‘ಅಕ್ಕಮಹಾದೇವಿಯ ಆದರ್ಶಗಳು ನಮ್ಮೆಲ್ಲರಿಗೆ ಮಾದರಿ’

‘Akka Mahadevi’s ideals are an example for all of us’

ದೇವರಹಿಪ್ಪರಗಿ 13: ಆಸ್ತಿ ಹಾಗೂ ಸಂಪತ್ತಿನ ವ್ಯಾಮೋಹಕ್ಕೆ ಒಳಗಾಗದೇ, ರಾಜಪ್ರಭುತ್ವವನ್ನು ತಿರಸ್ಕರಿಸಿ ಲೋಕೋದ್ದಾರಕ್ಕಾಗಿ ಶ್ರಮಿಸಿದ ಕನ್ನಡದ ಮೊದಲ ಕವಯಿತ್ರಿ ಅಕ್ಕಮಹಾದೇವಿಯವರ ಆದರ್ಶಗಳು ನಮ್ಮೆಲ್ಲರಿಗೂ ಸದಾಕಾಲವೂ ಮಾದರಿಯಾಗಿವೆ ಎಂದು ಚಿಣಮಗೇರಾದ ಶಿವಶರಣಯ್ಯ ಶಾಸ್ತ್ರೀಗಳು ಹೇಳಿದರು. 

ತಾಲೂಕಿನ ಮುಳಸಾವಳಗಿ ಗ್ರಾಮದ ಮಲ್ಲಯ್ಯನ ದೇವಸ್ಥಾನದಲ್ಲಿ ಐದೇಶಿ ಜಾತ್ರಾ ಮಹೋತ್ಸವದ ಅಂಗವಾಗಿ ಹಮ್ಮಿಕೊಂಡಿರುವ ಪ್ರವಚನ ಕಾರ್ಯಕ್ರಮದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಮಹಾಶಿವಶರಣೆ ಅಕ್ಕಮಹಾದೇವಿಯವರ ಜಯಂತಿಯಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು. ಗ್ರಾಮದ ಮಹಿಳೆಯರೆಲ್ಲರೂ ಸೇರಿಕೊಂಡು ಅಕ್ಕಮಹಾದೇವಿಯವರ ಜನ್ಮದಿನದಂದು ಅಕ್ಕಮಹಾದೇವಿಯವರ ತೊಟ್ಟಿಲು ಕಾರ್ಯಕ್ರಮವನ್ನು ಹಮ್ಮಿಕೊಂಡು, ಅಕ್ಕನ ವಚನಗಳನ್ನು ಹಾಗೂ ತೊಟ್ಟಿಲು ಗೀತೆಗಳನ್ನು ಹಾಡುವ ಮೂಲಕ ಅತ್ಯಂತ ಅರ್ಥಪೂರ್ಣವಾಗಿ ಹಾಗೂ ವೈಶಿಷ್ಟ್ಯಪೂರ್ಣ ರೀತಿಯಲ್ಲಿ ಅಕ್ಕಮಹಾದೇವಿಯವರ ಜಯಂತಿಯನ್ನು ಆಚರಿಸಿದರು.ಇದೇ ಸಂದರ್ಭದಲ್ಲಿ ಕಸ್ತೂರಿ ರೋಡಗಿ,ಶರಣಮ್ಮ ಬಿರಾದಾರ, ದಾನಮ್ಮ ನಾಗರಳ್ಳಿ, ಮಲ್ಲಮ್ಮ ಸರಬಡಗಿ, ಭಾರತಿ ಗಬ್ಬೂರ, ಸಿದ್ದಮ್ಮ ಹಿರೂರ, ಭಾಗೀರಥಿ ಇಂಗಳೇಶ್ವರ, ದುಂಡಮ್ಮ ಬಸರಕೋಡ, ಶಾಂತಾಬಾಯಿ ಗಬ್ಬೂರ, ಸಿದ್ದು ಕುಳೇಕುಮಟಗಿ, ರೇವಣಸಿದ್ದ ಶಿವಣಗಿ, ಶಂಕರಗೌಡ ಬಿರಾದಾರ, ಭೀಮರಾಯ ಪೊಲೇಶಿ, ಜಿ ಪಿ ಬಿರಾದಾರ, ಹಣಮಂತ ಹಿರೂರ ಅನೇಕರು ಉಪಸ್ಥಿತರಿದ್ದರು.