ನಶಾಮುಕ್ತ ಸಮಾಜಕ್ಕೆ ಯುವಜನತೆ ಸಂಕಲ್ಪ ಅಗತ್ಯ: ನಾಗರತ್ನಾ
Youth need to pledge for a drug-free society: Nagarathna
ಲೋಕದರ್ಶನ ವರದಿ
ಬಾಗಲಕೋಟೆ 11 : ಮಾದಕ ವಸ್ತುಗಳ ಸೇವನೆಯಿಂದ ದೈಹಿಕ ಹಾಗೂ ಮಾನಸಿಕ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಉಂಟಾಗುತ್ತಿದ್ದು ನಶೆಯ ಚಟದಿಂದ ವ್ಯಕ್ತಿತ್ವವನ್ನು ಮಾತ್ರವಲ್ಲದೆ ಕುಟುಂಬದ ಭವಿಷ್ಯವನ್ನೂ ಸಂಕಷ್ಟಕ್ಕೆ ದೂಡುತ್ತಾರೆ ಎಂದು ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿಯ ವಿವಿಯ ಸಂಚಾಲಕರಾದ ನಾಗರತ್ನಾ ಬಿ.ಕೆ ಹೇಳಿದರು. ನಗರದ ಬಿವಿವಿ ಸಂಘದ ಬಸವೇಶ್ವರ ಕಲಾ ಮಹಾವಿದ್ಯಾಲಯದಲ್ಲಿ ಎನ್‌ಎಸ್‌ಎಸ್ ಘಟಕ, ಎನ್‌ಸಿಸಿ ಘಟಕ ಹಾಗೂ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿಯ ವಿಶ್ವವಿದ್ಯಾಲಯದ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ‘ನಶಾಮುಕ್ತ ಪ್ರತಿಜ್ಞಾ ಮಹಾ ಅಭಿಯಾನ’ ಜಾಗೃತಿ ಕಾರ್ಯಕ್ರಮವನ್ನು ಇಳಕಲ್ ಮಹಾಂತ್ ಸ್ವಾಮಿಗಳ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ಸಮಾಜದಲ್ಲಿ ಹಿಂಸಾಚಾರ, ಅನಾಚಾರ, ಅನ್ಯಾಯ ಸೇರಿದಂತೆ ಹಲವಾರು ಅಪರಾಧಗಳು ಮತ್ತು ದುಷ್ಚಟಗಳು ತಲೆದೂರಿದ್ದು ಇಂತಹ ಸಮಸ್ಯೆಗಳಿಂದ ಮುಕ್ತವಾದ ಶಾಂತಿಯುತ ಹಾಗೂ ನಶಾಮುಕ್ತ ಸಮಾಜವನ್ನು ನಿರ್ಮಿಸುವ ಅಗತ್ಯವಿದೆ ಎಂದರು. ಸಕಾರಾತ್ಮಕವಾಗಿ ಯೋಚಿಸುವ ವಿಧಾನವನ್ನು ರಾಜಯೋಗ ಎಂದು ಕರೆಯಲಾಗುತ್ತದೆ. ನಶಾಮುಕ್ತರಾಗದಿದ್ದರೆ ಸಮಾಜದಲ್ಲಿ ಹಲವಾರು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಎಲ್ಲಿ ದೃಢಸಂಕಲ್ಪ ಇರುತ್ತದೆಯೋ ಅಲ್ಲಿ ಯಶಸ್ಸು ಖಚಿತ. ಆದ್ದರಿಂದ ಜೀವನದಲ್ಲಿ ಯಾವುದು ಸರಿ, ಯಾವುದು ತಪ್ಪು ಎಂಬುದನ್ನು ಅರಿತುಕೊಂಡು ಸರಿಯಾದ ಮಾರ್ಗದಲ್ಲಿ ಸಾಗಬೇಕು. ಯುವಕರು ಸಕರಾತ್ಮಕ ಯೋಚನೆಗಳಲ್ಲಿ ತೊಡಗಿಕೊಳ್ಳಬೇಕು.
ದಿನನಿತ್ಯ ಧ್ಯಾನವನ್ನು ಮಾಡುತಿದ್ದರೆ ದೈಹಿಕವಾಗಿ, ಮಾನಸಿಕವಾಗಿ, ಆರೋಗ್ಯವಾಗಿ ಜೀವನವನ್ನು ನಡೆಸಲು ಸಾಧ್ಯ. ಯುವಶಕ್ತಿಯು ದುಶ್ಚಟಗಳಿಗೆ ಬಲಿಯಾಗದಂತೆ ನಶಾ ಮುಕ್ತರನ್ನಾಗಿ ಮಾಡುವುದು ಶಿಕ್ಷಕರ, ಪೋಷಕರ ಕರ್ತವ್ಯವಾಗಿದೆ. ಎಂದರು. ಇದೇ ವೇಳೆ ವಿದ್ಯಾರ್ಥಿಗಳಿಗೆ ನಶೆಯ ವ್ಯಸನಕ್ಕೆ ಒಳಗಾಗದೇ ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳುವಂತೆ ಪ್ರತಿಜ್ಞಾ ಬೋಧನೆ ಮಾಡಿದರು. ಪ್ರಾಚಾರ್ಯರಾದ ಎಸ್. ಆರ್. ಮುಗನೂರಮಠ ಮಾತನಾಡಿ ಎಲ್ಲ ಜೀವಿಗಳಲ್ಲಿಯೂ ದೇವರ ಬಿಂಬವಿದೆ ಅದು ಕಾಣಿಸಲು ದೇಹವನ್ನು ವ್ಯಸನಗಳಿಂದ ಅಶುದ್ಧ ಮಾಡದೇ ಶುದ್ಧವಾಗಿ ಇಟ್ಟುಕೊಳ್ಳಬೇಕು. ಅಂತರಂಗದ ಅರಿವಿಲ್ಲದಿದ್ದರೆ ದೇಹದ ಅಸ್ತಿತ್ವಕ್ಕೂ ಅರ್ಥವಿಲ್ಲ. ಎಲ್ಲ ಜೀವಿಗಳಲ್ಲೂ ದೇವರ ಬಿಂಬವಿದೆ.
ಆದ್ದರಿಂದ ಮಾದಕ ದ್ರವ್ಯಗಳ ವ್ಯಸನಕ್ಕೆ ಒಳಗಾಗಿ ನಮ್ಮ ದೇಹ ಹಾಗೂ ಮನಸ್ಸುಗಳನ್ನು ಮಲೀನಗೊಳಿಸಬಾರದು. ಋಣಾತ್ಮಕ ಹಾಗೂ ವ್ಯರ್ಥ ಚಿಂತನೆಗಳನ್ನು ತೊರೆದಾಗ ಮಾತ್ರ ಜೀವನದಲ್ಲಿ ಯಶಸ್ಸು ಸಾಧಿಸಲು ಸಾಧ್ಯ. ಯುವಕರಲ್ಲಿ ಕೆಟ್ಟ ಆಕರ್ಷಣೆಗಳಿಗೆ ಒಳಗಾಗಬಾರದು. ಇಂಟರ್‌ನೆಟ್ ಹಾಗೂ ಮೊಬೈಲ್‌ನ ಅತಿಯಾದ ಬಳಕೆಯ ಚಟ ಹೆಚ್ಚುತ್ತಿದೆ, ಇಂತಹ ಚಟಗಳಿಂದ ದೂರವಿದ್ದು, ಉತ್ತಮ ಚಿಂತನೆ ಹಾಗೂ ಸಕಾರಾತ್ಮಕ ಜೀವನಶೈಲಿಯನ್ನು ರೂಢಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ಕಾರ್ಯಕ್ರಮದಲ್ಲಿ ಎನ್‌ಎಸ್‌ಎಸ್ ಘಟಕ 1 ಮತ್ತು 2ರ ಕಾರ್ಯಕ್ರಮಾಧಿಕಾರಿಗಳಾದ ಡಾ. ಎಂ.ಎಚ್. ವಡ್ಡರ, ಡಾ. ವಿರೂಪಾಕ್ಷಿ ಎನ್.ಬಿ. ಲೆಫ್ಟಿನೆಂಟ್ ಎಂ.ಎಂ. ದೇವನಾಳ ಸೇರಿದಂತೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ನಾಗರಿಕರ ಬಹುಕೋಟಿ ಹಣ ವಂಚನೆ ಪ್ರಕರಣ: ಮತ್ತೋರ್ವ ಆರೋಪಿಯ ಬಂಧನ
ಇಂಗ್ಲೆಂಡ್ನ ಮಹರ್ಷಿ ಶ್ರೀ ವಾಲ್ಮೀಕಿ ಆಶ್ರಮಕ್ಕೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಮನೆ ಮನೆಗಳ ಮೇಲೆ ಕನ್ನಡ ಬಾವುಟ ಅಭಿಯಾನ–2026’: 5 ಸಾವಿರ ಕನ್ನಡ ಧ್ವಜಗಳ ಉಚಿತ ವಿತರಣೆ
ಉತ್ತರ ವಲಯ ಪೊಲೀಸರಿಂದ ರೌಡಿ ನಿಗ್ರಹಕ್ಕೆ ಕಠಿಣ ಕ್ರಮ : 23 ರೌಡಿಗಳ ಗಡಿಪಾರು
6.85 ಕೆ.ಜಿ. ಗಾಂಜಾ ಮಿಶ್ರಿತ ಚಾಕಲೇಟ್ ಪ್ಯಾಕೆಟ್ಗಳ ವಶ: ಓರ್ವ ಆರೋಪಿ ಬಂಧನ
ಕಳೆದುಹೋಗಿದ್ದ 57 ಮೊಬೈಲ್ ಸಿಇಐಆರ್ ಪೋರ್ಟಲ್ ಮೂಲಕ ಪತ್ತೆ: ವಾರಸುದಾರರಿಗೆ ವಾಪಸ್ 