ವಿಜಯ ಸಂಕಲ್ಪ ಮಹಾ ಅಭಿಯಾನಕ್ಕೆ ಯಾದವಾಡ ಚಾಲನೆ

ರಾಮದುರ್ಗ 08: ತಾಲೂಕಿನ ಸಮಗ್ರ ಅಭಿವೃದ್ಧಿಗೆ ರೂ. 2800 ಕೋಟಿ ಅನುದಾನ ಮಂಜೂರ ಮಾಡಿಸಿ ಪ್ರತಿ ಗ್ರಾಮಗಳಲ್ಲಿಯೂ ಅಭಿವೃದ್ಧಿ ಕಾಮಗಾರಿ ಮಾಡಿದ್ದೆನೆ, ಆ ಕಾಮಗಾರಿಗಳ ಪಟ್ಟಿ ಮಾಡಿ ಮತದಾರರಿಗೆ ತಿಳಿಸಬೇಕು ಹಾಗೂ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಪ್ರಚಂಡ ಬಹುಮತದಿಂದಾ ಗೆಲ್ಲಿಸಲು ಕಾರ್ಯಕರ್ತರು ಶ್ರಮಿಸಬೇಕು ಎಂದು ಶಾಸಕ ಮಹಾದೇವಪ್ಪ ಯಾದವಾಡ ಕರೆ ನೀಡಿದರು.  

ತಾಲೂಕಿನ ಮುದಕವಿ ಗ್ರಾಮದ ವೀರಭದ್ರೇಶ್ವರನಿಗೆ ಪೂಜೆ ಸಲ್ಲಿಸಿ 2023 ರ ವಿಧಾನಸಭಾ ಚುನಾವಾಣೆ ಪ್ರಚಾರ ಹಾಗೂ ವಿಜಯ ಸಂಕಲ್ಪ ಮಹಾಅಭಿಯಾನಕ್ಕೆ  ಚಾಲನೆ ಮಾತನಾಡಿ, ತಾಲೂಕಿನಲ್ಲಿ 5 ವರ್ಷದಲ್ಲಿ ಒಂದು ಹಿಂದು ಮುಸ್ಲಿಂ ಕೇಸು ದಾಖಲಾಗದೆ ಕ್ಷೇತ್ರ ಶಾಂತಿವಾಗಿದೆ. ಮಾಜಿ ಶಾಸಕರ ಹತ್ತು ವರ್ಷದ ಅವಧಿಯಲ್ಲಿ ಸಾವಿರಾರು ಕೇಸುಗಳು ದಾಖಲಾಗಿ ಕ್ಷೇತ್ರದಲ್ಲಿ ಅಶಾಂತಿ ಶೃಷ್ಠಿಸಿದ್ದು ಮಾಜಿ ಶಾಸಕರ ಸಾಧನೆಯಾಗಿದೆ ಎಂದು ಛೇಡಿಸಿದರು. ಕೊರೊನಾ ಮತ್ತು ಅತಿವೃಷ್ಟಿಯಿಂದಾ ಸರಕಾರ ಆರ್ಥಿಕ ಹೊಡೆತ ಬಿದ್ದರು ತಾಲೂಕಿನ ಪ್ರತಿ ಗ್ರಾಮಗಳಿಗೆ ಮೂಲಭೂತ ಸೌಲಭ್ಯ ಮತ್ತು ಗುಣಾತ್ಮಕ ಶಿಕ್ಷಣ ನೀಡುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಿದ್ದೆನೆ ಎಂದು ಹರ್ಷ ವ್ಯಕ್ತಪಡಿಸಿದರು.   

ಧನಲಕ್ಷೀ ಕಾರ್ಖಾನೆ ಅಧ್ಯಕ್ಷ ಮಲ್ಲಣ್ಣಾ ಯಾದವಾಡ ಮಾತನಾಡುತ್ತಾ ಬೇರೆ ಕ್ಷೇತ್ರದ ಜನತೆಗೆ ನಮ್ಮ ತಾಲೂಕಿನ  ಜನತೆ ಮನಿ ಹಾಕಬಾರದು ಎಂದು ಮನವಿ ಮಾಡಿದ ಅವರು ಸುಮಾರು 5 ವರ್ಷ ತಾಲೂಕಿನ ಕಡೆ ಮುಖ ಮಾಡದೇ ಬೆಂಗಳೂರಿನಲ್ಲಿ ಬಿಡು ಬಿಟ್ಟಿರುವ ಮಾಜಿ ಶಾಸಕರು ಸಾಮಾನ್ಯ ಜನರಿಗೆ ಸಿಗುವುದೇ ವಿರಳ, ಆದರೆ ಶಾಸಕ ಮಹಾದೇವಪ್ಪ ಯಾದವಾಡ ಸಾಮನ್ಯರಲ್ಲಿ ಸಾಮನ್ಯರಾಗಿ ತಾಲೂಕಿನ ಅಭಿವೃದ್ದಿಗೆ ಶ್ರಮಿಸಿದ್ದಾರೆ ಎಂದು ಹೇಳಿದರು.  

ಬಿಜಿಪಿ ಮಂಡಲ ಅಧ್ಯಕ್ಷ ರಾಜೇಶ ಬೀಳಗಿ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಮಾರುತಿ ಕೊಪ್ಪದ, ವಕೀಲ ಸಂಘದ ಅಧ್ಯಕ್ಷ ಆರ್ ಜಿ ವಜ್ರಮಟ್ಟಿ, ಬಿ ಎನ್ ದಳವಾಯಿ ಹಾಗೂ ಜಗದೀಶ ಲಾಹೋಟಿ ಮಾತನಾಡಿದರು.  

ಪುರಸಭೆ ಅಧ್ಯಕ್ಷ ರೇನಕೆ, ಡಿ ಸಿ ಸಿ ಬ್ಯಾಂಕ್ ನಿರ್ದೇಶಕ ಎಸ್ ಎಸ್ ಢವಣ, ಬಿ ಎನ್ ತುಪ್ಪದ  ಜಾನಪ್ಪ ಹಕಾಟಿ, ಮಾಜಿ ಜಿಪಂ ಸದಸ್ಯ ನಿಂಗಪ್ಪ ಮೆನವಂಕಿ, ಬಿ ಬಿ ಹಂಜಿ, ಗ್ರಾ ಪಂ ಅಧ್ಯಕ್ಷ ಮಹಾದೇವ ಹೊಗನ್ನವರ, ಎಮ್ ಜಿ ಚಿಕ್ಕೂರಮಠ ಹಾಗೂ ಇತರರು ಉಪಸ್ಥಿತರಿದ್ದರು.