ಯುವಕರು ಚಟಗಳಿಗೆ ದಾಸರಾಗದೇ ಕ್ರೀಡೆಗೆ ದಾಸರಾಗಿ : ಶ್ರೀಕಾಂತ ದುಂಡಿಗೌಡ್ರ

Youth should not become slaves to addictions but slaves to sports: Srikanth Dundigowdra

ಶಿಗ್ಗಾವಿ 10  : ಯುವಕರು ಕೆಟ್ಟ ಹವ್ಯಾಸಗಳಿಗೆ ದಾಸರಾಗುವ ಬದಲು ತಮ್ಮ ಪ್ರತಿ ದಿನದ ಸಮಯದಲ್ಲಿ ಕ್ರೀಡೆಗಳಿಗೆ ಅಲ್ಪ ಸಮಯವನ್ನು ವ್ಯಯ ಮಾಡುವುದರಿಂದ ದೈಹಿಕವಾಗಿ ಸದೃಡರಾಗಬಹುದು ಎಂದು ಭಾರತ ಸೇವಾ ಸಂಸ್ಥೆ ಅಧ್ಯಕ್ಷ ಶ್ರೀಕಾಂತ ದುಂಡಿಗೌಡ್ರ ಹೇಳಿದರು.     

ಪಟ್ಟಣದ ತಾಲೂಕ ಕ್ರೀಡಾಂಗಣದಲ್ಲಿ ಸ್ವಸ್ತಿಕ ಸ್ಪೋರ್ಟ್ಸ್‌ ಕ್ಲಬ್ ಶಿಗ್ಗಾವಿ ಆಯೋಜಿಸಿದ್ದ ಶಿಗ್ಗಾಂವ-ಸವಣೂರ ಚಾಂಪಿಯನ್ ಲೀಗ್ ಹಾರ್ಡ ಟೆನ್ನಿಸ್ ಬಾಲ್ ಕ್ರಿಕೆಟ್ ಟೂರ್ನಮೆಂಟೀನ ವಿಜೇತ ತಂಡಗಳಿಗೆ ಬಹುಮಾನ ವಿತರಿಸಿ ಮಾತನಾಡಿದ ಅವರು ಕ್ರೀಡೆಗಳು ನಮಗೆ ಶಿಸ್ತು, ಸಮಯಪಾಲನೆ ಕಠಿಣ ಪರಿಶ್ರಮವನ್ನು ರೂಪಿಸುತ್ತವೆ.ಗುಂಪಿನ ಆಟಗಳು ನಾಯಕತ್ವ ಕೌಶಲ್ಯಗಳನ್ನು ಬೆಳೆಸುತ್ತದೆ ಅಲ್ಲದೇ ದೈಹಿಕವಾಗಿ ಮತ್ತು ಮಾನಸಿಕವಾಗಿ ಸದೃಢರಾಗಿ ಆರೋಗ್ಯಕರ ಜೀವನಶೈಲಿ ಹೊಂದಬಹುದು ಎಂದರು.   

ಈ ಸಂದರ್ಭದಲ್ಲಿ ಗದಿಗಯ್ಯ ಸದಾಶಿವಪೇಟೆ, ನಜೀರ ಶೇತಸನದಿ, ಮುಕ್ತಾರ ತಿಮ್ಮಾಪೂರ, ಆನಂದ ಸುಭೇದಾರ, ರಮೇಶ ಸಾತಣ್ಣವರ, ಬಸವರಾಜ ಮಾಯಣ್ಣವರ, ಶಂಕರ ಧಾರವಾಡ, ಸಾಧಿಕ ಸವಣೂರ, ಸಂತೋಷ ಧಾರವಾಡಹಾಗೂ ಕ್ರಿಕೆಟ್ ಆಟಗಾರರು ಯುವಕರು ಭಾಗವಹಿಸಿದ್ದರು.