ಯೋಗ ದೇಹ ಮತ್ತು ಮನಸ್ಸನ್ನು ಆತ್ಮದೊಂದಿಗೆ ಒಗ್ಗೂಡಿಸುವ ಶಕ್ತಿ: ಡಾ.ವಿಜಯ ಹಂಚಿನಾಳ

ಯೋಗ ದೇಹ ಮತ್ತು ಮನಸ್ಸನ್ನು ಆತ್ಮದೊಂದಿಗೆ ಒಗ್ಗೂಡಿಸುವ ಶಕ್ತಿ: ಡಾ.ವಿಜಯ ಹಂಚಿನಾಳ Yoga is the power to unite the body and mind with the soul: Dr. Vijaya Hanchinala

ಲೋಕದರ್ಶನ ವರದಿ 

ಮಹಾಲಿಂಗಪುರ 21 : ಯೋಗ ಆರೋಗ್ಯದ ಮಹದ್ವಾರ. ಯೋಗ ಬಲ್ಲವನಿಗೆ ರೋಗವಿಲ್ಲ, ಯೋಗ ಎಂದರೆ ಕೇವಲ ದೈಹಿಕ ಸದೃಢತೆಯಲ್ಲ, ಅದು ಮಾನಸಿಕ, ಶಾರೀರಿಕ,ಆಂತರಿಕ ಮತ್ತು ಆತ್ಮದ ಸದೃಢತೆ. ದೇಹ ಮತ್ತು ಮನಸ್ಸನ್ನು ಆತ್ಮದೊಂದಿಗೆ ಒಗ್ಗೂಡಿಸುವ ಶಕ್ತಿ. ಯೋಗ ಮಾಡುವುದರಿಂದ ದೇಹದಲ್ಲಿ ಎಂಡಾರ್ಫಿನ್ ಎಂಬ ರಾಸಾಯನಿಕ ಉತ್ಪತ್ತಿಯಾಗಿ ದೇಹದ ಅಸಮತೋಲತೆಯನ್ನು ನಿಯಂತ್ರಿಸುತ್ತದೆ ಹಾಗಾಗಿ ಯೋಗ ಜೀವನಶೈಲಿಯಾಗಬೇಕು ಎಂದು ವೈದ್ಯ ಡಾ. ವಿಜಯ ಹಂಚಿನಾಳ ಹೇಳಿದರು. 

ಸ್ಥಳೀಯ ಎಪಿಎಂಸಿಯಲ್ಲಿ ಎಪಿಎಂಸಿ ವಾಯು ವಿಹಾರ ಮಂಡಳಿ ವತಿಯಿಂದ ಜರುಗಿದ ಯೋಗ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ಯೋಗ ಕೇವಲ ಒಂದು ದಿನಕ್ಕೆ ಸೀಮಿತವಾಗದೆ ನಿತ್ಯವೂ ಜೀವನದಲ್ಲಿ ಕನಿಷ್ಠ ಒಂದು ಗಂಟೆ ಯೋಗ ಮಾಡಬೇಕು ಎಂದರು.  

ಪುರಸಭೆ ಮುಖ್ಯಾಧಿಕಾರಿ ನಾಮದೇವ ಲಮಾಣಿ ಮತ್ತು ಕಾನಿಪ ಅಧ್ಯಕ್ಷ ಮಹೇಶ ಮನ್ನಯ್ಯನವರಮಠ ಮಾತನಾಡಿ,ಆರೋಗ್ಯವೇ ಮಹಾ ಭಾಗ್ಯ. ಜೀವನದ ಸುಭದ್ರತೆಗೆ ಆರೋಗ್ಯ, ಉದ್ಯೋಗ, ಕುಟುಂಬ ಎಂಬ ಮೂರು ಸೂತ್ರಗಳು ಅತ್ಯಗತ್ಯ, ಇದಕ್ಕೆ ಯೋಗ ಪೂರಕ ಎಂದರು. ವೈದ್ಯ ಡಾ.ಶಂಕರ ಹುಕ್ಕೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಪಿಎಂಸಿ ವಾಯು ವಿಹಾರ ಮಿತ್ರ ಮಂಡಳಿಯ ಅಧ್ಯಕ್ಷ ಶಂಕರ ಕೋಳಿಗುಡ್ಡ ಅಧ್ಯಕ್ಷತೆ ವಹಿಸಿ ಮಾತನಾಡಿದರು. 

ಶೈಕ್ಷಣಿಕ ಪ್ರತಿಭೆ ಅನ್ವಿತಾ ಅಶೋಕ ಕಲ್ಯಾಣಿ ಹಾಗೂ ಯೋಗ ಗಾಂಧಾರಿ ವಿದ್ಯಾಪ್ರವೀಣೆ ಮನ್ವಿತಾ ಆನಂದ ಪಟ್ಟಣಶೆಟ್ಟಿ ಇವರನ್ನು ಗೌರವಿಸಲಾಯಿತು. ಮುಖಂಡರಾದ ಬಿ.ಜಿ.ಹೊಸೂರ, ಆನಂದ ಪಟ್ಟಣಶೆಟ್ಟಿ, ಶಶಿಧರ ನಕಾತಿ, ಪಿ.ಜಿ.ಅಂಗಡಿ, ಸುರೇಶ ಮಡಿವಾಳ, ಸಂಗಣ್ಣವರ ವಕೀಲ, ನಾಗಪ್ಪ ಹುಣಶ್ಯಾಳ, ಬಾಲಕೃಷ್ಣ ಮಾಳವಾದೆ ಇತರರಿದ್ದರು. ಪತ್ರಕರ್ತ ನಾರನಗೌಡ ಉತ್ತಂಗಿ ನಿರೂಪಿಸಿದರು.