ಸರಕಾರಿ ಶಾಲೆಗಳ ಸಬಲೀಕರಣಕ್ಕೆ ಯುವಕರು ಮುಂದಾಗಬೇಕು: ದಳವಾಯಿ

ಮುಧೋಳ 30: ತಾಲೂಕಿನ  ಮೆಟಗುಡ್ಡ ಗ್ರಾಮದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲಿ 75 ನೇ ಗಣರಾಜ್ಯೋತ್ಸವ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.  

ಶಾಲಾ ಮೇಲುಸ್ತುವಾರಿ ಸಮೀತಿಯ ಅಧ್ಯಕ್ಷರಮೇಶ ಡೋಣಿ ಮತ್ತು ಶಾಲೆಯ ಮುಖ್ಯಗುರುಗಳಾದ ಸುರೇಶ ಎಲ್‌.ರಾಜಮಾನೆ ಧ್ವಜಾರೋಹಣವನ್ನು ನೆರವೇರಿಸಿದರು. ಮೂರನೇ ತರಗತಿಯ ವಿದ್ಯಾರ್ಥಿನಿ ಚೇತನಾ ಮೇತ್ರಿ ಸಾಮೂಹಿಕವಾಗಿ ಸಂವಿಧಾನ ಪೀಠಿಕೆಯನ್ನು ಬೋಧಿಸಿದಳು. ಶಾಲೆಯ ಎಲ್ಲ ವಿದ್ಯಾರ್ಥಿಗಳು ಭಾರತ ಸ್ವಾತಂತ್ರ್ಯ ಹೋರಾಟಗಾರರು, ನಾಡಿನ ಹೆಸರಾಂತ ಸಾಹಿತಿಗಳು, ವಚನಕಾರರು, ಸಾಮಾಜಿಕ ಹೋರಾಟಗಾರರ ಸಂಕ್ಷಿಪ್ತ ಪರಿಚಯಗಳನ್ನು ಹೇಳಿದರು. ದೇಶಭಕ್ತಿಗೀತೆ, ಏಕಪಾತ್ರಾಭಿನಯ, ಗಣರಾಜ್ಯೋತ್ಸವದ ಕುರಿತು ಅನಿಸಿಕೆಗಳನ್ನು ಹಾಗೂ ಸಾಮೂಹಿಕ ನೃತ್ಯಗಳನ್ನು ಅತ್ಯಂತ ಆಕರ್ಷಕ ರೀತಿಯಲ್ಲಿ ಮಾಡಿ ಎಲ್ಲರ ಮನಸೊರೆಗೊಂಡರು. ಎಲ್ಲ ಮಕ್ಕಳಿಗೂ ಗಣರಾಜ್ಯೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಬಾಗವಹಿಸಿದ್ದಕ್ಕಾಗಿ ಪ್ರಮಾಣಪತ್ರಗಳನ್ನು ವಿತರಿಸಲಾಯಿತು.  

ಶಾಲೆಯ ಮೇಲುಸ್ತುವಾರಿ ಸಮೀತಿಯವರು ಇದೆ ಸಂದರ್ಭದಲ್ಲಿ ಶಾಲೆಗೆ ಮಕ್ಕಳಿಗೆ ಹಾಲು ಕುಡಿಯಲು ಗ್ಲಾಸ್, ಒಂದು ಬ್ಲೂಟೂತ್ ಸ್ಪೀಕರ್, ಕುರ್ಚಿ, ಹಾಗೂ ಕುಕ್ಕರ್ ನ್ನು ಶಾಲೆಗಾಗಿ ನೀಡಿದರು.  

ಮೆಟಗುಡ್ಡ ಗ್ರಾಮದ ಯುವಕ ಶಿಕ್ಷಣಪ್ರೇಮಿ ಸಧ್ಯ ಹುಬ್ಬಳ್ಳಿಯಲ್ಲಿ ರೈಲ್ವೆ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ  ಮಂಜುನಾಥ ದಳವಾಯಿ ಇವರು ಶಾಲೆಗೆ ಬೇಕಾದ 20 ಜನ ರಾಷ್ಟ್ರನಾಯಕರ ಭಾವಚಿತ್ರಗಳನ್ನು ದೇಣಿಗೆಯ ರೂಪದಲ್ಲಿ ನೀಡಿದರು. ಕಾರ್ಯಕ್ರದ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಮಂಜುನಾಥ ದಳವಾಯಿ ಇವರು ಮಾತನಾಡಿ ಶಾಲೆಯ ಅಭಿವೃದ್ಧಿಗಾಗಿ ಸದಾಕಾಲ ನಾವು ಸಿದ್ಧರಿದ್ದೇವೆ ಸರಕಾರಿ ಶಾಲೆಗಳು ಬೆಳೆಯಬೇಕು ಮತ್ತು ಮೆಟಗುಡ್ಡ ಗ್ರಾಮ ಮುಧೋಳ ತಾಲೂಕಿಗೂ ಮತ್ತು ಬಾಗಲಕೋಟೆ ಜಿಲ್ಲೆಗೂ ಗಡಿಭಾಗವಾಗಿರುವದರಿಂದ ಮೂಲಭೂತ ಸೌಲಭ್ಯಗಳಿಂದ ವಂಚಿತವಾಗುತ್ತಿದೆ. ನಮಗೆ ಬೇಕಾಗಿರುವ ಸವಲತ್ತುಗಳಿಗಾಗಿ ನಾವು ಒಗ್ಗಟ್ಟಾಗಬೇಕು ಮತ್ತು ನಮ್ಮಿಂದ ಸಾಧ್ಯವಾದಷ್ಟು ನಮ್ಮೂರಿನ ಶಾಲೆಗಾಗಿ ನಾವೂ ಕೈಜೋಡಿಸಬೇಕು ಎಂದರು. ಶಾಲೆಯ ಪರವಾಗಿ ಮುಖ್ಯಗುರುಗಳು ಎಲ್ಲರನ್ನು ಗೌರವದಿಂದ ಸನ್ಮಾನಿಸಿದರು. ಮುಖ್ಯಗುರುಗಳು ಅಧ್ಯಕ್ಷೀಯಪರ ನುಡಿಗಳಲ್ಲಿ ಮಕ್ಕಳ ಶ್ರೇಯೋಭಿವೃದ್ಧಿಯೇ ನಮ್ಮ ಗುರಿ ಸರಕಾರದ ಎಲ್ಲ ಕಾರ್ಯಕ್ರಮಗಳ ಅನುಷ್ಠಾನ ಗೊಳಿಸುವದರ ಜೊತೆಗೆ ಮಕ್ಕಳಿಗೆ ಗುಣಾತ್ಮಕ ಶಿಕ್ಷಣವನ್ನು ಸೃಜನಾತ್ಮಕವಾಗಿ ನೀಡಲು ನಾವು ಸಿದ್ಧರಿದ್ದೇವೆ. ಈಗಿನ ಕಾಲಘಟ್ಟದಲ್ಲಿ ಶಿಕ್ಷಣವಂತರಾದ ಯುವಕರು ದಾರಿ ತಪ್ಪುತ್ತಿದ್ದಾರೆ ಆಧುನಿಕ ಯುಗ ಅವರನ್ನು ತುಂಬಾ ಆಕರ್ಷಿಸುತ್ತಿದೆ ಅದನ್ನೆಲ್ಲ ಬದಿಗಿರಿಸಿ ಸರಕಾರಿ ಶಾಲೆಗಳ ಅಭಿವೃದ್ಧಿಗೆ ಯುವಕರು ಮುಂದಾಗಬೇಕು ’ನಮ್ಮ ದೇಶದ ಯುವಶಕ್ತಿ ನಮ್ಮ ದೇಶದ ಆಸ್ತಿ’ ಎಂದು ಹೇಳಿದರು.   

ರಾಜೇಂದ್ರ ಮ.ಸುತಾರ್ ಸಹಶಿಕ್ಷಕರು ಕಾರ್ಯಕ್ರವನ್ನು ಅಚ್ಚುಕಟ್ಟಾಗಿ ನೀರೂಪಿಸುವದರೊಂದಿಗೆ ಸ್ವಾಗತ ಮತ್ತು ವಂದನಾರೆ​‍್ಣಯನ್ನು ನೆರವೇರಿಸಿದರು. ಕಾರ್ಯಕ್ರಮದಲ್ಲಿ ಊರಿನ ಎಲ್ಲ ನಾಗರಿಕರು, ಹೆಚ್ಚಿನ ಸಂಖ್ಯೆಯಲಿ ಮಕ್ಕಳ ಪಾಲಕರು ಮಹಿಳೆಯರೂ ಭಾಗವಹಿಸಿದ್ದು ವಿಶೇಷವಾಗಿತ್ತು. ಡೋಣಿ, ಇಂಡಿಗನಾಳ, ತಹಶೀಲದಾರ, ಅಗೋಜಿ, ದಳವಾಯಿ, ಮೇತ್ರಿ ಮತ್ತೆಲ್ಲ ಊರಿನ ಬಂಧುಮಿತ್ರರು ಬಾಗವಹಿಸಿ ಕಾರ್ಯಕ್ರಮಕ್ಕೆ ಮೆರಗನ್ನು ತಂದುಕೊಟ್ಟರು.