನವರ ಮಾತನಾಡಿ ಈ ಸಂಸ್ಥೆ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಅನೂಕೂಲವಾಗಲಿ ಎಂದು ನಗರದ ಎಲ್ಲ ಸೌಲಭ್ಯಗಳನ್ನು ಇಲ್ಲಿಯೇ ಕೊಟ್ಟು ನಿಮಗೆ ಕಡಿಮೆ ಹಣದಲ್ಲಿ ವಿದ್ಯಾಭ್ಯಾಸ ನೀಡುತ್ತಿದ್ದು ಅದರ ಸದುಪಯೋಗ ಮಾಡಿಕೊಳ್ಳುವಲ್ಲಿ ನೀವು ವಿಫಲರಾಗಬಾರದು ಎಂದು ಎಚ್ಚರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಸಂಸ್ಥೆಯ ಅಧ್ಯಕ್ಷರಾದ ಶ್ರೀಮತಿ ಅಶ್ವಿನಿ ಭಾಗಣ್ಣನವರ ಮಾತನಾಡಿ ಕಳೆದ ವರ್ಷ ಮೊದಲನೆ ಬ್ಯಾಚ್ಲ್ಲಿಯೇ ನಿಮ್ಮ ಸಿನಿಯರ್ಸ ಶೇ 95ಅ ಮಾಡುವುದರ ಮುಖಾಂತರ ತಾಲೂಕಿಗೆ ರಾ್ಯಂಕ ತಂದು ಕೊಟ್ಟಿದ್ದಾರೆ.
ಅವರ ಹಾದಿಯಲ್ಲಿಯೇ ನೀವೂ ಸಾಗಿ ಈ ವರ್ಷವೂ ಉತ್ತಮ ಪಲಿತಾಂಶ ನೀಡಿ ಅದಕ್ಕೆ ಸಂಬಂಧಪಟ್ಟ ಎಲ್ಲಾ ತಯಾರಿಯನ್ನು ನಾವು ಮಾಡುತ್ತೇವೆ.ನಿಮ್ಮಿಂದಲೇ ಜಿಲ್ಲೆಗೆ ರಾಜ್ಯಮಟ್ಟದಲ್ಲಿ ಒಂದು ಒಳ್ಳೆಯ ರಾ್ಯಂಕ ಬರುವಂತಾಗಲಿ ಎಂದು ತಿಳಿಸಿದರು.ಹಾಗೆಯೇ ಪ್ರಥಮ ಪಿ.ಯು ವಿದ್ಯಾರ್ಥಿಗಳನ್ನು ಮನಃಪೂರ್ವಕವಾಗಿ ಸ್ವಾಗತಿಸಿ ಶುಭ ಹಾರೈಸಿದರು. ವೇದಿಕೆಯಲ್ಲಿ ಉಪನ್ಯಾಸಕರಾದ ನಾಜರಿನ ನೆಗಳೂರು,ಪರಶುರಾಮ ರಿತ್ತಿ, ದಿವ್ಯಲಕ್ಷ್ಮಿ ಡಿ.ಜೆ, ಮೊಹಿನ್ಖಾನ್ ಪಠಾಣ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ರಾಜಸ್ಥಾನದ ಡುಂಗರ್ಪುರದಲ್ಲಿ ಮೂವರು ಸಹೋದರರು ಮತ್ತು ಸಂಬಂಧಿ ನೀರುಪಾಲು; ಇಬ್ಬರು ಬಾಲಕರ ರಕ್ಷಣೆ
ಕತಾರ್ನ ಮಾಜಿ ಅಮೀರ್ ಶೇಖ್ ಹಮದ್ ಬಿನ್ ಖಲೀಫಾ ಅಲ್ ಥಾನಿ 74ನೇ ವಯಸ್ಸಿನಲ್ಲಿ ನಿಧನ; ನಾಲ್ಕು ದಿನಗಳ ರಾಷ್ಟ್ರೀಯ ಶೋಕಾಚರಣೆ ಘೋಷಣೆ
ದಕ್ಷಿಣ ಭಾರತದ ಕೋಗಿಲೆ ಎಸ್. ಜಾನಕಿ ನಿಧನ; 88ನೇ ವಯಸ್ಸಿನಲ್ಲಿ ಕೊನೆಯುಸಿರು
ಮಹಾರಾಷ್ಟ್ರದಲ್ಲಿ ಭೂಕುಸಿತದಿಂದ ರೈಲು ಸಂಚಾರಕ್ಕೆ ಅಡ್ಡಿ; ಎಸ್ಸಿಆರ್ 25 ರೈಲುಗಳ ಮಾರ್ಗ ಬದಲಾವಣೆ
ಖಾನಾಪೂರ ಶಾಸಕ ಹಲಗೇಕರ ಅಡ್ಡ ಮತದಾನ ಮಾಡಿದರಾ?, ಅಂಜಲಿ ನಿಂಬಾಳಕರ್ ಮಾತಿನ ಮರ್ಮವೇನು
ಲಕ್ಷ್ಮಣ್ ಉಟೇಕರ್ ಅವರ ಮುಂಬರುವ ಚಿತ್ರದಲ್ಲಿ ಹೃತಿಕ್ ರೋಷನ್ ಅಭಿನಯಿಸುವ ಸಾಧ್ಯತೆ 