ಡಾ. ಪ್ರಭಾಕರ ಕೋರೆ ಕ್ರೆಡಿಟ್ ಸಂಸ್ಥೆ ಯಡೂರ ಶಾಖೆಯ ವರ್ಷಾಚರಣೆ

ಮಾಂಜರಿ 22: ಗ್ರಾಮೀಣ ಭಾಗದಲ್ಲಿರುವ ಕೆರೆ ಸರ್ವಸಾಮಾನ್ಯ ಜನರ ಜೊತೆಗೆ ರೈತರ ಅನುಕೂಲಕ್ಕಾಗಿ ಮಾಜಿ ರಾಜ್ಯಸಭಾ ಸದಸ್ಯ ಹಾಗೂ ಪ್ರತಿಷ್ಠಿತ ಕೆಎಲ್‌ಇ ಶಿಕ್ಷಣ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ ಪ್ರಭಾಕರ ಕೋರೆ ಇವರ ಮಾರ್ಗದರ್ಶನದಲ್ಲಿ ಮತ್ತು ಸಹಕಾರಿ ಪರ ರಂಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಅಂಕಲಿಯ ಡಾ. ಪ್ರಭಾಕರ ಕೋರೆ ಕ್ರೆಡಿಟ್ ಸಂಸ್ಥೆಯು ಹಲವಾರು ಜನಪರ ಯೋಜನೆಗಳನ್ನು ನೀಡಿ ರೈತರ ಆರ್ಥಿಕ ಸಂಕಷ್ಟನ್ನು ಬಗೆಹರಿಸುವ ಜೊತೆಗೆ ನಿರುದ್ಯೋಗಿ ಯುವಕರಿಗೆ ಉದ್ಯೋಗಾವಕಾಶಕ್ಕಾಗಿ ಅರ್ಥ ಸಹಾಯ ಮಾಡಲಾಗಿದೆ ಎಂದು ಡಾ ಪ್ರಭಾಕರ್ ಕೋರೆ ಕ್ರೆಡಿಟ್ ಸೊಸೈಟಿಯ ನಿರ್ದೇಶಕ ಡಾ ಸುಕುಮಾರ್ ಚೌಗುಲೆ ಹೇಳಿದರು. 

ಅವರು ಇಂದು ಯಡೂರ ಗ್ರಾಮದಲ್ಲಿ ಡಾ.ಪ್ರಭಾಕರ ಕೋರೆ ಕ್ರೆಡಿಟ್ ಸಹಕಾರಿ ಸಂಸ್ಥೆಯ 9ನೇ ವರ್ಷಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಪೂಜೆಯನ್ನು ನೆರವೇರಿಸಿ ಮಾತನಾಡುತ್ತಿದ್ದರು. ಸಂಸ್ಥೆಯ ಉಪಾಧ್ಯಕ್ಷ ಸಿದ್ಧಗೌಡ ಮಗದುಮ್ ಮಾತನಾಡಿ ಯಡೂರ ಶಾಖೆಯು 10.66 ಕೋಟಿ ರೂ. ಠೇವಣಿಯನ್ನು ಸಂಗ್ರಹಿಸಿದ್ದು, ರೈತ ಹಾಗೂ ಸದಸ್ಯರಿಗಾಗಿ 7 ಕೋಟಿ ರೂ. ಸಾಲವನ್ನು ಹಂಚಲಾಗಿದ್ದು, ಈ ವರ್ಷ ಶಾಖೆಯು 22.99 ಲಕ್ಷ ರೂ. ನಿವ್ವಳ ಲಾಭವನ್ನು ಗಳಿಸಲಾಗಿದೆ ಎಂದು ಹೇಳಿದರು. 

ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ದೇವೇಂದ್ರ ಕರೋಶಿ, ಯಡೂರ ಶಾಖೆಯ ಸಲಹಾಗಾರ ಅಮೀತ ಪಾಟೀಲ, ರಾಹುಲ ದೇಸಾಯಿ, ಲಕ್ಷ್ಮಣ ಉಮರಾಣೆ, ಜ್ಞಾನದೇವ ಮಟಕೆ, ಅವಿನಾಶ ರಾಠೋಡ, ಸಂದೀಪ ಮೋಹಿತೆ, ರಾಜು ಹಕಾರೆ, ಸಂಜಯ ಚವ್ಹಾಣ, ಅನೀಲ ಸೌಂದತ್ತೆ, ಶಿವಗೌಡ ಪಾಟೀಲ, ಅಜೀತ ಉಮರಾಣೆ, ಬಾಳು ಕೋಳಿ ಪ್ರಕಾಶ್ ಗಿಡ್ಡ ಲಕ್ಷ್ಮಣ್ ಉಮರಾಣೆ ಗಿರಿಮಲ್ ಅಮ್ಮನಿಗೆ ಅಣ್ಣಸಾಹೇಬ ಮಾನೆ ಹಾಗೂ ಇನ್ನಿತರರು, ಶಾಖೆಯ ವ್ಯವಸ್ಥಾಪಕ ಹಾಗೂ ಕಾರ್ಮಿಕರು ಹಾಜರಿದ್ದರು.