ಪೌಷ್ಠಿಕಾಂಶ ಆಹಾರ ಸೇವನೆಯಿಂದ ದೇಹ ಸದೃಢಗೊಳಿಸಿ: ಒತಗೇರಿ

ಬಸವನಬಾಗೇವಾಡಿ09: ಯಾವುದೇ ಆಹಾರ ಸೇವನೆಯಿಂದ ದೇಹದಲ್ಲಿ ಅಡ್ಡ ಪರಿಣಾಮಗಳುಂಟಾಗುವುದಿಲ್ಲ, ಆದ್ದರಿಂದ ಪೌಷ್ಠಿಕಾಂಶ ಆಹಾರ ಸೇವನೆಯಿಂದ ದೇಹ ಮತ್ತು ಮನಸ್ಸನ್ನು ಸದೃಢಗೊಳಿಸಿಕೊಳ್ಳಬೇಕು ಎಂದು  ಬಸವನಬಾಗೇವಾಡಿ ತಾಲೂಕು ವೈದ್ಯಾಧಿಕಾರಿ ಡಾ ಎಸ್ ಶಶಿಧರ ಒತಗೇರಿ ತಿಳಿಸಿದರು.

ಕೇಂದ್ರ ಸರಕಾರದ ಕ್ಷೇತ್ರ ಜನಸಂಪರ್ಕ ಕಾರ್ಯಾಲಯ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ನೆಹರು ಯುವ ಕೇಂದ್ರ, ಆರೋಗ್ಯ ಇಲಾಖೆ, ವಿಜಯಪುರ,  ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಾರ್ಯಾಲಯ, ಬಸವನಬಾಗೇವಾಡಿ ಮತ್ತು ಗ್ರಾಮ ಪಂಚಾಯತ ಹುವಿನಹಿಪ್ಪರಗಿ ಇವರುಗಳ ಸಂಯುಕ್ತ ಆಶ್ರಯದಲ್ಲಿ ಹುವಿನಹಿಪ್ಪರಗಿ ಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿದ್ದ ರಾಷ್ಟ್ರೀಯ ಪೌಷ್ಠಿಕ ಆಹಾರ ಸಪ್ತಾಹ ಮತ್ತು ಪೋಷಣ ಮಾಸಾಚರಣೆ ಕುರಿತ ಜನ ಜಾಗೃತಿ ಕಾರ‍್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಪಪ್ಪಾಯ ಸೇವನೆಯಿಂದ ಗರ್ಭಪಾತ, ಹಾಲು, ತುಪ್ಪ, ಬಾಳೆಹಣ್ಣು ಸೇವನೆಯಿಂದ  ಕಫ ಕಟ್ಟುತ್ತದೆ ಎಂದು ಸಾಕಷ್ಟು ಮಂದಿಯಲ್ಲಿ ತಪ್ಪು ಕಲ್ಪನೆ ಮೂಡಿದೆ.  ಇದಕ್ಕೆ ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ, ಜನರು ವಾಸ್ತವ ಸತ್ಯವನ್ನು ಅರಿತು ಎಲ್ಲ ಬಗೆಯ ಹಣ್ಣು, ತರಕಾರಿ ಮತ್ತು ಧಾನ್ಯಗಳÀನ್ನು ಹೆಚ್ಚಾಗಿ ಬಳಸಬೇಕು ಎಂದು ತಿಳಿಸಿದರು. ತೀವ್ರತರವಾದ ಆಪೌಷ್ಠಿಕಯಿಂದ ಬಳಲುತ್ತಿರುವ ಮಕ್ಕಳನ್ನು ಪೌಷ್ಠಿಕ ಪುನಶ್ಚೇತನ ಕೇಂದ್ರಗಳಲ್ಲಿ ದಾಖಲು ಮಾಡಿಕೊಂಡು ಅವರ ಮೇಲೆ ನಿಗಾ ಇಡಲಾಗುತ್ತಿದೆ ಎಂದರು.

ಹಳ್ಳಿಗಾಡಿನಲ್ಲಿ ಇನ್ನೂ ಶೇಕಡ 70 ರಷ್ಟು ಗರ್ಭೀಣೆಯರು ಕೋವಿಡ್ ಲಸಿಕೆ ಪಡೆದಿಲ್ಲ.  ಗರ್ಭೀಣೆಯರು ಕೋವಿಡ್ ಲಸಿಕೆ ಪಡೆಯಲು ಯಾವುದೇ ಅಡ್ಡಿಯಿಲ್ಲ ಹಾಗಾಗಿ ತ್ವರಿತವಾಗಿ ಲಸಿಕೆ ಪಡೆದು ಕೋವಿಡ್ ರೋಗದಿಂದ ಪಾರಾಗಬೇಕು ಎಂದರು.

ಇದೇ ಸಂದರ್ಭದಲ್ಲಿ ಮಾತಾನಾಡಿದ ಹುವಿನ ಹಿಪ್ಪರಗಿ, ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳಾದ ಡಾ  ಬಿ ಎಸ್ ಸಂಧಿಮನಿ, ಬಿಸಿ ಮತ್ತು ತಾಜಾ ಆಹಾರಗಳನ್ನೇ ಸೇವಿಸಬೇಕು, ಹೆಚ್ಚಾಗಿ ತರಕಾರಿಗಳನ್ನು ದೈನಂದಿನ ಆಡುಗೆಯಲ್ಲಿ ಬಳಸಬೇಕು ಎಂದು ತಿಳಿಸಿದರು. ಮನು ಕುಲದ ಏಳಿಗೆಗಾಗಿ ಪೋಷಕರು, ಶಿಶುವಿನ ಪಾಲನೆಗಾಗಿ ಸಮತೋಲಿತ ಪೌಷ್ಠಿಕ ಆಹಾರವನ್ನು ನೀಡಿ ಮುಂದಿನ ಆರೋಗ್ಯವಂತ ಪ್ರಜೆಗಳ್ಳನ್ನಾಗಿ ಮಾಡಬೇಕು ಎಂದು ಮನವಿ ಮಾಡಿದರು.

ಬಸವನಬಾಗೇವಾಡಿ, ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಾದ ಎಸ್ ಸಿ ಮ್ಯಾಗೇರಿ, ಎಲ್ಲರನ್ನು ಸ್ವಾಗತಿಸುತ್ತಾ  ಮಾತನಾಡಿ ತಾಯಿ ಮತ್ತು ಮಗುವಿನ ಬೆಳವಣೆಗೆಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆವತಿಯಿಂದ ಆನುಷ್ಟಾನ ಮಾಡಲಾಗಿರುವ ಕಾರ್ಯಕ್ರಮಗಳ ಕುರಿತು ಸವಿವರವಾಗಿ ತಿಳಿಸಿದರು. ಹುವಿನಹಿಪ್ಪರಗಿ ವೈದ್ಯಾಧಿಕಾರಿಗಳಾದ ಡಾ. ಕಲ್ಪನ ಅವರು ಸಭಿಕರ, ಪೌಷ್ಠಿಕ ಅಹಾರ ಮತ್ತು ಕೋವಿಡ್ ಲಸಿಕೆ ಕುರಿತ ಗೊಂದಲಗಳಿಗೆ ಸಮರ್ಪಕವಾಗಿ ಉತ್ತರಿಸಿದರು.

ಸಾಂಕೇತಿಕವಾಗಿ  ಪೋಷಣಾ ಆಭಿಯಾನದ  ಚಟುವಟಿಕೆಯ ಸೀಮಂತ  ಮತ್ತು  ಅನ್ನಪ್ರಶನ ಕಾರ್ಯ ನಡೆಸಲಾಯಿತು. ಪೌಷ್ಠಿಕ ಆಹಾರ ಪದಾರ್ಥಗಳ ಪ್ರದರ್ಶನ ಏರ್ಪಡಿಸಲಾಗಿತ್ತು.  ಲಸಿಕೆ ನೀಡಿಕೆ ಕಾರ‍್ಯಕ್ರಮವನ್ನು ಆಯೋಜಿಸಲಾಗಿತ್ತು.

ನೆಹರು ಯುವ ಕೇಂದ್ರದ ಜಿಲ್ಲಾ ಯುವ ಅಧಿಕಾರಿಗಳಾದ ರಾಹುಲ್ ಡೋಂಗ್ರೆ, ಅಂಗನವಾಡಿ ಮೇಲ್ವಿಚಾರಕಿಯರಾದ ಬೋರಮ್ಮ ಬಿರಾದಾರ, ಮತ್ತು  ಆರ್ ಹೆÀಚ್ ವಾಸನದಿ  ಮಾತನಾಡಿದರು. ಕ್ಷೇತ್ರ ಜನಸಂಪರ್ಕ ಕಾರ್ಯಾಲಯದ ಸಿ ಕೆ ಸುರೇಶ್ ಪ್ರಾಸ್ತ್ತಾವಿಕವಾಗಿ ಮಾತನಾಡಿದರು. ಕಲಾ ತಂಡದಿಂದ ಸರಕಾರದ ಯೋಜನೆÀಗಳ ಕುರಿತಂತೆ ಜಾನಪದ ಶೈಲಿಯಲ್ಲಿ ಜಾಗೃತಿ ಮೂಡಿಸಲಾಯಿತು. ವೇದಿಕೆ ಕಾರ‍್ಯಕ್ರಮಕ್ಕೂ ಮುನ್ನ ಗ್ರಾಮದಲ್ಲಿ ಜಾಗೃತಿ ರ‍್ಯಾಲಿಗೆ ಹುವಿನ ಹಿಪ್ಪರಗಿ ಗ್ರಾಮದ ಉಪಾಧ್ಯಕ್ಷರಾದ ಶಿವಬಾಯಿ ಬಿ ಮಾದಾರ ಚಾಲನೆ ನೀಡಿದರು.

ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು ಮತ್ತು ಆರೋಗ್ಯ ಸಿಬ್ಬಂದಿ ಭಾಗವಹಿಸಿದ್ದರು.

ಹೆಚ್ ಬಿ ವಡ್ಡರ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.