ಯಲ್ಲಮ್ಮ ದೇವಿ, ಹನುಮಾನ ದೇಗುಲದಲ್ಲಿ ವಿಶೇಷ ಪೂಜಾ ಕೈಂಕರ್ಯ

ಉಗರಗೋಳ 22: ಅಯೋಧ್ಯೋಯಲ್ಲಿ ನಡೆದ ಶ್ರೀರಾಮನ ಮೂರ್ತಿ ಪ್ರತಿಷ್ಠಾಪಣೆ ಅಂಗವಾಗಿ ಸಮೀಪದ ಯಲ್ಲಮ್ಮನ ಗುಡ್ಡದಲ್ಲಿ ಸೋಮವಾರ ಯಲ್ಲಮ್ಮ ದೇವಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಯಲ್ಲಮ್ಮಾ ದೇವಿ ಪ್ರಾಂಗಣದಲ್ಲಿರುವ ಹನುಮಾನ ದೇಗುಲದಲ್ಲಿ ಪೂಜಾ ಕೈಂಕರ್ಯ ನೆರವೇರಿದವು. 

ರಾಜ್ಯ ಹಾಗೂ ಹೊರ ರಾಜ್ಯಗಳಿಂದ ಬಂದಿದ್ದ ಭಕ್ತರು ಯಲ್ಲಮ್ಮಾ ದೇವಿ ಹಾಗೂ ರಾಮನ ಭಾವ ಚಿತ್ತಕ್ಕೆ ಪೂಜೆ ಸಲ್ಲಿಸಿದರು. ಶ್ರೀರಾಮನ ಮೂರ್ತಿ ಪ್ರತಿಷ್ಠಾಪಣೆ ಅಂಗವಾಗಿ ಸಪ್ತ ಕೊಳ್ಳಗಳ ನೆಲದಲ್ಲಿಯ್ಲೂ ಸಂಭ್ರಮ ಮನೆ ಮಾಡಿತ್ತು, ಯಲ್ಲಮ್ಮನ ದೇವಸ್ಥಾನ ವತಿಯಿಂದ ಭಕ್ತರಿಗೆ ಸಿಹಿ ಹಂಚಲಾಯಿತು. 

ದೇವಸ್ಥಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ದೇವಸ್ಥಾನ ಕಾರ್ಯನಿರ್ವಾಹಕ ಅಧಿಕಾರಿ ಎಸ್‌ಪಿಬಿ ಮಹೇಶ, ಐತಿಹಾಸಿಕ ದಿನದಂದು ರಾಮ ಮಂದಿರವು ಬೆಳಕಿನ ದಾರಿಯಾಗಲಿ, ಸಹೋದರತ್ವದ ಮನೋಭಾವವು ಮೇಲುಗೈ ಸಾಧಿಸುವ ಮೂಲಕ ಶ್ರೀ ರಾಮನ ಆದರ್ಶಗಳು ಪ್ರತಿಯೊಬ್ಬ ಭಾರತೀಯನ ಹೃದಯದಲ್ಲಿ ಪ್ರತಿಧ್ವನಿಸಲಿ ಎಂದರು. 

ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಕೊಳ್ಳಪ್ಪಗೌಡ ಗಂದಿಗವಾಡ, ವಾಯ್ ವಾಯ್ ಕಾಳಪ್ಪನವರ, ಅಧೀಕ್ಷಕರಾದ ನಾಗರತ್ನಾ ಚೋಳಿನ, ಸಂತೋಷ ಶಿರಸಂಗಿ, ಎಸ್ ಎಲ್ ಯಲಿಗಾರ, ಡಿ ಆರ್ ಚವ್ಹಾಣ, ಅಲ್ಲಮಪ್ರಭು ಪ್ರಭುನವರ, ಆರ್ ಎಚ್ ಸವದತ್ತಿ, ಎಸ್ ಆರ್ ಪವಾರ, ಪ್ರಭು ಹಂಜಗಿ, ಶಿಂತ್ರಿ ಮಾಮಾ, ರಾಜು ಬೆಳವಡಿ, ಭೀಮಣ್ಣಾ ಭಾರ್ಕಿ, ಎಮ್ ಪಿ ಧ್ಯಾಮನಗೌಡ್ರ, ಎಎಸ್‌ಆಯ್ ಎಸ್ ಆರ್ ಗಿರಿಯಾಲ, ಗೋವಿಂದರಾವ್ ಕುಲಕರ್ಣಿ, ಅನೀಲ ಗುಡಿಮನಿ,ಅರ್ಚಕ ಯಡೂರಯ್ಯ, ಪಿ ರಾಜಶೇಖರಯ್ಯ ಹಾಗೂ ದೇವಸ್ಥಾನ ಸಿಬ್ಬಂದಿ ಭಕ್ತರು ಇದ್ದರು.