“ಶಿಕ್ಷಣವು ಬರೀ ಹೊಟ್ಟೆ ಹೊರೆಯುವ ಸಾಧನವಲ್ಲ” -ಡಾ. ಅವನೀಶ ಪಾಟೀಲ
“Education is not merely a means to earn a livelihood” – Dr. Avanisha Patil
ಲೋಕದರ್ಶನ ವರದಿ
ಬೆಳಗಾವಿ 07: ಶಿಕ್ಷಣವು ಮನುಷ್ಯನ ಮುಕ್ತಿಯ ಸಾಧನ. ಅದು ಎಲ್ಲ ಬಂಧನಗಳನ್ನು ಬಿಡಿಸಿ, ಮಿತಿಗಳನ್ನು ಮೀರಿ ಮನುಷ್ಯನು ಮನುಷ್ಯನಾಗಿ ಬೆಳೆಯುವುದಕ್ಕೆ ಬೇಕಾಗುವ ಅಸ್ತ್ರ. ಅದು ವ್ಯಕ್ತಿಯ ಮತ್ತು ಸಮಾಜದ ಬದುಕಿನ ಪರಿವರ್ತನೆಯನ್ನು ಮಾಡಬೇಕು. ವೈಜ್ಞಾನಿಕ ದೃಷ್ಟಿಕೋನವನ್ನು ಮೂಡಿಸಿ ಬದುಕಿನ ಪರಿವರ್ತನೆಯನ್ನು ಸಾಧಿಸುವುದು ಅದರ ಉದ್ದೇಶವಾಗಬೇಕೇ ವಿನಃ ಬರೀ ಹೊಟ್ಟೆ ಹೊರೆಯುವ ಸಾಧನವಾಗಬಾರದು ಎಂದು ಖ್ಯಾತ ಇತಿಹಾಸಕಾರರೂ, ಸಂಶೋಧಕರೂ ಶಿವಾಜಿ ವಿಶ್ವವಿದ್ಯಾಲಯದ ಇತಿಹಾಸ ವಿಭಾಗದ ಮುಖ್ಯಸ್ಥರಾದ ಡಾ. ಅವನೀಶ ಪಾಟೀಲ ಅವರು ನುಡಿದರು. ದಿನಾಂಕ 6 ಅಗಸ್ಟ, 2026 ರಂದು ಜರುಗಿದ ಬೆಳಗಾವಿಯ ಪ್ರತಿಷ್ಠಿತ ಸೌಥ್ ಕೊಂಕಣ ಶಿಕ್ಷಣ ಸಂಸ್ಥೆಯ ಸಂಸ್ಥಾಪನಾ ದಿನಾಚರಣೆಯ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿದರು. ಗೌರವ ಅತಿಥಿಗಳಾಗಿ ಆಗಮಿಸಿದ್ದ ಸಾವಂತವಾಡಿಯ ರಾಜಮಾತಾ ರಾಣಿ ಪಾರ್ವತಿದೇವಿ ಅವರ ಮೊಮ್ಮಗ ಶ್ರೀ ಶ್ರೀಮಂತ ಖೇಮರಾಜ ಸಾವಂತ ಭೋಸ್ಲೆ ಅವರು ರಾಣಿ ಪಾರ್ವತಿ ದೇವಿ ಅವರ ಜೀವನ ಸಾಧನೆಯನ್ನು ಮತ್ತು ಸಂಸ್ಥೆಯ ಹಿಂದಿರುವ ಸಾಮಾಜಿಕ ಪರಿವರ್ತನೆಯ ಉದ್ದೇಶವನ್ನು ವಿವರಿಸಿದರು.
ಸಮಾರಂಭದ ಅಧಕ್ಷತೆ ವಹಿಸಿದ್ದ ಎಸ್.ಕೆ.ಇ. ಸಂಸ್ಥೆಯ ಚೇರಮನ್‌ರಾದ ಸನ್ಮಾನ್ಯ ಶ್ರೀ ಕಿರಣ ಠಾಕೂರ ಅವರು ಇಂದು ವಿದ್ಯಾರ್ಥಿಗಳು ಸರ್ವಾಂಗೀಣ ಏಳಿಗೆಯನ್ನು ಹೊಂದಲು ವಿದ್ಯಾರ್ಥಿ-ಪಾಲಕ-ಶಿಕ್ಷಕರ ನಡುವೆ ಮುಕ್ತ ಸಂಬಂಧ ಏರ್ಡಬೇಕಾಗಿದೆ. ಶಿಕ್ಷಣವೆಂದರೆ ಬರೀ ಅಂಕಪಟ್ಟಿಯನ್ನು ಪಡೆಯುವುದಲ್ಲ ಅದು ಅರ್ಹತೆಯನ್ನು ಗಳಿಸುವುದಾಗಿದೆ ಎಂದು ನುಡಿದರು. ಸ್ವಾತಂತ್ರ್ಯಕ್ಕೆ ಹೋರಾಡಿದ, ಶ್ರೀ ಅಣ್ಣಾ ಸಾಹೇಬ ಲಠ್ಠೆ, ಡಾ. ಜಿ. ವಿ. ಹೇರೇಕರ, ಶ್ರೀ ಬಾಬುರಾವ ಠಾಕೂರ, ಶ್ರೀ ವಿ. ವಿ. ಹೇರವಾಡಕರ, ಡಾ. ವಾಯ್. ಕೆ. ಪ್ರಭು ಮಹನೀಯರು ಈ ಸಂಸ್ಥೆಯ ಮೂಲಕ ಶಿಕ್ಷಣ ಸೇವೆ ಗೈದಿದ್ದಾರೆ. ಶ್ರೀ ಗಂಗಾಧರರಾವ್ ದೇಶಪಾಂಡೆ ಮೊದಲಾದ ಮಹನೀಯರು ಶಿಕ್ಷಣಕ್ಕೆ ಪೂರಕವಾಗಿ ಸೇವೆ ಗೈದಿದ್ದಾರೆ. ಆದುದರಿಂದ ಪಾರದರ್ಶಕ ಸೇವೆಗೆ ಈ ಸಂಸ್ಥೆಯು ಹೆಸರುವಾಸಿಯಾಗಿದೆ ಎಂದು ಸಂಸ್ಥಾಪಕ ಮಹನೀಯರನ್ನು ಸ್ಮರಿಸಿದರು. ವೇದಿಕೆಯ ಮೇಲೆ ಎಸ್. ಕೆ. ಇ. ಸಂಸ್ಥೆಯ ಉಪಾಧ್ಯಕ್ಷರಾದ ಶ್ರೀ ಆರ್. ಬಿ. ದೇಶಪಾಂಡೆ ಅವರು ಉಪಸ್ಥಿತರಿದ್ದರು.
ಆರ್. ಪಿ. ಡಿ ಮಹಾವಿದ್ಯಾಲಯವು ಆಯೋಜಿಸಿದ ಈ ಸಮಾರಂಭದಲ್ಲಿ ಕುಮಾರಿ ವೃಂದಾ ಮಂಜರಿ ಪ್ರಾರ್ಥನೆ ಸಲ್ಲಿಸಿದರು. ಪ್ರಾಚಾರ್ಯರಾದ ಡಾ. ಅಭಯ ಎಂ. ಪಾಟೀಲ ಅವರು ಸ್ವಾಗತಿಸಿದರು. ಸಂಸ್ಥೆಯ ಗೌರವ ಕಾರ್ಯದರ್ಶಿಗಳಾದ ಶ್ರೀಮತಿ ಲತಾತಾಯಿ ಕಿತ್ತೂರ ಅವರು ಸಂಸ್ಥೆಯ ಸಾಧನೆಯನ್ನು ವಿವರಿಸಿದರು. ಆರ್. ಪಿ. ಡಿ ಮಹಾವಿದ್ಯಾಲಯದ ಆಡಳಿತ ಮಂಡಳಿಯ ಚೇರಮನ್‌ರಾದ ಶ್ರೀಮತಿ ಬಿಂಬಾ ನಾಡಕರ್ಣಿ ಅವರು ಅತಿಥಿಗಳನ್ನು ಪರಿಚಯಿಸಿದರು. ಪ್ರೊ ರೀಟಾ ಬಣಗಾರ ಹಾಗೂ ಡಾ. ಶರ್ಮಿಳಾ ಸಂಭಾಜಿ ಅವರು ಕಾರ‌್ಯಕ್ರಮ ನಿರೂಪಿಸಿದರು. ಕೊನೆಯಲ್ಲಿ ಪ್ರೊ. ಎಸ್. ಶೃತಿ ಸಾಲ್ಗುಡೆ ವಂದಿಸಿದರು. ಸಮಾರಂಭದಲ್ಲಿ ಸಂಸ್ಥೆಯ ಆಡಳಿತ ಮಂಡಳಿಯ ಎಲ್ಲ ಸದಸ್ಯರು, ಎಸ್. ಕೆ. ಇ ಸಂಸ್ಥೆಯ ಎಲ್ಲ ಶಿಕ್ಷಕ ಹಾಗೂ ಶಿಕ್ಷಕೇತರ ಸಿಬ್ಬಂದಿ ವರ್ಗದವರು ಅಪಾರ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ರಾಷ್ಟ್ರಗೀತೆಯೊಂದಿಗೆ ಕಾರ‌್ಯಕ್ರಮ ಮುಕ್ತಾಯಗೊಂಡಿತು.
ಉತ್ತರ ವಲಯ ಪೊಲೀಸರಿಂದ ರೌಡಿ ನಿಗ್ರಹಕ್ಕೆ ಕಠಿಣ ಕ್ರಮ : 23 ರೌಡಿಗಳ ಗಡಿಪಾರು
ಅಕ್ರಮ ಸಂಬಂಧಕ್ಕೆ ಅಡ್ಡಿಯಾದ ಪತಿ ಹತ್ಯೆ; ಕಾಣೆಯಾದ ನಾಟಕ, 6 ತಿಂಗಳ ಬಳಿಕ ಪ್ರಕರಣ ಬಯಲು
6.85 ಕೆ.ಜಿ. ಗಾಂಜಾ ಮಿಶ್ರಿತ ಚಾಕಲೇಟ್ ಪ್ಯಾಕೆಟ್ಗಳ ವಶ: ಓರ್ವ ಆರೋಪಿ ಬಂಧನ
ಕಳೆದುಹೋಗಿದ್ದ 57 ಮೊಬೈಲ್ ಸಿಇಐಆರ್ ಪೋರ್ಟಲ್ ಮೂಲಕ ಪತ್ತೆ: ವಾರಸುದಾರರಿಗೆ ವಾಪಸ್
ಬಹುಕೋಟಿ ವಂಚನೆ : ನೀಲಣ್ಣವರ, ಪತ್ನಿ ಸೇರಿ ಆಪ್ತರ ಕಚೇರಿ, ನಿವಾಸಗಳ ಮೇಲೆ ಇಡಿ ದಾಳಿ
ಬಡೆಕೊಳ್ಳಮಠದ ಬಳಿ ಅಪಘಾತ ತಡೆಗೆ ತಾತ್ಕಾಲಿಕ ಕ್ರಮ: ಮಳೆಗಾಲ ಬಳಿಕ ಶಾಶ್ವತ ಕಾಮಗಾರಿ 