ಯೋಗವು ಸಂತೋಷದ ಹೆಬ್ಬಾಗಿಲು: ಶ್ರೀಶೈಲಗೌಡ
Yoga is the gateway to happiness: Srisailagowda
ಸಿಂದಗಿ 22: ಯೋಗವು ಸಂತೋಷದ ಹೆಬ್ಬಾಗಿಲು. ಆರೋಗ್ಯಕರ ಮನಸ್ಸಿನ ರಹಸ್ಯವಾಗಿದೆ. ಆತ್ಮಸ್ಥೈರ್ಯ ವೃದ್ಧಿ, ಮಾನಸಿಕ ನೆಮ್ಮದಿ, ಉತ್ತಮ ಆರೋಗ್ಯಕ್ಕಾಗಿ ನಮ್ಮ ದೈನಂದಿನ ಕಾರ್ಯಚಟುವಟಿಕೆಗಳಲ್ಲಿ ಯೋಗಭ್ಯಾಸವನ್ನು ಅಳವಡಿಸಿಕೊಳ್ಳಬೇಕೆಂದು ಬಿಜೆಪಿ ಮುಖಂಡ ಶ್ರೀಶೈಲಗೌಡ ಬಿರಾದಾರ ಮಾಗಣಗೇರಿ ಹೇಳಿದರು.
ಸಿಂದಗಿ ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆಯ ಆವರಣದಲ್ಲಿ ಎ.ಪಿ.ಎಮ್.ಸಿ ಯೋಗಾ ಗ್ರೂಪ್ ವತಿಯಿಂದ ಆಯೋಜಿಸಿರುವ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಸಸಿಗೆ ನೀರು ಉಣಿಸುವುದರ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು, ಪತಂಜಲಿ ಮಹಾಮುನಿಗಳಿಂದ ರಚನೆಯಾದ ಜಗತ್ತಿನ ಅತ್ಯುತ್ತಮ ವಿದ್ಯೆ ಎಂದರೆ ಯೋಗಶಾಸ್ತ್ರ. ಭಾರತದ ಈ ಪುರಾತನ ವಿದ್ಯೆಯನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ದ ಹಾಗೂ ಜಗತ್ತಿಗೆ ಯೋಗ ದಿನಾಚರಣೆಯನ್ನು ಪರಿಚಯಿಸಿದ ಕೀರ್ತಿ ಪ್ರಧಾನಿ ಮೋದಿ ಅವರಿಗೆ ಸಲ್ಲುತ್ತದೆ. ದೈನಂದಿನ ಜೀವನದ ಅವಿಭಾಜ್ಯ ಅಂಗವಾಗಿರುವ ಯೋಗ ಶಾರೀರಿಕ-ಮಾನಸಿಕ ಸಮತೋಲನಕ್ಕೆ ಉತ್ತಮ ಮಾರ್ಗ ಎಂದರು.
ಬಿ.ಜಿ.ಪಾಟೀಲ, ಡಾ.ಚಿದಾನಂದ ಅರಳಗುಂಡಗಿ, ಮಲ್ಲಿಕಾರ್ಜುನ ವಾರದ, ಬಿ.ಜಿ.ಕಕ್ಕಳಮೇಲಿ, ಸಂಗಮೇಶ ಕುಂಬಾರ, ಸಿದ್ದಣ ಪುಜಾರಿ, ಡಾ.ಪ್ರಕಾಶ ಉಪ್ಪಿನ, ಶಂಕರಗೌಡ ಬನ್ನೆಟ್ಟಿ, ಎಸ್.ಎಮ್.ಯಳಮೇಲಿ, ವಿಜಯಕುಮಾರ ಪತ್ತಾರ, ಹಾಗೂ ಎಪಿಎಮ್‌ಸಿ ಯೋಗ ಗ್ರೂಪ್ ಸದಸ್ಯರು ಇದ್ದರು.
ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಜೋಡಿ ಕೊಲೆ : ಗ್ರಾಮದಲ್ಲಿ ತ್ವೇಷಮಯ ವಾತಾವರಣ
ಪುನರ್ ಅಭಿವೃದ್ಧಿಗೊಂಡ ಚೆನ್ನೈ ಪಾರ್ಕ್ ಅಮೃತ್ ರೈಲು ನಿಲ್ದಾಣವನ್ನು ಜುಲೈ 17ರಂದು ಉದ್ಘಾಟಿಸಲಿರುವ ಪ್ರಧಾನಿ ಮೋದಿ
ಅನಾಮಧೇಯ ಶವ ಪತ್ತೆ: ಮಹಿಳೆ ಕೊಲೆ ಪ್ರಕರಣ ಭೇದಿಸಿದ ಸಂಕೇಶ್ವರ ಪೊಲೀಸರು : ಆರೋಪಿ ಬಂಧನ
ಶಿವಕುಮಾರ್–ಸಿದ್ದರಾಮಯ್ಯ ಚರ್ಚೆ; ಕರ್ನಾಟಕ ಸಂಪುಟ ವಿಸ್ತರಣೆ ಕುರಿತ ಊಹಾಪೋಹಗಳಿಗೆ ಮತ್ತಷ್ಟು ಬಲ
ಶ್ರೀವಾರಿ ದರ್ಶನ, ವಸತಿ ಹಾಗೂ ಸೇವೆಗಳ ಬುಕ್ಕಿಂಗ್ಗೆ ಅಧಿಕೃತ ಟಿಟಿಡಿ ವೆಬ್ಸೈಟ್ನ್ನೇ ಬಳಸುವಂತೆ ಭಕ್ತರಿಗೆ ಟಿಟಿಡಿ ಮನವಿ
ಗಿಲ್ ಗಾಯದ ಆತಂಕದ ನಡುವೆ ಭಾರತಕ್ಕೆ ಏಕದಿನ ಸರಣಿ ಗೆಲ್ಲುವ ಅವಕಾಶ 