ಯರಗಟ್ಟಿ 07: ನಾಟಕಗಳಿಂದ ಸಮಾಜದಲ್ಲಿಯ ಅಂಕು ಡೊಂಕುಗಳನ್ನು ತಿದ್ದುಲು ಸಾಧ್ಯ. ನಾಟಕಗಳು ಮನುಷ್ಯನ ಜೀವನವನ್ನು ಬದಲಾಯಿಸುತ್ತವೆ. ಕೆಲವು ವರ್ಷಗಳ ಹಿಂದೆ ನಾಟಕಗಳು ನಮ್ಮ ಮನರಂಜನೆಯ ಕೇಂದ್ರಗಳಾಗಿದ್ದವು ಎಂದು ಸತ್ತಿಗೇರಿ ಹಿರೇಮಠದ ಚಂದ್ರಶೇಖರ ಸ್ವಾಮೀಜಿ ತಿಳಿಸಿದರು.ಪಟ್ಟಣದ ಮರಡಿ ಬಸವೇಶ್ವರ ಜಾತ್ರೆಯ ಅಂಗವಾಗಿ ಮರಡಿ ಬಸವೇಶ್ವರ ಜಾತ್ರಾ ಕಮಿಟಿ ಹಾಗೂ ಬಸವ ಅಸೋಸಿಯೇಷನ್ ಇವರ ಆಶ್ರಯದಲ್ಲಿ ಹಮ್ಮಿಕೊಂಡ ನಾಟಕ ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿದರು.
ಇಂದಿನ ದಿನಗಳಲ್ಲಿ ನಾಟಕದ ಕಲೆಗಳು ಮತ್ತು ಕಲಾವಿದರು ಕಡಿಮೆಯಾಗುತ್ತಿದ್ದಾರೆ. ಆದ್ದರಿಂದ ಕಲಾವಿದರನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಸೂಕ್ತ ಪ್ರೋತ್ಸಾಹ ಅಗತ್ಯವಿದೆ. ಗ್ರಾಮೀಣ ಪ್ರದೇಶಗಳು ನಮ್ಮ ಸಂಸ್ಕೃತಿ, ಕಲೆಗಳ ತವರೂರಾಗಿವೆ. ಇವುಗಳನ್ನು ಮುಂದುವರೆಸಿಕೊಂಡು ಹೋಗುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಚಂದ್ರಶೇಖರ ಸ್ವಾಮಿಜಿ ತಿಳಿಸಿದರು.
ಬಿಜೆಪಿ ಮಂಡಳ ಅಧ್ಯಕ್ಷ ವಿರೂಪಾಕ್ಷ ಮಾಮನಿ ಮಾತನಾಡಿ, ಇಂದಿಗೂ ಕೆಲವು ಸ್ಥಳಗಳಲ್ಲಿ ಜಾತ್ರೆಗಳ ಸಂದರ್ಭದಲ್ಲಿ ನಾಟಕಗಳ ಜಾತ್ರೆ ನಡೆಯುತ್ತಿದೆ. ಕಲೆಗಳು ನಮ್ಮ ಜೀವಂತಿಕೆಯ ಸಂಕೇತವಾಗಿವೆ. ಅವುಗಳನ್ನು ಉಳಿಸಿಕೊಂಡು ಹೋಗವು ನಿಟ್ಟಿನಲ್ಲಿ ನಾವೆಲ್ಲರೂ ಗಮನ ನೀಡಬೇಕಾಗಿದೆ ಎಂದರು.ಮಾಜಿ ಜಿ. ಪಂ. ಸದಸ್ಯ ಅಜೀತಕುಮಾರ ದೇಸಾಯಿ, ಡೆವಲಪರ್ ಆರ್. ಡಿ. ಕಿತ್ತೂರ, ಮಹಾಂತೇಶ ಜಕಾತಿ, ರಾಜು ಬಿರ್ಜಿ, ಮೋಹನ ಹಾದಿಮನಿ, ವೆಂಕಟೇಶ ದೇವರಡ್ಡಿ, ಕುಮಾರ ಹಿರೇಮಠ ಹಾಸ್ಯ ಕಲಾವಿದ ದಾವಲ ತಾಳಿಕೋಟಿ ಮತ್ತು ಬಸವ ಅಸೋಸಿಯೇಷನ್ ಅಧ್ಯಕ್ಷ ಚೇತನ ಜಕಾತಿ, ಉಪಾಧ್ಯಕ್ಷ ರಮೇಶ ಮುರಗೋಡ, ಕಾರ್ಯದರ್ಶಿ ಈರಣ್ಣಾ ಹುಲ್ಲೂರ, ಖಜಾಂಚಿ ಈರಣ್ಣಾ ಪೂಜೇರ, ಸದಸ್ಯರಾದ ಬಾಲಕೃಷ್ಣ ಹಡಪದ, ಗೋರೆಸಾಬ ಕರ್ನಾಚಿ, ಶ್ರೀಕಾಂತ ಉಜ್ಜನಕೊಪ್ಪ, ಸದಾನಂದ ಹಣಬರ, ಮಹಾಂತೇಶ ವಾಲಿ, ಪ್ರೀತಮ ಪಟ್ಟಣಶೆಟ್ಟಿ, ಕೃಷ್ಣಮೂರ್ತಿ ತೊರಗಲ್, ವಿಠ್ಠಲ ವಜ್ರಮಟ್ಟಿ ಸೇರಿದಂತೆ ಅನೇಕರು ಇದ್ದರು.